ಬುಧವಾರ, ಏಪ್ರಿಲ್ 30, 2025
HomeCinemaActress Amulya: ಶುಭಸುದ್ದಿ ನೀಡಿದ ನಟಿ ಅಮೂಲ್ಯ

Actress Amulya: ಶುಭಸುದ್ದಿ ನೀಡಿದ ನಟಿ ಅಮೂಲ್ಯ

- Advertisement -

ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಅಮೂಲ್ಯ (Actress Amulya) ಶುಭ ಸಮಾಚಾರ ನೀಡಿದ್ದಾರೆ. ಆದರೆ ಇದು ಅವರ ಚಲನಚಿತ್ರಗಳ ಕುರಿತಾದದ್ದಲ್ಲ, ಅವರು ತಾಯಿಯಾಗುತ್ತಿರುವ ವಿಷಯವನ್ನು ತಮ್ಮ ಅಭಿಮಾನಿಗಳಿಗೆ ಫೇಸ್‌ಬುಕ್ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದಾರೆ. ತಮ್ಮ ಪತಿ ಜಗದೀಶ್ ಜೊತೆಗೆ ಸಖತ್ ಫೋಟೋಶೂಟ್ ( photoshoot ) ಮಾಡಿಸಿಕೊಂಡಿರುವ ಅವರು “ನಮ್ಮ ಕುಟುಂಬ ಬೆಳೆಯುತ್ತಿದೆ, ನಾವೀಗ ಇಬ್ಬರೇ ಅಲ್ಲ” ಎಂದು ಹೊಸ ಸುದ್ದಿ ನೀಡಿದ್ದಾರೆ.

2017ರಲ್ಲಿ ನಟಿ ಅಮೂಲ್ಯ ಜಗದೀಶ್ ಅವರ ಜೊತೆ ಮದುವೆಯಾದರು. ಆನಂತರ ಅಮೂಲ್ಯ ಯಾವುದೇ ಹೊಸ ಚಲನಚಿತ್ರಗಳಲ್ಲಿ ನಟಿಸಿಲ್ಲ. ತಮ್ಮ ಕುಟುಂಬದ ಬಗ್ಗೆ ಗಮನಹರಿಸಿದ ಅವರು ಇದೀಗ ಹೊಸ ಸುದ್ದಿ ನೀಡಿದ್ದಾರೆ.

ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಹೀರೋಯಿನ್ ಆಗಿ ಪರದೆಯ ಮೇಲೆ ಕಾಣಿಸಿಕೊಂಡ ಅಮೂಲ್ಯ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳನ್ನೇ ಪಡೆದುಕೊಂಡರು. ಹಲವು ಸ್ಟಾರ್ ನಟರು ಮತ್ತು ನಿರ್ದೇಶಕರ ಜೊತೆ ಕೆಲಸ ಮಾಡಿದರು. ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಬೆಳೆಸಿಕೊಂಡ ಅವರು ಯಾವುದೇ ವಿವಾದಗಳಲ್ಲಿ ಮೂಗು ತೂರಿಸಲಿಲ್ಲ. ಪ್ರಕಾಶ್ ರೈ ಅವರ ನಾನು ನನ್ನ ಕನಸಿನನಲ್ಲಿ ಅಮೂಲ್ಯ ಅವರ ನಟನೆ ಶ್ಲಾಘನೆಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: Kannadiga Title Track : ಶಿವಣ್ಣ ಫ್ಯಾನ್ಸ್ ಗೆ ಸಿಹಿಸುದ್ದಿ: ರವಿಮಾಮನ ಕನ್ನಡಿಗನಿಗಾಗಿ ಗಾಯಕನಾದ ಹ್ಯಾಟ್ರಿಕ್ ಹೀರೋ

(Actress Amulya announce her pregnancy with new photoshoot)

RELATED ARTICLES

Most Popular