actress kajal agarwal : ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಸಾಲು ಸಾಲು ತಾರೆಯರು ಮದುವೆಯಾಗೋದು, ಪ್ರೆಗ್ನೆನ್ಸಿ ಘೋಷಣೆ ಮಾಡುವುದು ಹಾಗೂ ಮಗುವಿನ ಫೋಟೋ ರಿವೀಲ್ ಮಾಡೋದು ಇವಿಷ್ಟು ಟ್ರೆಂಡ್ ಎಂಬಂತೆ ಆಗಿ ಹೋಗಿದೆ. ಅದೇ ರೀತಿ ನಾಲ್ಕು ತಿಂಗಳ ಹಿಂದೆಯಷ್ಟೇ ಸೌತ್ ಇಂಡಿಯಾ ಬ್ಯೂಟಿ, ಖ್ಯಾತ ನಟಿ ಕಾಜಲ್ ಅಗರ್ವಾಲ್ ಕೂಡ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಜನ್ಮ ದಿನದಂದು ಮಗುವಿನ ಫೋಟೋ ರಿವೀಲ್ ಮಾಡಿದ್ದ ನಟಿ ಕಾಜಲ್ ಅರ್ಗವಾಲ್ ಇದೀಗ ಪುತ್ರನ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ಈ ಬಾರಿ ಕಾಜಲ್ ಅರ್ಗವಾಲ್ ತಮ್ಮ ಪುತ್ರನ ಫೊಟೋ ಹಂಚಿಕೊಳ್ಳುವುದರ ಹಿಂದೆ ವಿಶೇಷ ಕಾರಣವೊಂದಿದೆ. ನಾಲ್ಕು ತಿಂಗಳ ಕಂದಮ್ಮ ನೀಲ್ ಕಿಚ್ಲುಗೆ ಇದು ಮೊದಲ ವೆಕೇಷನ್ , ಹೌದು..! ಕಾಜಲ್ ಅರ್ಗವಾಲ್ ತಮ್ಮ ಪುತ್ರನ ಜೊತೆಯಲ್ಲಿ ಗೋವಾದಲ್ಲಿ ಎಂಜಾಯ್ ಮಾಡಿದ್ದಾರೆ. ಈ ವೆಕೇಷನ್ನ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ಕಾಜಲ್ ಅರ್ಗವಾಲ್ ನೀಲ್ ಮೊದಲ ವೆಕೇಷನ್ ಎಂದು ಶೀರ್ಷಿಕೆ ನೀಡಿದ್ದಾರೆ.
ದಕ್ಷಿಣ ಭಾರತದ ಹೆಸರುವಾಸಿ ನಟಿ ಕಾಜಲ್ ಅರ್ಗವಾಲ್ 2020ರ ಅಕ್ಟೋಬರ್ನಲ್ಲಿ ಗೌತಮ್ ಕಿಚ್ಲು ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾದ ಬಳಿಕವೂ ನಟನೆಯನ್ನು ಮುಂದುವರಿಸಿದ್ದ ಕಾಜಲ್ ಅರ್ಗವಾಲ್ ಬಳಿಕ ತಮ್ಮ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ತಮ್ಮ ಗರ್ಭಿಣಿ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ತಿದ್ದ ಕಾಜಲ್ ಏಪ್ರಿಲ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಇದನ್ನು ಓದಿ : Rashmika Mandanna : ರೆಡ್ ಡ್ರೆಸ್ನಲ್ಲಿ ಹಾಟ್ ಲುಕ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ರಶ್ಮಿಕಾ ಮಂದಣ್ಣ
ಇದನ್ನೂ ಓದಿ : sudeep has gone to delhi : 13 ವರ್ಷಗಳ ಬಳಿಕ ದೆಹಲಿಗೆ ಹಾರಿದ ಕಿಚ್ಚ ಸುದೀಪ : ಪ್ರಹ್ಲಾದ್ ಜೋಶಿ ಜೊತೆ ಮಾತುಕತೆ
ಇದನ್ನೂ ಓದಿ : actress kajal agarwal : ನಾಲ್ಕು ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್ನಲ್ಲಿ ಕಾಜಲ್ ಅಗರ್ವಾಲ್ ಎಂಜಾಯ್
ಇದನ್ನೂ ಓದಿ : Kicchaverse launch :ಕಿಚ್ಚ ಸುದೀಪ ಫ್ಯಾನ್ಸ್ಗೆ ಗುಡ್ ನ್ಯೂಸ್ : ಎನ್ಎಫ್ಟಿಯಿಂದ ಕಿಚ್ಚವರ್ಸ್ ಲಾಂಚ್
actress kajal agarwal enjoying with her kid in goa beach