ಸೋಮವಾರ, ಏಪ್ರಿಲ್ 28, 2025
HomeCinemaಧನುಷ್‌ ಜೊತೆ ಮೀನಾ ಮದುವೆ : ಕೊನೆಗೂ ಮೌನ ಮುರಿದ ನಟಿ

ಧನುಷ್‌ ಜೊತೆ ಮೀನಾ ಮದುವೆ : ಕೊನೆಗೂ ಮೌನ ಮುರಿದ ನಟಿ

- Advertisement -

ಕಾಲಿವುಡ್‌ ನಟ ಧನುಷ್‌ ಹಾಗೂ ಖ್ಯಾತ ನಟಿ ಮೀನಾ (Meena Dhanush) ಮದುವೆಯಾಗುತ್ತಿದ್ದಾರೆ ಅನ್ನೋ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ನಟ ಧನುಷ್‌ ರಜನಿಕಾಂತ್‌ ಪುತ್ರಿಯ ಜೊತೆಗೆ ಬ್ರೇಕಪ್‌ ಮಾಡಿಕೊಂಡಿದ್ರೆ, ನಟಿ ಮೀನಾ ಪತಿ ಇತ್ತೀಚಿಗಷ್ಟೆ ಸಾವನ್ನಪ್ಪಿದ್ದರು. ಇದೀಗ ಧನುಷ್‌ ಮೀನಾ ಮದುವೆ ವಿಚಾರ ದೊಡ್ಡಮಟ್ಟದ ಸುದ್ದಿಯಾಗುತ್ತಿದ್ದಂತೆಯೇ ನಟಿ ಮೀನಾ ಕೊನೆಗೂ ಮೌನ ಮುರಿದಿದ್ದಾರೆ.

ನಟಿ ಮೀನಾ ಆಟೋಗ್ರಾಫ್‌, ಪುಟ್ನಂಜ, ಸಿಂಹಾದ್ರಿಯ ಸಿಂಹ ಸೇರಿದಂತೆ ಹಲವು ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದಿಗೂ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಯನ್ನು ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲಾ ಬಹುಭಾಷಾ ನಟಿಯಾಗಿಯೂ ಮೀನಾ ಗುರುತಿಸಿಕೊಂಡಿದ್ದಾರೆ. ಇನ್ನು ಧನುಷ್‌ ಕಾಲಿವುಡ್‌ನ ಬಹು ಬೇಡಿಕೆಯ ನಟ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಿರ್ದೇಶಕ ಬೈಲ್ವಾನ್‌ ರಂಗನಾಥನ್‌ ಧನುಷ್‌ ಹಾಗೂ ಮೀನಾ ಮದುವೆಯ ಬಾಂಬ್‌ ಸಿಡಿಸಿದ್ದರು.

ಅಭಿಮಾನಿಗಳು ಇಬ್ಬರೂ ಕೂಡ ಎರಡನೇ ಮದುವೆಯಾಗುತ್ತಾರೆ ಅಂತಾನೇ ನಂಬಿಕೊಂಡಿದ್ದರು. ಆದ್ರೆ ಈ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ನಟಿ ಮೀನಾ ಕೊನೆಗೂ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಮೀನಾ, ತನ್ನ ಎರಡನೇ ಮದುವೆಯ ವಿಚಾರ ತನಗೆ ಬೇಸರವನ್ನು ತರಿಸಿದೆ. ಇದು ಶುದ್ದ ಸುಳ್ಳು ಸುದ್ದಿ. ನಾನೀಗ ಪತಿಯನ್ನು ಕಳೆದುಕೊಂಡಿರುವ ನೋವಿನಲ್ಲಿದ್ದೇನೆ. ಎರಡನೇ ಮದುವೆಯ ಕುರಿತು ನಾನು ಯೋಚನೆಯನ್ನೂ ಮಾಡಿಲ್ಲ ಎಂದಿದ್ದಾರೆ. ಪತಿ ವಿದ್ಯಾಸಾಗರ್‌ ಅಗಲಿಕೆಯ ನೋವಿನಿಂದ ಹೊರಬರಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಮಗಳ ಭವಿಷ್ಯವನ್ನು ರೂಪಿಸುವತ್ತ ನಾನು ಗಮನಹರಿಸುತ್ತಿದ್ದೇನೆ. ಸಿನಿಮಾ ಹಾಗೂ ಪಾತ್ರಗಳ ಆಯ್ಕೆಯ ಕುರಿತು ನಾನು ಬ್ಯುಸಿಯಾಗಿದ್ದೇನೆ. ತನ್ನ ಎರಡನೇ ಮದುವೆಯ (Meena Dhanush) ವಿಚಾರದ ಕುರಿತು ಗಾಸಿಪ್‌ ಹರಡಿರುವುದು ನನಗೆ ಬೇಸರವನ್ನ ತರಿಸಿದೆ ಎಂದಿದ್ದಾರೆ.

ನಟಿ ಮೀನಾ ಅವರು ವಿದ್ಯಾಸಾಗರ್‌ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಹೆಣ್ಣು ಮಗಳಿದ್ದಾಳೆ. ಕಳೆದ ವರ್ಷ ಮೀನಾ ಅವರ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರು. ಆದರೆ ಪತಿ ವಿದ್ಯಾಸಾಗರ್‌ ಅವರಿಗೆ ಎದುರಾಗಿದ್ದ ಶ್ವಾಸಕೋಶ ಸಂಬಂಧಿ ಕಾಯಿಲೆ ಕಡಿಮೆಯಾಗಿರಲಿಲ್ಲ. ಇದರಿಂದಾಗಿ ಕಳೆದ ವರ್ಷದ ಜೂನ್‌ 28ರಂದು ಮೀನಾ ಪತಿ ವಿದ್ಯಾಸಾಗರ್‌ ನಿಧನರಾಗಿದ್ದರು. 46 ವರ್ಷ ಪ್ರಾಯದ ಮೀನಾ, 39 ವಯಸ್ಸಿನ ತಮಿಳಿನ ಸ್ಟಾರ್‌ ನಟ ಧನುಷ್‌ ಅವರನ್ನು ಇನ್ನೇನು ಮದುವೆ ಆಗಲಿದ್ದಾರೆ ಎಂಬ ಗುಲ್ಲು ಕಾಲಿವುಡ್‌ ಅಂಗಳದಲ್ಲಿ ಸದ್ದು ಮಾಡಿತ್ತು. ಈಗ ಇದೆಲ್ಲದಕ್ಕೂ ಉತ್ತರ ಸಿಕ್ಕಿದೆ. ತಮಿಳಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಬೈಲ್ವಾನ್‌ ರಂಗನಾಥ್‌ ಮದುವೆಯ ಕುರಿತು ಹೇಳಿಕೆ ನೀಡಿದ್ದರು. ಜೂನ್‌ ಅಥವಾ ಜುಲೈನಲ್ಲಿ ಈ ಜೋಡಿ ಮದುವೆ ಆಗಲಿದ್ದಾರೆ. ಒಂದೊಮ್ಮೆ ಮದುವೆಯಾಗದೇ ಇದ್ರೆ ಈ ಜೋಡಿ ಲೀವ್‌ ಇನ್‌ ರಿಲೇಷನ್‌ ಶಿಪ್‌ ನಲ್ಲಿ ಇರಲಿದೆ ಎಂದು ಹೇಳಿಕೆ ನೀಡಿದ್ದರು. ಸದ್ಯ ಬೈಲ್ವಾನ್‌ ರಂಗನಾಥ್‌ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ತಮಿಳು ಸ್ಟಾರ್ ನಟ ಧನುಷ್ ರಜನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು ಮದುವೆಯಾಗಿದ್ದರು. ಈ ಜೋಡಿ ಸುದೀರ್ಘ 18 ವರ್ಷಗಳ ನಂತರದಲ್ಲಿ ಇಬ್ಬರೂ ವಿಚ್ಛೇಧನ ಪಡೆದುಕೊಂಡಿದ್ದರು. ಈ ವಿಚಾರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು.

ಇದನ್ನೂ ಓದಿ : ಖ್ಯಾತ ನಟಿ ಆಕಾಂಕ್ಷ ದುಬೆ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಇದನ್ನೂ ಓದಿ : ನಟ ಡಾಲಿ ಧನಂಜಯ್‌ ಅಭಿನಯದ “ಗುರುದೇವ ಹೊಯ್ಸಳ” ಸಿನಿಮಾ ಟಿಕೆಟ್‌ ಬುಕಿಂಗ್‌ ಲಭ್ಯ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular