ಬೆಂಗಳೂರು : ಕೊರೊನಾ ಮಹಾಮಾರಿ ಜನರನ್ನು ತತ್ತರಿಸುವಂತೆ ಮಾಡಿದೆ. ಇದೀಗ ಕೊರೊನಾ ಎಫೆಕ್ಟ್ ಹಿರಿಯ ನಟಿ ಜಯಂತಿ ಅವರಿಗೂ ತಟ್ಟಿದ್ದು, ಕಳೆದ 22 ದಿನಗಳಿಂದಲೂ ಹಿರಿಯ ನಟಿ ಹೋಟೆಲ್ ನಲ್ಲಿ ಬಂಧಿಯಾಗಿದ್ದಾರೆ.

ಹಿರಿಯ ನಟಿ ಜಯಂತಿ ಅವರು ತನ್ನ ಕುಟುಂಬ ಸಮೇತರಾಗಿ ಮಾರ್ಚ್ 22ರಂದು ವಿಶ್ವ ವಿಖ್ಯಾತ ಹಂಪಿ ದೇವಸ್ಥಾನ ನೋಡಲು ಕುಟುಂಬ ಸಮೇತರಾಗಿ ತೆರಳಿದ್ದರು.

ಆದರೆ ಕೊರೊನಾ ಮಹಾಮಾರಿಯ ಅಬ್ಬರದಿಂದಾಗಿ ಮಾರ್ಚ್ 24 ರಂದು ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಾಗಿತ್ತು. ಹೀಗಾಗಿ ಜಯಂತಿ ಅವರ ಕುಟುಂಬ ಹೊಸಪೇಟೆಯಲ್ಲಿರುವ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದಾರೆ.

ನಟಿ ಜಯಂತಿ ಅವರ ಕುಟುಂಬಸ್ಥರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಲಾಕ್ ಡೌನ್ ಆದೇಶ ಮುಗಿಯುತ್ತಿದ್ದಂತೆಯೇ ಬೆಂಗಳೂರಿಗೆ ತೆರಳೋ ಪ್ಲ್ಯಾನ್ ಮಾಡಿಕೊಂಡಿತ್ತು.

ಆದ್ರೀಗ ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರ ವರೆಗೆ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿ ಮಾಡಿದ್ದಾರೆ. 21 ದಿನಗಳ ಲಾಕ್ ಡೌನ್ ಅವಧಿ ಮುಗಿಸಿ ಬೆಂಗಳೂರಿಗೆ ಮರಳುವ ಪ್ಲ್ಯಾನ್ ನಲ್ಲಿದ್ದ ನಟಿಯ ಕುಟುಂಬದವರು ಇನ್ನೂ 19 ದಿನಗಳ ಕಾಲ ಹೋಟೆಲ್ ನಲ್ಲಿಯೇ ಉಳಿದುಕೊಳ್ಳಬೇಕಾದ ಸಂದಿಗ್ದತೆಗೆ ಸಿಲುಕಿದ್ದಾರೆ. ಹೀಗಾಗಿ ಜಯಂತಿ ಅವರ ಕುಟುಂಬ ಮೇ 3ರ ಬಳಿಕ ಲಾಕ್ ಡೌನ್ ಸಡಿಲವಾದ್ರೆ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ.