Darshan Thoogudeepa : ನಟ ದರ್ಶನ್‌ ಜೈಲು ಸೇರಿದ ಬೆನ್ನಲ್ಲೇ ಮತ್ತೊಂದು ಸಂಕಷ್ಟ

Darshan Thoogudeepa : ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ್‌ ರೇಣುಕಾಸ್ವಾಮಿ (Renuka Swami)  ಕೊಲೆ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ರೆ, ಇನ್ನೊಂದೆಡೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಡಿಬಾಸ್‌ ಬೆನ್ನುಬಿದ್ದಿದ್ದಾರೆ.

Darshan Thoogudeepa : ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ್‌ ರೇಣುಕಾಸ್ವಾಮಿ (Renuka Swami)  ಕೊಲೆ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ರೆ, ಇನ್ನೊಂದೆಡೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಡಿಬಾಸ್‌ ಬೆನ್ನುಬಿದ್ದಿದ್ದಾರೆ. ಸದ್ಯ ಕೊಲೆ ಪ್ರಕರಣ ತನಿಖೆಯ ಬೆನ್ನಲ್ಲೆ ಶವ ಸಾಗಾಟಕ್ಕೆ ನೀಡಿದ್ದ 30 ಲಕ್ಷ ರೂಪಾಯಿ ಹಾಗೂ ಅಭಿಮಾನಿಗಳ ಮನೆಯಲ್ಲಿ ದೊರೆತ 73 ಲಕ್ಷ ರೂಪಾಯಿ ಹಣದ ಮೂಲದ ತನಿಖೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಳಿದಿದ್ದಾರೆ.

Actor Darshan Thoogudeepa
Image Credit to Original Source

ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ದರ್ಶನ್‌ ಜೊತೆಗೆ ಗೆಳತಿ ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳು ಕೂಡ ಇದೇ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹಿಂಸಿಸಿ, ಹತ್ಯೆ ಮಾಡಿದ ಬೆನ್ನಲ್ಲೇ ದರ್ಶನ್‌ ಆಂಡ್‌ ಗ್ಯಾಂಗ್‌ ಪೊಲೀಸರ ಕೈಯಲ್ಲಿ ಬಂಧಿಯಾಗಿತ್ತು. ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಂತೆಯೇ ಒಂದೊಂದೇ ವಿಚಾರಗಳು ಬಯಲಿಗೆ ಬಂದಿತ್ತು. ರೇಣುಕಾಸ್ವಾಮಿ ಹತ್ಯೆಯ ಬಳಿಕ ಶವ ಸಾಗಾಟಕ್ಕೆ ದರ್ಶನ್‌ 30 ಲಕ್ಷ ರೂಪಾಯಿ ನೀಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : ಎ ಸಿನಿಮಾ ಸುಂದರಿ ಈಗ ಡಾಕ್ಟರ್: ಚಾಂದಿನಿ ಚಮಕ್ ಕಂಡು ಬೆರಗಾದ ಚಂದನವನ

ಕೊಲೆಯ ಬೆನ್ನಲ್ಲೇ ದರ್ಶನ್‌ ಪತ್ನಿಯ ಮನೆಯಲ್ಲಿ ಹಣ ಸಿಕ್ಕಿದ್ದು, ಅಭಿಮಾನಿಗಳ ಮನೆಯಲ್ಲಿ ಸುಮಾರು 73 ಲಕ್ಷ ರೂಪಾಯಿ ಹಣ ದೊರೆತಿದೆ ಎನ್ನಲಾಗುತ್ತಿದೆ. ಈ ಕುರಿತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಣದ ಮೂಲದ ಪತ್ತೆಗೆ ಮುಂದಾಗಿದ್ದಾರೆ. ಒಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ್ದರೂ ಕೂಡ ದರ್ಶನ್‌ ತೂಗುದೀಪ್‌ಗೆ ಸಂಕಷ್ಟಗಳ ಸರಮಾಲೆ ಮಾತ್ರ ತೀರುತ್ತಿಲ್ಲ.

Actor Darshan and Renuka Swami
Image Credit to Original Source

ಏನಿದು ರೇಣುಕಾಸ್ವಾಮಿ ಪ್ರಕರಣ ?

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ, ದರ್ಶನ್‌ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ್ದಾನೆ. ಇದೇ ಕಾರಣದಿಂದಲೇ ರೇಣುಕಾಸ್ವಾಮಿ ಯನ್ನು ತನ್ನ ಅಭಿಮಾನಿ ಸಂಘದ ಅಧ್ಯಕ್ಷ ಹಾಗೂ ಅಭಿಮಾನಿಗಳನ್ನು ಬಳಸಿಕೊಂಡು ದರ್ಶನ್‌ ಕಿಡ್ನಾಪ್‌ ಮಾಡಿಸಿದ್ದ. ನಂತರ ಆತನನ್ನು ಬೆಂಗಳೂರಿಗೆ ಕರೆತಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ವಿದ್ಯುತ್‌ ಶಾಕ್‌ ನೀಡಿ, ಮರ್ಮಾಂಗಕ್ಕೆ ಹಲ್ಲೆ ನಡೆಸಿ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದರು.

ಇದನ್ನೂ ಓದಿ :Darshan – Vijayalakshmi : ಪವಿತ್ರಾ ಜೊತೆ ಮುಗಿಯದ ದರ್ಶನ್ ನಂಟು 

ರೇಣುಕಾಸ್ವಾಮಿ ಸಾವನ್ನಪ್ಪಿದ ಬಳಿಕ 30 ಲಕ್ಷ ರೂಪಾಯಿ ಸುಫಾರಿ ನೀಡಿ ಶವವನ್ನು ರಾಜಾಕಾಲುವೆ ಎಸೆಯಲಾಗಿತ್ತು. ಅಲ್ಲದೇ ಕೊಲೆ ಪ್ರಕರಣದಲ್ಲಿ ಶರಣಾಗತರಾಗುವ ಮೂವರು ಆರೋಪಿಗಳಿಗೆ 30 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂರು ಆರೋಪಿಗಳು ಪೊಲೀಸರಿಗೆ ಶರಣಾಗತರಾದ ಬೆನ್ನಲ್ಲೇ ಒಂದೊಂದೇ ವಿಚಾರ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ : ದರ್ಶನ್‌ ಬಂಧನದಿಂದ ನಿರ್ಮಾಪಕರಿಗೆ ಸಂಕಷ್ಟ : ದರ್ಶನ್‌ ಸಿನಿಮಾಕ್ಕಾಗಿ ಪಡೆದ ಹಣ ಎಷ್ಟು ಗೊತ್ತಾ ?

Actor Darshan Thoogudeepa s in another trouble after going to jail Indian actor

Comments are closed.