ಮಗುವೊಂದು ಮನೆಯಲ್ಲಿದ್ದರೇ ಪ್ರತಿಕ್ಷಣವೂ ಆನಂದವೇ. ಅಂತಹದೊಂದು ಸಂಭ್ರಮವನ್ನು ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಎಂಜಾಯ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಮಗನ ಕುತೂಹಲ ವನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ.
ಮೇಘನಾರಾಜ್ ಹಾಗೂ ದಿ.ಚಿರು ಸರ್ಜಾ ಪುತ್ರ ಜ್ಯೂನಿಯರ್ ಚಿರು 7 ತಿಂಗಳ ಮಗು. ಈಗಷ್ಟೇ ಈ ಲೋಕಕ್ಕೆ ತನ್ನನ್ನು ತಾನು ತೆರೆದು ಕೊಳ್ಳುತ್ತಿರುವ ಜ್ಯೂನಿಯರ್ ಚಿರುಗೆ ಎಲ್ಲವೂ ಕುತೂಹಲವೇ.
ಅಂತಹುದೇ ಮಗನ ಕುತೂಹಲ ತುಂಬಿದ ನೋಟದ ವಿಡಿಯೋ ವೊಂದನ್ನು ಮೇಘನಾರಾಜ್ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.

ತಾತನ ಜೊತೆ ಜಾಲಿ ಟೈಂ ಸ್ಪೆಂಟ್ ಮಾಡ್ತಿರೋ ಜ್ಯೂನಿಯರ್ ಚಿರು ತಾತನ ಹೆಗಲ ಮೇಲೆ ಕೂತು ಅಕ್ವೇರಿಯಂ ನೋಡುತ್ತಿದ್ದಾನೆ. ಪುಟ್ಟ ಪುಟ್ಟ ಬಣ್ಣ ಬಣ್ಣದ ಮೀನುಗಳು ಓಡಾಡೋದನ್ನು ಜ್ಯೂನಿಯರ್ ನೋಡ್ತಿರೋ ಪುಟ್ಟ ದೃಶ್ಯವನ್ನು ಮೇಘನಾ ರಾಜ್ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಜ್ಯೂನಿಯರ್ ಚಿರು ನ ಈ ಕ್ಯೂಟ್ ವಿಡಿಯೋ ನೋಡಿ ಮೇಘನಾ ಹಾಗೂ ಚಿರು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಚಿರು ಗೆ ಐದು ತಿಂಗಳು ಮುಗಿದಿದ್ದು ೬ ನೇ ತಿಂಗಳಿಗೆ ಹಾಗೂ ಕಾಲಿಟ್ಟಿದ್ದಾನೆ.
ಈ ಸಂಭ್ರಮವನ್ನು ಮೇಘನಾ ರಾಜ್ ಸ್ಪೆಶಲ್ ಪೋಟೋಶೂಟ್ ಜೊತೆ ಸೆಲಿಬ್ರೇಟ್ ಮಾಡಿದ್ದರು.ಈಗ ಮತ್ತೊಂದು ಕ್ಯೂಟ್ ವಿಡಿಯೋ ನೀಡಿದ್ದಾರೆ.