ಸೋಮವಾರ, ಏಪ್ರಿಲ್ 28, 2025
HomeCinemaನಟ ಶಿವರಾಜ್‌ಕುಮಾರ್‌ ಪ್ರಚಾರಕ್ಕೆ ವ್ಯಂಗ್ಯವಾಡಿದ ಪ್ರಶಾಂತ್‌ ಸಂಬರ್ಗಿ

ನಟ ಶಿವರಾಜ್‌ಕುಮಾರ್‌ ಪ್ರಚಾರಕ್ಕೆ ವ್ಯಂಗ್ಯವಾಡಿದ ಪ್ರಶಾಂತ್‌ ಸಂಬರ್ಗಿ

- Advertisement -

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಕನ್ನಡ ಸಿನಿತಾರೆಯರು ಬ್ಯುಸಿಯಾಗಿದ್ದಾರೆ. ಹೆಚ್ಚಿನ ಸಿನಿತಾರೆಯವರು ತಮ್ಮ ಬ್ಯುಸಿ ಶಡ್ಯೂಲ್‌ನಲ್ಲಿ ಕೂಡ ತಮ್ಮ ಮೆಚ್ಚಿನ ಅಭ್ಯರ್ಥಿಗಳಿಗಾಗಿ ಮತ ಭೇಟೆಗೆ ರಾಜ್ಯದಾದ್ಯಂತ ರೋಡ್‌ ಶೋನಲ್ಲಿ ಪಾಲ್ಗೋಳುತ್ತಿದ್ದಾರೆ. ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರಗಿ ಅವರು ಸದಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪರವಾಗಿ ಫೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಇದೀಗ ಹುಬ್ಬಳ್ಳಿಯಲ್ಲಿ ಜಗದೀಶ್‌ ಶೆಟ್ಟರ್‌ ಪರ ಪ್ರಚಾರದಲ್ಲಿ ತೊಡಗಿರುವ ಶಿವಣ್ಣನ ಬಗ್ಗೆ (Actor Shivrajkumar – Prashant Sambargi) ವ್ಯಂಗ್ಯವಾಡಿದ್ದಾರೆ.

ನಟ ಶಿವರಾಜ್‌ಕುಮಾರ್‌ ಅವರು ಜಗದೀಶ್‌ ಶೆಟ್ಟರ್‌ ಪರವಾಗಿ ಹುಬ್ಬಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಅಷ್ಟೇ ಅಲ್ಲದೇ ವರುಣ ಕ್ಷೇತ್ರದಲ್ಲಿ ಮಾಜಿ ಸಿದ್ದರಾಮಯ್ಯ ಪರವಾಗಿ ಶಿವಣ್ಣ ಮತಯಾಚಿಸಿದ್ದಾರೆ. ಇನ್ನು ಶಿವಣ್ಣ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವುದಕ್ಕೆ ಬಿಜೆಪಿ ನಾಯಕರು ಬೇಸರ ವ್ಯಕ್ತಪಡಿಸಿದ್ದರು. ಬಿಗ್‌ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ “ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ.

ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದು ಹಂಚಿಕೊಂಡಿದ್ದಾರೆ.

ಹೀಗಾಗಿ ಪ್ರಶಾಂತ ಸಂಬರಗಿ ಫೋಸ್ಟ್‌ಗೆ ನಟ ಶಿವರಾಜ್‌ಕುಮಾರ್‌,” ಆ ರೀತಿ ಮಾತಾಡೋದು ಸರಿ ಅಲ್ಲ. ಅದನ್ನು ವಾಪಸ್ ತಗೆದುಕೊಳ್ಳಬೇಕು. ನಮ್ಮ ಹತ್ರ ಹಣನೇ ಇಲ್ವಾ? ನಾನು ಹಣ ಪಡೆದು ಇಲ್ಲಿ ಬಂದಿಲ್ಲ, ವ್ಯಾಪರಕ್ಕೆ ಬಂದಿಲ್ಲ. ಹೃದಯದಿಂದ ನಾನು ಬಂದಿರೋದು. ಮನುಷ್ಯನಿಗಾಗಿ ಬಂದಿದ್ದೇನೆ. ಯಾರನ್ನೂ ಟೀಕೆ ಮಾಡೋಕೆ ನಾನು ಬಂದಿಲ್ಲ. ಬೇರೆ ಯಾರನ್ನೂ ಟೀಕೆ ಮಾಡೋಕೆ ಬಂದಿಲ್ಲ. ನೀವ್‌ ಆನ್ಸರ್ ಮಾಡಿ ನೋಡೋಣ. ನಾನು ಎಲ್ಲ ಪ್ರಶ್ನೆಗೂ‌ ಉತ್ತರ ಕೊಡಲ್ಲ” ಎಂದು ಉತ್ತರ ನೀಡಿದ್ದಾರೆ.

ಇದನ್ನೂ ಓದಿ : ನಟಿ ರಮ್ಯಾ ಸಾಕು ನಾಯಿ ಚಂಪಾ ನಾಪತ್ತೆ : ಹುಡುಕಿಕೊಟ್ರೆ ಸಿಗುತ್ತೆ ಬಂಪರ್ ಬಹುಮಾನ

ಇದನ್ನೂ ಓದಿ : ಫೋಟೋಶೂಟ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡ ಬಿಗ್‌ ಬಾಸ್‌ ಖ್ಯಾತಿಯ ಸಾನ್ಯಾ ಅಯ್ಯರ್‌

ಅಷ್ಟೇ ಅಲ್ಲದೇ ಟ್ರೋಲ್‌ಗರಿಗೆ ಕಿವಿಮಾತು ಹೇಳಿದ್ದಾರೆ. ಅಂದೆನೆಂದರೆ, “ಟ್ರೋಲ್ ಮಾಡೋದು ಸರಿನಾ? ಯಾತಕ್ಕೆ ಟ್ರೋಲ್? ನಾನೇನು ಮಾಡಬೇಕು ಇದಕ್ಕೆ. ನೀವೆ ಮನಸ್ಸಿನಿಂದ ನೋಡಿ ಟ್ರೋಲ್ ಮಾಡೋದು ಸರಿನಾ? ಇಲ್ಲಿರೋರು ಎಲ್ಲರೂ ಟ್ರೋಲ್ ಮಾಡೋಕೆ ಬಂದಿದ್ದಾರಾ? ಇಲ್ಲಿ ಬಂದಿರೋರು ಎಲ್ಲಾ ಕಾಂಗ್ರೆಸ್‌ನವರಾ? ಎಲ್ಲಾ ಪಕ್ಷದವರು ಇರುತ್ತಾರೆ. ಟ್ರೋಲ್ ಯಾಕೆ, ಮನುಷ್ಯ ಅರ್ಥ ಮಾಡಕೊಳ್ಳಬೇಕು. ಎಷ್ಟು ದಿನ ಟ್ರೋಲ್‌ ಮಾಡಾತ್ತಾರೆ. ಹೃದಯದಿಂದ ಥಿಂಕ್ ಮಾಡಬೇಕಿದೆ. ಮೈಂಡ್ ಇಂದ ಯೋಚನೆ ಮಾಡಬಾರದು. ಸಾವಿರ ಜನ ಹೇಳ್ತಾರೆ ಅಂತಾ ಫಾಲೋ ಮಾಡಬಾರದು ಎಂದು ಹೇಳಿದ್ದಾರೆ.

Actor Shivrajkumar – Prashant Sambargi : Prashant Sambargi satirized the promotion of actor Shivrajkumar.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular