ಮುಂಬೈ : ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿ ಮಾಡುತ್ತಿರುವ ಬಾಲಿವುಡ್ ನಟಿ ಪಾಯಲ್ ರೋಹಟ್ಗಿಯನ್ನು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಅಹಮದಾಬಾದ್ನ ಹೌಸಿಂಗ್ ಸೊಸೈಟಿಯೊಂದರಲ್ಲಿ ವೈದ್ಯ ಪರಾಗ್ ಸದಸ್ಯರಾಗಿದ್ದು ಇದೇ ಸೊಸೈಟಿಯಲ್ಲಿ ಪಾಯವ್ ಕೂಡಾ ಸದಸ್ಯೆ. ಅದ್ಯಾವುದೋ ಕಾರಣಕ್ಕೆ ಸೊಸೈಟಿಯ ವಾಟ್ಸಾಪ್ ಗ್ರೂಪ್ನಲ್ಲಿ ಪರಾಗ್ ಹಾಗೂ ಆ ಸೊಸೈಟಿಯ ಮುಖ್ಯಸ್ಥರ ವಿರುದ್ಧ ಪಾಯಲ್ ಕೆಟ್ಟ ಶಬ್ದ ಬಳಕೆ ಮಾಡಿದ್ದರು. ಮಾತ್ರವಲ್ಲದೆ ಬೆದರಿಕೆ ಹಾಕಿದ್ದರು. ಇದಾದ ಬಳಿಕ ಎಲ್ಲಾ ಪೋಸ್ಟ್ಗಳನ್ನು ಪಾಯಲ್ ಡಿಲೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯ ಪರಾಗ್ ಶಾ ಅನ್ನುವವರು ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ಪಾಯಲ್ ವಿರುದ್ಧ ದೂರು ದಾಖಲಿಸಿದ್ದರು.
ನಟಿ ಪಾಯಲ್ ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗಿದ್ದ ಇವರು, ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸದ್ದು ಮಾಡಿದ್ದರು. ಈ ಸಂಬಂಧ 2019ರಲ್ಲಿ ಪಾಯಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರ ವರ್ತನೆಯಿಂದ ಬೇಸತ್ತ ಟ್ವಿಟರ್ ಈಗಾಗಲೇ ಇವರ ಖಾತೆಯನ್ನೇ ಡಿಲೀಟ್ ಮಾಡಿದೆ.