Kiccha Sudeep next move : ವಿಕ್ರಾಂತ್ ರೋಣಾ ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಸಖತ್ ಹಿಟ್ ಸಿನಿಮಾ. ಈ ಸಿನಿಮಾದ ಬಳಿಕ ಸುದೀಪ್ ಇದುವರೆಗೂ ಹೊಸ ಸಿನಿಮಾ ಘೋಷಿಸಿಲ್ಲ. ಈ ಮಧ್ಯೆ ಈಗ ಸುದೀಪ್ ಮತ್ತೊಮ್ಮೆ ವಿಕ್ರಾಂತ್ ರೋಣ ಖ್ಯಾತಿಯ ಅನೂಪ್ ಭಂಡಾರಿಯ ಆಕ್ಷ್ಯನ್ ಕಟ್ ನಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗ್ತಿದೆ.
ರಂಗಿತರಂಗ ಹಾಗೂ ವಿಕ್ರಾಂತ್ ರೋಣದಂತಹ ವಿಭಿನ್ನ ಸಿನಿಮಾಗಳನ್ನು ನೀಡಿದ ಅನೂಪ್ ಭಂಡಾರಿ ಸುದೀಪ್ ಸುದೀಪ್ ಹೊಸ ಸಿನಿಮಾದ ಬಗ್ಗೆ ಕ್ಲೂ ನೀಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನೂಪ್ ಭಂಡಾರಿ ಪೋಸ್ಟ್ ಹಾಕಿದ್ದು, ರಂಗಿತರಂಗ,ರಾಜರಥ ಹಾಗೂ ವಿಕ್ರಾಂತ್ ರೋಣದಲ್ಲಿ ಬರುವ ತಮ್ಮ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಲ್ಲದೇ ನಾಲ್ಕನೇ ಸಿನಿಮಾದ ಪೋಟೋ ಲೋಡಿಂಗ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಪೋಟೋಗೆ ಕ್ಯಾಪ್ಸನ್ ನೀಡಿರೋ ಅನೂಪ್ ಭಂಡಾರಿ, ನಿಮ್ಮ ಹಾರೈಕೆಗೆ ಧನ್ಯವಾದ. ಬಿಗಿಯಾಗ್ ಕುತ್ಕೋಳ್ಳಿ ರಂಪಾಟ ಶುರುವಾಗಾಕ್ ಟೈಂ ಬೇಕು. ಬಾಡೂಟದ ಜೊತೆ ಬರ್ತೀವಿ. ಅಲ್ಲಿವರೆಗೂ ಎಂದಿನ ಹಾಗೆ ತಾಳ್ಮೆ ಇರ್ಲಿ ಎಂದು ಕೋರಿದ್ದಾರೆ.
ಅನೂಪ್ ಭಂಡಾರಿ ಹಾಕಿರೋ ಈ ಸಾಲುಗಳಲ್ಲಿ ಬಿ.ರಂ ಹಾಗೂ ಬಾ ಹೈಲೈಟ್ ಆಗಿದೆ. ಹೀಗಾಗಿ ಅನೂಪ್ ಮುಂದಿನ ಚಿತ್ರ ಬಿಲ್ಲ ರಂಗ ಭಾಷಾ ಎಂದು ಅಂದಾಜಿಸಲಾಗುತ್ತಿದೆ.ಈ ಹಿಂದೆಯೂ ಸುದೀಪ್ ವಿಕ್ರಾಂತ್ ರೋಣ ಬಳಿಕ ಬಿಲ್ಲ ರಂಗ ಭಾಷಾ ಎನ್ನಲಾಗಿತ್ತು. ಆದರೆ ಸುದೀಪ್ ಬಹಿರಂಗವಾಗಿ ಮುಂದಿನ ಸಿನಿಮಾದ (Kiccha Sudeep next move) ಬಗ್ಗೆ ಘೋಷಿಸಿರಲಿಲ್ಲ.
ಈಗ ಅನೂಪ್ ಭಂಡಾರಿ ನಿರ್ದೇಶನದಲ್ಲೇ ಸುದೀಪ್ ಮುಂದಿನ ಸಿನಿಮಾ ಎಂಬುದು ರಿವೀಲ್ ಆಗಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಸದ್ಯ ಸುದೀಪ್ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ಕಾಣಿಸಿಕೊಂಡಿದ್ದು , ಈ ಸಿನಿಮಾ
ಮಾರ್ಚ್ 17 ರಂದು ತೆರೆ ಕಾಣಲಿದೆ.
ಇದರೊಂದಿಗೆ ಸುದೀಪ್ ಸಿಸಿಎಲ್ ನಲ್ಲೂ ಕೂಡ ಬ್ಯುಸಿಯಾಗಿದ್ದು, ಚಿತ್ರರಂಗದ ಎಲ್ಲರನ್ನೂ ಒಗ್ಗೂಡಿಸಿ ಕ್ರಿಕೇಟ್ ಮ್ಯಾಚ್ ಆಯೋಜಿಸಿದ್ದು, ಕ್ರಿಕೆಟ್ ಆಡೋದ್ರಲ್ಲಿ ಬ್ಯುಸಿಯಾಗಿ ದ್ದಾರೆ. ವಿಕ್ರಾಂತ್ ರೋಣದ ಯಶಸ್ಸಿನ ಬಳಿಕ ಸುದೀಪ್ ಸಿನಿಮಾ ಆಯ್ಕೆ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಈಗ ಅನೂಪ್ ಮತ್ತೊಮ್ಮೆ ಸುದೀಪ್ ಜೊತೆ ಸೇರೋದು ಖಚಿತವಾಗಿದ್ದು, ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರಬಹುದು ಎಂದು ಅಭಿಮಾನಿಗಳು ಕಾಯ್ತಿದ್ದಾರೆ.
ಇದನ್ನೂ ಓದಿ : ನಟಿ ಆಶಿಕಾ ರಂಗನಾಥ್ ಇನ್‌ಸ್ಟಾಗ್ರಾಮ್ ರೀಲ್ ಆಯ್ತು ವೈರಲ್ : ವಿಡಿಯೋದಲ್ಲಿ ಅಂತಹದೇನಿದೆ ?
ಇದನ್ನೂ ಓದಿ : Oscars Awards 2023 : ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನಿರೂಪಕರು ಯಾರಾರು ಇದ್ದಾರೆ ಗೊತ್ತಾ ?