ಸ್ಯಾಂಡಲ್‌ವುಡ್‌ನ ಕಾಂತಾರ ಸಿನಿಮಾ ದೇಶದಾದ್ಯಂತ ಹೊಸ ಸಂಚಲನವನ್ನೇ ಮೂಡಿಸಿದೆ. ಈ ಸಿನಿಮಾದಿಂದಾಗಿ ಕರಾವಳಿಯ ದೈವರಾಧನೆ ಹಾಗೂ ಭೂತಕೋಲಕ್ಕೆ ಭಾರತೀಯ ಸಿನಿಮಾರಂಗದವರು ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ನಮ್ಮ ಕರಾವಳಿ ಬೆಡಗಿಯಾದ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ (Actress Anushka Shetty) ಇತ್ತೀಚೆಗೆ ಕಾಂತಾರ ಸಿನಿಮಾ ನೋಡಿ ಮೆಚ್ಚಿ ಹೋಗಳಿದ್ದಾರೆ. ಹಾಗಾಗಿ ಇದೀಗ ಭೂತಕೋಲ ಹಾಗೂ ದೈವರಾಧನೆಯನ್ನು ನೋಡಲು ಮಂಗಳೂರಿಗೆ ಬಂದಿದ್ದಾರೆ.
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ನೋಡಿ ಹೃತಿಕ್ ರೋಷನ್, ರಜನಿಕಾಂತ್, ಅಗ್ನಿಹೋತ್ರಿ , ಪ್ರಭಾಸ್, ಕಂಗನಾ ರಣಾವತ್ ಸೇರಿದಂತೆ ಅನೇಕ ಸ್ಟಾರ್ ಸೆಲೆಬ್ರಿಟಿಗಳು ಹಾಡಿ ಹೊಗಳಿದ್ದಾರೆ. ನಟಿ ಅನುಷ್ಕಾ ಕೂಡ ಸಿನಿಮಾವನ್ನು ನೋಡಿ ಅದ್ಭುತವಾಗಿದೆ ಎಂದು ಸಿನಿತಂಡಕ್ಕೆ ಅಭಿನಂದನೆಯನ್ನು ಹೇಳಿದ್ದಾರೆ. ಸದ್ಯ ಎಲ್ಲೂ ಕೂಡ ಕಾಣಿಸಿಕೊಳ್ಳದ ನಟಿ ಅನುಷ್ಕಾ ಶೆಟ್ಟಿ ಮಂಗಳೂರಿನಲ್ಲಿ ನಡೆದ ಭೂತಕೋಲಕ್ಕೆ ಭಾಗವಹಿಸಿ ದೈವದ ಆಶೀವಾರ್ದವನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಅನುಷ್ಕಾ ಶೆಟ್ಟಿ ಫ್ಯಾನ್ಸ್ ಕ್ಲಬ್ ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.
ಇದನ್ನೂ ಓದಿ : ಹೊಸಬರ “ಥಗ್ಸ್ ಆಫ್ ರಾಮಘಡ” ಟ್ರೇಲರ್‌ಗೆ ಮೆಚ್ಚುಗೆ ಸೂಚಿಸಿದ ಡಾಲಿ ಧನಂಜಯ್
ಇದನ್ನೂ ಓದಿ : Shah Rukh Khan : ಬೇಶರಂ ರಂಗ್ ವಿವಾದ : ಶಾರೂಕ್ ಖಾನ್ರನ್ನು ಜೀವಂತ ಸುಡುವ ಎಚ್ಚರಿಕೆ ನೀಡಿದ ಸ್ವಾಮೀಜಿ
ಇದನ್ನೂ ಓದಿ : ಜಾಕ್ವೆಲಿನ್ ಫರ್ನಾಂಡೀಸ್ ವಿದೇಶಕ್ಕೆ ತೆರಳಲು ಅನುಮತಿ : ನಿರ್ದೇಶನಕ್ಕೆ ಇಡಿಗೆ ನ್ಯಾಯಾಲಯದ ಸೂಚನೆ
Another glimpse of Sweety attending Boothakola Festival in her home town ❤️❤️✨✨#AnushkaShetty #Sweety #Anushka48 pic.twitter.com/XvwIXTnjha
— PRANUSHKA FANCLUB 🌸❤️ (@pranushka_fan) December 18, 2022
ಯಾವಗಲೂ ತವರೂರಿಗೆ ಬರುವಾಗ ನಟಿ ಅನುಷ್ಕಾ ಸಂಪ್ರದಾಯಕವಾಗಿ ಸೀರೆಯನ್ನುಟ್ಟು ಬರುತ್ತಾರೆ. ಅದರಂತೆ ಈ ವಿಡಿಯೋದಲ್ಲಿ ನಟಿ ಅನುಷ್ಕಾ ಸೀರೆಯನ್ನುಟ್ಟು ಜನರೊಂದಿಗೆ ಕೋಲವನ್ನು ವೀಕ್ಷಿಸುತ್ತಿದ್ದು, ಅದರೊಂದಿಗೆ ವಿಡಿಯೋವನ್ನು ಮಾಡುತ್ತಿರುವುದನ್ನು ಕಾಣಬಹುದು. ಸದ್ಯ ಸ್ವೀಟಿ ಕಡಲನಗರಿಯಲ್ಲಿ ಕೋಲವನ್ನು ವೀಕ್ಷಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ : ಕೆಜಿಎಫ್ ಸಿನಿಮಾಕ್ಕೆ 4 ವರ್ಷ : ಇತಿಹಾಸ ಸೃಷ್ಟಿಸಿದ ದಿನವನ್ನು ನೆನಪಿಸಿದ ಹೊಂಬಾಳೆ ಫಿಲ್ಮ್ಸ್
ಇದನ್ನೂ ಓದಿ : Shah Rukh Khan – Yash : ಬಾಲಿವುಡ್ ಸ್ಟಾರ್ ನಟನಿಂದ ಯಶ್‌ಗೆ ಶಹಬ್ಬಾಸ್‌ಗಿರಿ : ಇದಕ್ಕಿಂತ ಇನ್ನೇನು ಬೇಕು ಎಂದ ಫ್ಯಾನ್ಸ್
Actress Anushka Shetty watched Bhutakola with family in Mangalore: Video viral