ಕಾಂತಾರ ಸಿನಿಮಾದ ಖ್ಯಾತ ನಟ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಮಗ ರಣ್ವಿತ್ ಹುಟ್ಟುಹಬ್ಬವನ್ನು (Actor Rishabh Shetty son’s birthday) ಆಚರಿಸಿದ್ದಾರೆ. ಇದೀಗ ತಮ್ಮ ಮಗನ ಹುಟ್ಟುಹಬ್ಬವನ್ನು ವಿಶೇಷವಾಗಿ ಗೋವುಗಳ ಜೊತೆ ಆಚರಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕುರಿತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟ ರಿಷಬ್ ಶೆಟ್ಟಿ ತಮ್ಮ ಟ್ವಿಟರ್‌ನಲ್ಲಿ, “ನಮ್ಮ ಮಗನ ಹುಟ್ಟುಹಬ್ಬವನ್ನು.. ಅವನಿಷ್ಟದ ಗೋವು ಗಳೊಂದಿಗೆ ಆಚರಿಸಿದ ಸಂತಸದ ಕ್ಷಣಗಳು” ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟ ರಿಷಬ್, ಅವರ ಪತ್ನಿ, ಮಗ ಹಾಗೂ ಮಗಳನ್ನು ಗೋಮಾಳದಲ್ಲಿ ಕಾಣಬಹುದು. ಅಲ್ಲಿರುವ ಗೋವುಗಳಿಗೆ ಪೂಜಿಸಿ ಅವುಗಳಿಗೆ ತಿನ್ನುವುದಕ್ಕೆ ಹಣ್ಣನ್ನು ನೀಡಿದ್ದಾರೆ. ಹಾಗೆಯೇ ಅವುಗಳೊಂದಿಗೆ ಕುಟುಂಬದವರು ಸ್ವಲ್ಪ ಸಮಯವನ್ನು ಕಳೆದು ನಂತರ ಕೇಕ್ ಕಟ್ ಮಾಡಿ ಮಗ ರಣ್ವಿತ್ ಶೆಟ್ಟಿ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿದ್ದಾರೆ.
ನಮ್ಮ ಮಗನ ಹುಟ್ಟುಹಬ್ಬವನ್ನು..ಅವನಿಷ್ಟದ ಗೋವು ಗಳೊಂದಿಗೆ ಆಚರಿಸಿದ ಸಂತಸದ ಕ್ಷಣಗಳು.❤️#birthday #celebration #goshala #ranvitshetty #raadyashetty #rishabshetty #pragathishetty #family pic.twitter.com/QOGdNs7UPy
— Rishab Shetty (@shetty_rishab) April 16, 2023
ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದರಲ್ಲೊಬ್ಬರು,”ಸೂಪರ್ ಶೆಟ್ರೇ,, ಇದು ನಮ್ಮ ಹಿಂದೂ ಸಂಸ್ಕೃತಿ.ನಿಮ್ಮ ಮಕ್ಕಳಿಗೆ ನೀವು ಕೊಡೋ ಉತ್ತಮ ಸಂಸ್ಕಾರಗಳನ್ನಾ ನೋಡಿ ನಿಜಕ್ಕೂ ಹೆಮ್ಮೆ ಅನಿಸುತ್ತೆ” ಎಂದಿದ್ದಾರೆ. ಇನ್ನೊಬ್ಬರು,”ಶೆಟ್ರೇ ಹೀಗೆ ನಗುತ್ತಾ ಸಾಧನೆಯತ್ತ ನಿಮ್ಮ ದಾರಿ ಇರಲಿ 7 ಕೋಟಿ ಜನರ ಪ್ರೀತಿ ಆಶಿರ್ವಾದ ಇದ್ದೆ ಇರುತ್ತೆ. ರಾಜಕೀಯ ಬೇಡ ನಿಮಗೆ. ಅದಕ್ಕೆ ಬಂದ್ರೆ ದುಡ್ಡು ಮಾಡಬಹುದು ಆದರೆ 7 ಕೋಟಿ ಜನರ ಪ್ರೀತಿ ಕಳೆದು ಕೊಳ್ಳುವಿರಿ.. ಅಣ್ಣಾವರ ದಾರಿ ಲಿ ನಡೆಯಿರಿ” ಎಂದು ಮೆಚ್ಚುಗೆಯನ್ನು ಸೂಚಿಸುವ ಜೊತೆಗೆ ರಿಷಬ್ ಶೆಟ್ಟಿ ಮಗನಿಗೂ ಕೂಡ ಶುಭ ಹಾರೈಸಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಕಥೆಯನ್ನು ಬರೆಯುವಲ್ಲಿ ಬ್ಯುಸಿಯಾಗಿದ್ದು, ತಮ್ಮ ಕುಟುಂಬದವರೊಂದಿಗೆ ಒಂದಷ್ಟು ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ಆರ್ಶೀವಾದವನ್ನು ಪಡೆಯುತ್ತಿದ್ದಾರೆ. ಈ ಮೂಲಕ ಕಾಂತಾರ 2 ಮುಂದಿನ ವರ್ಷದ ಬೇಸಿಗೆಯಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಇಷ್ಟೇ ಅಲ್ಲದೇ “ಕಾಂತಾರ 2” “ಕಾಂತಾರ” ಸಿನಿಮಾದ ಮುಂದುವರಿದ ಭಾಗವಲ್ಲ ಎಂಬುದೂ ಸಹ ಖಚಿತವಾಗಿದೆ.
ಇದನ್ನೂ ಓದಿ : ನಾಳೆ ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯಾಸುಪ್ರಜಾರಾಮ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್
ಇದನ್ನೂ ಓದಿ : ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ : ಕಾಂತಾರ ಶಿವ ರಿಷಬ್ ಶೆಟ್ಟಿಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ
ಈ ಬಾರಿ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಕಥೆಗೂ ಹಿಂದೆ ನಡೆದಿದ್ದೇನು ಎಂಬುದನ್ನು ತೆರೆಮೇಲೆ ತರಲಿದ್ದು, ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿರಲಿದೆ. ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಭೂತಕೋಲದ ಹಿನ್ನೆಲೆಯನ್ನು ಈ ಬಾರಿ ಇನ್ನೂ ಆಳವಾಗಿ ತೋರಿಸಲಾಗುತ್ತದೆ. ಈ ಮೂಲಕ ಕಾಡುಬೆಟ್ಟು ಶಿವನ ತಂದೆಯ ಕಾಲಘಟ್ಟದ ಕಥೆಯನ್ನು ಸಿನಿ ರಸಿಕರು ನಿರೀಕ್ಷಿಸಬಹುದು ಎಂದು ಸಿನಿತಂಡ ತಿಳಿಸಿದ್ದಾರೆ.
Actor Rishabh Shetty son’s birthday: Kantara actor Rishabh Shetty celebrated son Ranvit Shetty’s birthday with cows.