ಭಾನುವಾರ, ಜೂನ್ 15, 2025
HomeCinemaActor Ambareesh's birthday : ಅಂಬಿ ಅಪ್ಪಾಜಿ ಪ್ರೀತಿ ಆದರ್ಶ ಇಂದಿನ ಪೀಳಿಗೆಗೆ ಮಾದರಿ ಎಂದ...

Actor Ambareesh’s birthday : ಅಂಬಿ ಅಪ್ಪಾಜಿ ಪ್ರೀತಿ ಆದರ್ಶ ಇಂದಿನ ಪೀಳಿಗೆಗೆ ಮಾದರಿ ಎಂದ ನಟ ದರ್ಶನ್‌

- Advertisement -

ಸ್ಯಾಂಡಲ್‌ವುಡ್‌ ರೆಬೆಲ್‌ ಸ್ಟಾರ್‌, ಹಿರಿಯ ನಟ ಅಂಬರೀಶ್‌ (Actor Ambareesh’s birthday) ಅವರಿಗೆ 71ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ನಟ ಅಂಬರೀಶ್‌ ಜನ್ಮದಿನದಂದು ಕನ್ನಡ ಸಿನಿರಂಗದ ಸಿನಿತಾರೆಯರು, ಕುಟುಂಬಸ್ಥರು, ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಸ್ಮರಿಸಿಕೊಂಡಿದ್ದಾರೆ. ಇನ್ನು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕೂಡ ಹಿರಿಯ ನಟ ಅಂಬರೀಶ್‌ ಅವರ ಜನ್ಮದಿನವನ್ನು ನೆನಪಿಸಿಕೊಂಡು ಶುಭ ಕೋರಿದ್ದಾರೆ.

ನಟ ದರ್ಶನ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಜನ್ಮದಿನಾಚರಣೆಯನ್ನು ಎಂದು ಮರೆಯಲಾಗದು. ದೈಹಿಕವಾಗಿ ಅಗಲಿದರೂ ಮಾನಸಿಕವಾಗಿ ನಮ್ಮ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ. ಅವರ ನೇರ ನುಡಿ ಹಾಗೂ ಕಾಪಾಡಿಕೊಂಡು ಬಂದ ಪ್ರೀತಿ-ಆದರ್ಶಗಳು ಇಂದಿನ ಪೀಳಿಗೆಗೂ ಮಾದರಿ. We all miss him” ಎಂದು ಕಾರಿನಲ್ಲಿ ಅಂಬರೀಶ್‌ ಜೊತೆಗೆ ಕುಳಿತುಕೊಂಡಿರುವ ಪೋಟೋದೊಂದಿಗೆ ಪೋಸ್ಟ್‌ ಮಾಡಿದ್ದಾರೆ.

ಇತ್ತೀಚೆಗೆ ಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಂಡಿರುವ ನಟ ದರ್ಶನ್‌ ಮತ್ತೆ ವೃತ್ತಿ ಜೀವನದ ಕಡೆಗೆ ಮುಖ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಟ ದರ್ಶನ್‌ ಮುಂದಿನ ಐದು ವರ್ಷಗಳವೆಗೂ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನು ನಟ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಕಳೆದ ಜನವರಿಯಲ್ಲಿ ತೆರೆಕಂಡ ಕ್ರಾಂತಿ ಸಿನಿಮಾದ ನಂತರ ಕಾಟೇರ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಇದನ್ನೂ ಓದಿ : Puneeth Rajkumar Tattoo : ಎದೆ ಮೇಲೆ ಅಪ್ಪು ಟ್ಯಾಟೂ ಮೂಲಕ ಪುನೀತ್ ರಾಜ್‌ ಕುಮಾರ್‌ ಗೆ ರಾಘಣ್ಣನ ವಿಶಿಷ್ಟ ಗೌರವ

ಈ ಸಿನಿಮಾವು 70ರ ದಶಕದ ಕಾಲಘಟ್ಟದ ಕಥಾಹಂದರವನ್ನು ಒಳಗೊಂಡಿದ್ದು, ಈ ಹಿಂದೆ ಸರಕಾರ ಜಾರಿಗೆ ತಂದ ಉಳುವವನೇ ಹೊಲದೊಡಯ ಕಾಯ್ದೆಯಿಂದ ರೈತರಿಗೆ ಏನೆಲ್ಲಾ ಸಂಕಷ್ಟ ಎದುರಿಸಿದ್ದಾರೆ ಎನ್ನುವುದನ್ನು ಈ ಸಿನಿಮಾ ಮೂಲಕ ಹೇಳಲಾಗುತ್ತದೆ. ಈ ಕುರಿತಂತೆ ಸ್ವತಃ ನಟ ದರ್ಶನ್‌ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಲುಂಗಿ ಉಟ್ಟು ಬಹಳ ವಿಭಿನ್ನವಾದ ಲುಕ್‌ನಲ್ಲಿ ನಟ ದರ್ಶನ್‌ ಕಾಣಿಸಿಕೊಂಡಿದ್ದಾರೆ.

Actor Ambareesh’s birthday: Actor Darshan says that Ambi Appaji Preeti Adarsh is a role model for today’s generation.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular