Actor JK to marry : ಸ್ಯಾಂಡಲ್ವುಡ್ ನಟ ಜಯರಾಮ್ ಕಾರ್ತಿಕ್ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯಲ್ಲಿಯೇ ಹೆಚ್ಚು ಸದ್ದು ಮಾಡಿದಂತವರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ಜೆಕೆ ಎಂಬ ಪಾತ್ರದಲ್ಲಿ ನಟಿಸಿದ್ದ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಮನೆ ಮಾತಾಗಿದ್ದರು. ಇವರು ಹೆಂಡ್ತಿ ಎಂದು ಕರೆಯುತ್ತಿದ್ದ ರೀತಿಯಂತೂ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಧಾರವಾಹಿ ಮೂಲಕ ಕರ್ನಾಟಕದ ಮನೆ ಮನೆಗಳಲ್ಲಿ ಜನಪ್ರಿಯವಾಗಿದ್ದ ನಟ ಜೆಕೆ ಬಳಿಕ ಬಿಗ್ಬಾಸ್ನಲ್ಲಿಯೂ ಸ್ಪರ್ಧಿಯಾಗಿ ಆಗಮಿಸಿದ್ದರು.
ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ರಫ್ & ಟಫ್ ಆಗಿದ್ದ ಜೆಕೆಯನ್ನು ನೋಡುತ್ತಿದ್ದ ಪ್ರೇಕ್ಷಕರು ಇವರು ನಿಜ ಜೀವನದಲ್ಲಿಯೂ ಹೀಗೆ ಇದ್ದಿರಬಹುದು ಎಂದು ಅಂದುಕೊಳ್ತಿದ್ರು. ಆದರೆ ಬಿಗ್ ಬಾಸ್ ಇವರು ಸಖತ್ ಕೂಲ್ ಆಗಿ ಇದ್ದುದನ್ನು ಕಂಡು ರಿಯಲ್ ಜೆಕೆ ಬೇರೆಯ ರೀತಿಯೇ ಇದ್ದಾರೆ ಎಂಬುದು ಮನವರಿಕೆ ಆಗಿತ್ತು. ಕನ್ನಡ ಕಿರುತೆರೆ ಹಾಗೂ ಸ್ಯಾಂಡಲ್ವುಡ್ ಜೊತೆಗೆ ಜಯರಾಮ್ ಕಾರ್ತಿಕ್ ಹಿಂದಿ ಕಿರುತೆರೆಯಲ್ಲಿಯೂ ನಟಿಸಿದ್ದಾರೆ. ರಾವಣನ ಪಾತ್ರ ನಿರ್ವಹಿಸುವ ಮೂಲಕ ಅಲ್ಲಿಯೂ ತಮ್ಮ ಛಾಪನ್ನೂ ಮೂಡಿಸಿ ಬಂದವರು ಜೆಕೆ.
ಇದರ ಜೊತೆಯಲ್ಲಿ ಬಾಲಿವುಡ್ ಅಂಗಳಕ್ಕೂ ಕಾಲಿಡುತ್ತಿರುವ ನಟ ಜೆಕೆ ಪುಷ್ಪ ಐ ಹೇಟ್ ಟಿಯರ್ಸ್ನ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಎಲ್ಲಾ ವೃತ್ತಿ ಜೀವನದ ಅಪ್ಡೇಟ್ಸ್ ನಡುವೆ ಇದೀಗ ಜೆಕೆ ಮದುವೆ ಆಗ್ತಿದ್ದಾರೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡುತ್ತಿದೆ. ಜೆಕೆ ಶೀಘ್ರದಲ್ಲಿಯೇ ಅಪರ್ಣಾ ಸಮಂತಾ ಎಂಬವರ ಜೊತೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ಅಪರ್ಣಾ ಸಮಂತಾ ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಆಗಿದ್ದು ಸಾಕಷ್ಟು ಸೆಲೆಬ್ರಿಟಿಗಳಿಗೆ ಔಟ್ಫಿಟ್ ಡಿಸೈನ್ ಮಾಡಿದ್ದಾರೆ. ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಖಾತೆಗಳಲ್ಲಿ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ಹೀಗಾಗಿ ಇವರಿಬ್ಬರೂ ಸಧ್ಯದಲ್ಲಿಯೇ ಮದುವೆಯಾಗಬಹುದು ಎಂಬ ಗುಸು ಗುಸು ಎಲ್ಲೆಡೆ ಹರಿದಾಡಿದೆ.
ಇದನ್ನು ಓದಿ : acid attack victim : ಆ್ಯಸಿಡ್ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್
ಇದನ್ನೂ ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್ರೇಪ್ಗೆ ಸುಪಾರಿ ಕೊಟ್ಟ ಪತ್ನಿ