Actor Darshan : ಚಿತ್ರದುರ್ಗದ ರೇಣುಕಾ ಸ್ವಾಮಿ (Renukaswami Murder Case) ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹತ್ಯೆ ಪ್ರಕರಣ ಇದೀಗ ದರ್ಶನ್ ಸಿನಿ ಕರಿಯರ್ ಮೇಲೆ ದುಷ್ಪರಿಣಾಮ ಬೀರಿದೆ. ಇಂದು ಕರ್ನಾಟಕ ಫಿಲ್ಮ್ ಚೇಂಬರ್ ಸಭೆ ನಡೆಯಲಿದ್ದು, ದರ್ಶನ್ ಬ್ಯಾನ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನಟ ದರ್ಶನ್ ವಿರುದ್ದ ಈ ಹಿಂದೆಯೂ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ನಿನ್ನೆಯಷ್ಟೇ ಸಾರಾ ಗೋವಿಂದ್ ನಟ ದರ್ಶನ್ ನಡವಳಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಅಣ್ಣಾವ್ರು ಕಟ್ಟಿರುವ ಕನ್ನಡ ಚಲನಚಿತ್ರ ರಂಗದಲ್ಲಿ ಹಲವು ನಟ, ನಟಿಯರು ದೇಶದ ವಿದೇಶಗಳಲ್ಲಿಯೂ ಪ್ರಖ್ಯಾತಿಗಳಿಸಿದ್ದಾರೆ. ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಷ್ ಅವರನ್ನು ನೋಡಿ ಕಲಿಯಿರಿ ಎಂದು ಹೇಳಿದ್ದರು.
ದರ್ಶನ್ ತೂಗುದೀಪ್ ಅರೆಸ್ಟ್ ಆದ ಬೆನ್ನಲ್ಲೇ ಇಂದು ಕರ್ನಾಟಕ ಫೀಲ್ಮ್ ಛೇಂಬರ್ ಸಭೆ ನಡೆಯಲಿದ್ದು, ಸಭೆಯಲ್ಲಿ ಎಲ್ಲಾ ಚುನಾಯಿತ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಒಮ್ಮತದ ತೀರ್ಮಾನ ವ್ಯಕ್ತವಾದ್ರೆ ದರ್ಶನ್ ಕನ್ನಡ ಚಲನಚಿತ್ರ ರಂಗದಿಂದ ಬ್ಯಾನ್ ಆಗುವ ಸಾಧ್ಯತೆಯಿದೆ. ಆದರೆ ಸಭೆಯ ನಂತರಷ್ಟೇ ದರ್ಶನ್ ವಿರುದ್ದ ಯಾವ ಕ್ರಮಕೈಗೊಳ್ಳಲಾಗುತ್ತೆ ಅಂತಾ ಹೇಳಲಾಗುತ್ತದೆ.
ಇದನ್ನೂ ಓದಿ : ಎ ಸಿನಿಮಾ ಸುಂದರಿ ಈಗ ಡಾಕ್ಟರ್: ಚಾಂದಿನಿ ಚಮಕ್ ಕಂಡು ಬೆರಗಾದ ಚಂದನವನ
ನಟ ದರ್ಶನ್ ಈ ಹಿಂದೆ ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ನಂತರದಲ್ಲಿ ದರ್ಶನ್ ಒಂದಿಲ್ಲೊಂದು ಅಪರಾಧವನ್ನು ಎಸಗುವ ಮೂಲಕ ಕುಖ್ಯಾತಿ ಪಡೆದುಕೊಂಡಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಪಾಲ್ಗೊಂಡಿರುವುದು ಕನ್ನಡ ಚಿತ್ರರಂಗದ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಏನಿದು ರೇಣುಕಾಸ್ವಾಮಿ ಕೊಲೆ ಪ್ರಕರಣ ?
ನಟ ದರ್ಶನ್ ಗೌಡ ಆಪ್ತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದ. ಇದರಿಂದ ಕೆರಳಿದ ನಟ ದರ್ಶನ್ ಆಂಡ್ ಟೀಮ್ ಆತನನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಬೆಂಗಳೂರಿಗೆ ಕರೆತಂದಿತ್ತು. ನಂತರದ ಶೆಡ್‌ವೊಂದರಲ್ಲಿ ಆತನನ್ನು ಕೂಡಿ ಹಾಕಿ ಅಮಾನುಷವಾಗಿ ಥಳಿಸಿತ್ತು. ಆತನ ಮರ್ಮಾಂಗದ ಮೇಲೆ ಹಲ್ಲೆ ನಡೆಸಿದ್ದು, ತಲೆ, ಬೆನ್ನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ.
ಇದನ್ನೂ ಓದಿ : Darshan – Vijayalakshmi : ಪವಿತ್ರಾ ಜೊತೆ ಮುಗಿಯದ ದರ್ಶನ್
ನಂಟು: ಡಿವೋರ್ಸ್ ನತ್ತ ವಿಜಯಲಕ್ಷ್ಮಿ ಹೆಜ್ಜೆ
ಘಟನೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ. ಹತ್ಯೆ ಮಾಡಿದ ನಂತರದಲ್ಲಿ ಆತನ ಶವವನ್ನು ಸುಮನಹಳ್ಳಿ ಬಳಿಯಲ್ಲಿರುವ ರಾಜಾಕಾಲುವೆಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಆದರೆ ಈ ಕೊಲೆ ಪ್ರಕರಣದ ಧಿಕ್ಕು ತಪ್ಪಿಸಲು ಯತ್ನಿಸಿದ ನಟ ದರ್ಶನ್ ಇದೀಗ ಬೆಂಗಳೂರು ಪೊಲೀಸರ ಕೈಯಲ್ಲಿ ಬಂಧಿಯಾಗಿದ್ದಾನೆ. ಸದ್ಯ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಒಟ್ಟು 17 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದ್ದು, 13 ಮಂದಿಯನ್ನು ಪೊಲೀಸರು ಬಂಧಿಸಿದ್ದು, 4 ಮಂದಿ ನಾಪತ್ತೆಯಾಗಿದ್ದಾರೆ.
Actor Darshan Cinema Career trouble, Challenging Star banned from Sandalwood Chitradurga Renukaswami Murder Case