ಸ್ಯಾಂಡಲ್‌ವುಡ್ ನವರಸ ನಾಯಕ ಜಗ್ಗೇಶ್ ಅವರಿಗೆ ಇಂದು (ಮಾರ್ಚ್ 17) 59ನೇ ವರ್ಷದ ಹುಟ್ಟುಹಬ್ಬ (Actor Jaggesh’s birthday) ಸಂಭ್ರಮ. ನಟ ಜಗ್ಗೇಶ್ ಒಬ್ಬ ಭಾರತೀಯ ನಟ ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಹಿರಿಯ ನಟ ಜಗ್ಗೇಶ್ ಅವರಿಗೆ ನೆಚ್ಚಿನ ಅಭಿಮಾನಿಗಳು, ಸಿನಿತಾರೆಯರು ಹಾಗೂ ರಾಜಕೀಯ ಗಣ್ಯರು ಶುಭಾಶಯವನ್ನು ಕೋರಿದ್ದಾರೆ. ನಟ ಜಗ್ಗೇಶ್ ಅವರ ಮುಂದಿನ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಅವರು ನಿರ್ಮಾಣ ಮಾಡುತ್ತಿದ್ದು, ಅವರು ಬಹಳ ವಿಶೇಷವಾಗಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಗ್ರೂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ನಮ್ಮ ರಾಘವೇಂದ್ರ ಸ್ಟೋರ್ಸ್‌ನ ಖ್ಯಾತ ಬಾಣಸಿಗರಾದ ಜಗ್ಗೇಶ್ 2 ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನವಿರಾಗಿ ಸಿದ್ಧಪಡಿಸಿರುವ ನವರಸದೌತಣವನ್ನು ಏಪ್ರಿಲ್ 28, 2023 ರಂದು ನಿಮ್ಮ ಹತ್ತಿರದ ಸಿನಿಮಂದಿರಗಳಲ್ಲಿ ಉಣಬಡಿಸಿದ್ದೇವೆ. ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಇದೆ” ಎಂದು ಪೋಸ್ಟ್ ಮಾಡಿದ್ದಾರೆ.
ನಮ್ಮ ರಾಘವೇಂದ್ರ ಸ್ಟೋರ್ಸ್‌ನ ಖ್ಯಾತ ಬಾಣಸಿಗರಾದ @Jaggesh2 ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
— Hombale Group (@HombaleGroup) March 17, 2023
ನವಿರಾಗಿ ಸಿದ್ಧಪಡಿಸಿರುವ ನವರಸದೌತಣವನ್ನು ಏಪ್ರಿಲ್ 28, 2023ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಉಣಬಡಿಸಲಿದ್ದೇವೆ.
ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ. #RaghavendraStores April 28th Release. pic.twitter.com/zgqMcZ7pLm
ನಟ ಜಗ್ಗೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಊರಿನವರಾಗಿದ್ದಾರೆ. ಜಗ್ಗೇಶ್ ಅವರು ಆರಂಭದಲ್ಲಿ ಕೆಲ ಸಿನಿಮಾಗಳಲ್ಲಿ ಖಳನಾಯಕ ಹಾಗೂ ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿದರು. ಇವರ ಮೊದಲನೆಯ ಸಿನಿಮಾ ಇಬ್ಬನಿ ಕರಗಿತು. ನೂರನೆಯ ಸಿನಿಮಾ ಮಠ. ಮೇಕಪ್ ಎಂಬ ಸಿನಿಮಾವನ್ನು ಸ್ವತಃ ನಿರ್ಮಿಸಿ, ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಸಿನಿಮಾಗಳಲ್ಲಿ ತಾವೇ ಹಾಡಿದ್ದಾರೆ. ನಾಯಕ ನಟನಾಗಿ ಅಭಿನಯಿಸಿದ ಮೊದಲ ಸಿನಿಮಾ ತರ್ಲೆ ನನ್ ಮಗ. ಈ ಸಿನಿಮಾವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ : ಕಬ್ಜ ಬಾಕ್ಸ್ ಆಫೀಸ್ ಕಲೆಕ್ಷನ್ : ಸಿನಿಮಂದಿರಗಳಲ್ಲಿ ಮುಗಿಬಿದ್ದ ಫ್ಯಾನ್ಸ್
ಇದನ್ನೂ ಓದಿ : ಸ್ಯಾಂಡಲ್‌ವುಡ್ ಬಹುನಿರೀಕ್ಷಿತ ಸಿನಿಮಾ “ಕಬ್ಜ” ಕ್ಕೂ ತಗುಲಿದ ಪೈರಸಿ ಕಾಟ
ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು,ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಿನಿರಂಗದಲ್ಲಿ ಇವರು ನವರಸ ನಾಯಕ ನೆಂದು ಪ್ರಸಿದ್ಧಿ ಪಡೆದಿದ್ದಾರೆ. ಕೇವಲ ನಟನೆಯಲ್ಲಿ ಮಾತ್ರವಲ್ಲೇ ನಟ ಜಗ್ಗೇಶ್ ತುರುವೇಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಫೆಬ್ರವರಿ 3, 2010೨೦೧೦ರಂದು ಕರ್ನಾಟಕ ವಿಧಾನ ಪರಿಷತ್ತಿಗೆ ಜಗ್ಗೇಶ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.
Actor Jaggesh’s birthday: Sandalwood Navarasa hero Jaggesh’s birthday celebration