ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ತಮಿಳಿನ ನಟ ಸೂರ್ಯ ದಿನದಿಂದ ದಿನಕ್ಕೆ ತನ್ನ ಮಾರುಕಟ್ಟೆಯ ವಿಶಾಲತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸೂರರೈ ಪೊಟ್ರು ಸಿನಿಮಾ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಮಿಂಚಿದ ಸೂರ್ಯ ಕಳೆದ ವರ್ಷ ಬಿಡುಗಡೆಗೊಂಡ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಅಬ್ಬರಿಸಿ ಕ್ರೇಜ್ ಹೆಚ್ಚಿಸಿದ್ದರು. ಇದೀಗ ಮುಂಬೈನಲ್ಲಿ ನಟ ಸೂರ್ಯ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Actor Surya – Sachin Tendulkar) ಅವರನ್ನು ಭೇಟಿ ಮಾಡಿದ್ದ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.
ಹೀಗೆ ಭಿನ್ನ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ದೇಶವ್ಯಾಪಿ ಅಭಿಮಾನಿಗಳನ್ನು ಸಂಪಾದಿಸುತ್ತಿರುವ ಸೂರ್ಯ ಸದ್ಯ ತಮ್ಮ ಫ್ಯಾಮಿಲಿ ಜತೆ ಮುಂಬೈಗೆ ಫಲಾಯನಗೊಳ್ಳಲಿದ್ದಾರೆ ಎಂಬ ಸುದ್ದಿ ಇದ್ದು, ಸೂರ್ಯ ಆಗಾಗ ಮುಂಬೈಗೆ ಪ್ರಯಾಣ ಬೆಳೆಸುತ್ತಾ ಇದ್ದಾರೆ. ಇದೇ ರೀತಿ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ನಟ ಸೂರ್ಯ ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಹೌದು, ಸೂರ್ಯ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ ಸಂದರ್ಭದ ಫೋಟೊವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ‘ರೆಸ್ಪೆಕ್ಟ್ ಅಂಡ್ ಲವ್’ ಎಂದು ಬರೆದುಕೊಂಡಿದ್ದಾರೆ. ಇನ್ನು ಇದೇ ಫೋಟೊವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹ ಹಂಚಿಕೊಂಡು ‘ಈವತ್ತಿನ ಬೆಳಗಿನ ಸೂರ್ಯೋದಯ ವಿಶೇಷವಾಗಿತ್ತು. ಸೂರ್ಯ ನಿಮ್ಮನ್ನು ಭೇಟಿಯಾಗಿದ್ದು ಅದ್ಭುತವಾಗಿತ್ತು’ ಎಂದು ತಮಿಳಿನಲ್ಲೇ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಶಿವರಾತ್ರಿ ಜಾಗರಣೆಗೆ ‘ರಾಜಕುಮಾರ’ ವಿಶೇಷ ಪ್ರದರ್ಶನ : ಬುಕಿಂಗ್ ಓಪನ್!
ಇದನ್ನೂ ಓದಿ : Darshan’s birthday : ನಟ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸ್ಯಾಂಡಲ್ವುಡ್ ತಾರೆಯರು, ರಾಜಕೀಯ ಗಣ್ಯರು
ಇದನ್ನೂ ಓದಿ : Actor Darshan’s birthday : ನಟ ದರ್ಶನ್ ಬರ್ತಡೆಗೆ “D56” ಟೈಟಲ್ ರಿವೀಲ್ : ಜಬರ್ದಸ್ತ್ ಕಥೆಗೆ ಖಡಕ್ ಟೈಟಲ್ ಫಿಕ್ಸ್
ಇನ್ನು ಈ ಇಬ್ಬರೂ ಸಹ ಯಾವ ಸ್ಥಳದಲ್ಲಿ ಭೇಟಿಯಾಗಿದ್ದು ಎಂಬುದನ್ನು ಬಹಿರಂಗಪಡಿಸಿಲ್ಲ. ಸದ್ಯ ಸೂರ್ಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜತೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇರುವ ಫೋಟೊವನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಈ ಫೋಟೊ ಸದ್ಯ ಸಖತ್ ವೈರಲ್ ಆಗಿದೆ.
Actor Surya – Sachin Tendulkar : Sachin Tendulkar wrote in Tamil about the meeting of Tamil actor Surya.