(Monsoon Raga)ನಟ ಡಾಲಿ ಧನಂಜಯ (Dolly Dhananjaya) ಹಾಗೂ ಗುಳ್ಳಿಕನ್ನೆ ಬೆಡಗಿ ರಚಿತಾ ರಾಮ್ (Rachitha Ram) ಅಭಿನಯದ “ಮಾನ್ಸೂನ್ ರಾಗ” ಸಿನಿಮಾ ಇಂದು ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. “ಮಾನ್ಸೂನ್ ರಾಗ” ರವೀಂದ್ರನಾಥ್ ನಿರ್ದೇಶನದಲ್ಲಿ ಅದ್ಬುತವಾಗಿ ಮೂಡಿ ಬಂದಿದೆ. ವಿಖ್ಯಾತ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ರಚಿತಾ ರಾಮ್, ಡಾಲಿ ಧನಂಜಯ್, ಸುಹಾಸಿನಿ ಮಣಿರತ್ನಂ, ಯಶಾ ಶಿವಕುಮಾರ್ ಅಚ್ಯುತ್ ಕುಮಾರ್ ಸೇರಿದಂತೆ ಖ್ಯಾತ ನಟರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಥಿಯೇಟರ್‌ಗಳ ಮುಂಭಾಗದಲ್ಲಿ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ.
Wishing the very best & success to #monsoonraga@Dhananjayaka @YashaShivakumar #releasingtoday #sep16 pic.twitter.com/nOc6HgPly9
— sd.vijay milton (@vijaymilton) September 15, 2022
“ಮಾನ್ಸೂನ್ ರಾಗ್ ” ಸಿನಿಮಾವು (Dolly Dhananjaya) ಡಾಲಿ ಧನಂಜಯ್ ಮತ್ತು ರಚಿತಾ ರಾಮ್(Rachitha Ram) ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಮೊದಲ ಸಿನಿಮಾ. ಡಾಲಿ ಧನಂಜಯ್ ಸಿನಿಮಾಗಳು ವಿಭಿನ್ನವಾಗಿದ್ದು, ಮಾನ್ಸೂನ್ ರಾಗಾ ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡಿತ್ತು. ವಿಭಿನ್ನ ಲವ್ ಸ್ಟೋರಿಯನ್ನು ಒಳಗೊಂಡ ಈ ಸಿನಿಮಾದಲ್ಲಿ ನಟ ಅಚ್ಯುತ್ ಕುಮಾರ್‌ಗೆ ಸುಹಾಸಿನಿ ಮಣಿರತ್ನಂ ಜೋಡಿಯಾಗಿ ನಟಿಸಲಿದ್ದಾರೆ. ನಟ ಅಚ್ಯುತ್ ಕುಮಾರ್‌ರವರಿಗೆ ಯಾವುದೇ ಪಾತ್ರ ಕೊಟ್ಟರೂ ಅದ್ಭುತ ನಟನೆಯಿಂದ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಈ ಸಿನಿಮಾದಲ್ಲಿ ಅವರು ಸುಹಾಸಿನಿಯವರೊಂದಿಗೆ ನಟನೆ ಜನರಿಗೆ ಇಷ್ಟವಾಗಿದೆ.
ಮಾನ್ಸೂನ್ ರಾಗ ಸಿನಿಮಾಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. (Dolly Dhananjaya) ಡಾಲಿ ಧನಂಜಯಯವರು ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಖ್ಯಾತರಾಗಿದ್ದರು. ಆದರೆ ಅವರು ಎಲ್ಲಾ ತರಹದ ಪಾತ್ರಗಳನ್ನು ನಿಭಾಯಿಸುತ್ತಾರೆ. ಬೇರೆ ಬೇರೆ ತರಹದ ಕಥೆ ಮತ್ತು ಪಾತ್ರಗಳನ್ನು ಸಹ ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ತೆರೆಕಂಡ “ರತ್ನನ್ ಪ್ರಪಂಚ” ಹಾಗೂ “ಬಡವ ರಾಸ್ಕಲ್” ನಂತಹ ಸಿನಿಮಾದಲ್ಲಿ ಉತ್ತಮ ನಾಯಕ ನಟನಾಗಿ ಕೂಡ ಕಾಣಿಸಿಕೊಂಡಿದ್ದಾರೆ. “ಮಾನ್ಸೂನ್ ರಾಗ್” ಕೂಡ ಅದೇ ರೀತಿಯ ಸಿನಿಮಾ ಸಾಲಿಗೆ ಸೇರುತ್ತದೆ.
ಇದನ್ನೂ ಓದಿ : “ಕೆಜಿಎಫ್” ನಟ ಯಶ್ ಹೊಸ ಲುಕ್ ವೈರಲ್
ಇದನ್ನೂ ಓದಿ : ಗ್ಲಾಸ್ ಹಿಡಿದು ಹೆಜ್ಜೆ ಹಾಕಿದ ಗಲೀ ಗಲೀ ಹುಡುಗಿ: ಮಾಲ್ಢೀವ್ಸ್ ನಲ್ಲಿ ಮೌನಿ ರಾಯ್ ಹವಾ
ಇದನ್ನೂ ಓದಿ : ಬ್ರಹ್ಮಾಸ್ತ್ರ ಸೂಪರ್ ಸಕ್ಸಸ್ : ರಾಷ್ತ್ರೀಯ ಸಿನಿಮಾ ದಿನ ಮುಂದೂಡಿಕೆ
ಅನೂಪ್ ಸಿಳೀನ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಅದ್ಬುತವಾಗಿ ಮೂಡಿಬಂದಿವೆ. ಸಿನಿಮಾದ ಹಾಡು ಯಶಾ ಶಿವಕುಮಾರ್ ಯೂಟ್ಯೂಬ್‌ನಲ್ಲಿ 20 ಲಕ್ಷಕ್ಕೂಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
Actor Dolly Dhananjaya’s movie “Monsoon Raga” is releasing across the state today