Priya Anand : ಹೆಸರಿಗಾಗಿ ನಟಿಮಣಿ ಸರ್ಕಸ್ : ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗ್ತಿನಿ ಎಂದ ನಟಿ ಪ್ರಿಯಾ ಆನಂದ

Priya Anand : ನಟಿಮಣಿಯರು ಎಷ್ಟೇ ಪಬ್ಲಿಸಿಟಿ ಗಳಿಸಿದ್ರೂ, ಕೆರಿಯರ್ ನಲ್ಲಿ ಬ್ಯುಸಿಯಾಗಿದ್ರೂ ಅಥವಾ ಖಾಲಿ ಕೈಯಲ್ಲಿ ಕೂತಿದ್ದರೂ ಮದುವೆ ವಿಚಾರ ಮಾತ್ರ ಮಾತಾಡೋಕೆ ಬಯಸೋದಿಲ್ಲ. ಆದರೆ ಈ ನಟಿಮಣಿ ಮಾತ್ರ ತಮ್ಮ ಮದುವೆ ಬಗ್ಗೆ ತಾವೇ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಇಷ್ಟಕ್ಕೂ ಹೀಗೊಂದು ವಿವಾದಕ್ಕೆ ಕಾರಣವಾದ ನಟಿ ಯಾರು ಅನ್ನೋ ಕುತೂಹಲ ನಿಮಗಿದ್ದರೇ ಈ ಸ್ಟೋರಿ ಓದಿ.

ನಟಿ ಪ್ರಿಯಾ ಆನಂದ್ ತಮಿಳು ಹಾಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ.‌ ಸಾಮಾನ್ಯವಾಗಿ ಯಾವುದೇ ವಿವಾದದಲ್ಲಿ ಸಿಲುಕದ ನಟಿ ಈ ಭಾರಿ ತಮ್ಮ ಮದುವೆ ಬಗ್ಗೆ ಮಾತನಾಡಿ ವಿವಾದಕ್ಕೆ‌ ಗುರಿಯಾಗಿದ್ದಾರೆ. ಇತ್ತೀಚಿಗೆ ಚಾನೆಲ್‌ವೊಂದಕ್ಕೆ ಇಂಟರವ್ಯೂ ನೀಡಿದ ಪ್ರಿಯಾ ಆನಂದ ತಾವು ವಿವಾದಿತ ದೇವಮಾನವ ನಿತ್ಯಾನಂದನನ್ನು ಮದುವೆ ಆಗುತ್ತೇನೆ ಎಂದಿದ್ದಾರೆ. ನಾನು ಮದುವೆಯಾಗಬೇಕು. ಯಾರನ್ನು ಮದುವೆಯಾಗಬೇಕು ಅಂತ ಯೋಚ್ನೇ ಮಾಡಿದರೇ ನಿತ್ಯಾನಂದರನ್ನು ಮದುವೆ ಮಾಡೋದು ಒಳ್ಳೆಯದು ಎನ್ನಿಸುತ್ತದೆ. ತನ್ನ ವರ್ಚಸ್ಸಿನ ಮೂಲಕ ಸೆಳೆಯುವ ಕಾರಣಕ್ಕೆ ಸಾವಿರಾರು ಜನರು ನಿತ್ಯಾನಂದರನ್ನು ಹಿಂಬಾಲಿಸುತ್ತಾರೆ. ಅಲ್ಲದೇ ನಿತ್ಯಾನಂದರನ್ನು ಮದುವೆಯಾದರೇ ನನ್ನ ಹೆಸರನ್ನು ಬದಲಾಯಿಸಬೇಕಾಗಿಲ್ಲ. ಏಕೆಂದರೇ ಅದು ಈಗಾಗಲೇ ಹೆಚ್ಚು ಕಡಿಮೆ ಹೋಲುತ್ತದೆ ಎಂದು ಪ್ರಿಯಾ ಆನಂದ್ ಜೋಕ್ ರೀತಿಯಲ್ಲಿ ಹೇಳಿದ್ದಾರೆ.

ಬಹುಷಃ ಇಂಟರವ್ಯೂನಲ್ಲಿ ಪ್ರಿಯಾ ಆನಂದ ತಮ್ಮ ಮದುವೆಯ ಬಗ್ಗೆ ಜೋಕ್ ರೀತಿಯಲ್ಲಿ ಈ ಮಾತನ್ನು ಹೇಳಿರೋ ಸಾಧ್ಯತೆ ಇದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಜನರು ಅಯ್ಯೋ ಪ್ರಿಯಾ ಆನಂದ ನಿತ್ಯಾನಂದನನ್ನು ಮದುವೆಯಾಗ್ತಾಳಂತೆ ಅಂತ ಮಾತಾಡ್ತಾ ಇದ್ದಾರಂತೆ. ತಮಿಳಿನ ಮೂಲಕ ನಟನೆಯ ಕೆರಿಯರ್ ಆರಂಭಿಸಿದ ಪ್ರಿಯಾ ಆನಂದ್ ಕನ್ನಡದ ಜೊತೆಗೂ ನಂಟು ಹೊಂದಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಹಾಗೂ ರಾಜಕುಮಾರ ಸಿನಿಮಾದಲ್ಲಿ ಪ್ರಿಯಾ ಆನಂದ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿದ್ದಾರೆ.

ಜೇಮ್ಸ್ ಬಳಿಕ ಪ್ರಿಯಾ ಆನಂದ ಕನ್ನಡದಲ್ಲಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ ತಮಿಳಿನ ಹಲವು ಸಿನಿಮಾದಲ್ಲಿ ಪ್ರಿಯಾ ಬ್ಯುಸಿಯಾಗಿದ್ದಾರೆ. ಸುಮೋ, ಕಾಸೆದನ್ ಕಡವುಲಡಾ, ಅಂಧಗನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಸಿನಿಮಾ ಸೋಷಿಯಲ್ ಮೀಡಿಯಾ ಬದಲು ಸದ್ಯ ಪ್ರಿಯಾ ಆನಂದ ಮದುವೆ ವಿಚಾರದಲ್ಲಿ ಸೆನ್ಸೆಷನ್ ಸೃಷ್ಟಿಸಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : Vikram Is Fine : ತಮಿಳು ನಟ ವಿಕ್ರಮ್​ಗೆ ಹೃದಯಾಘಾತವಾಗಿಲ್ಲ : ವದಂತಿಗಳಿಗೆ ಕಿವಿಗೊಡಬೇಡಿ ಎಂದ ಮ್ಯಾನೇಜರ್​

ಇದನ್ನೂ ಓದಿ : disha patani : ಸೀರೆಯನ್ನುಟ್ಟು ಹಾಟ್​ ಆಗಿ ಕಾಣಿಸಿದ ನಟಿ ದಿಶಾ ಪಠಾಣಿ : ಫಿದಾ ಆದ ನೆಟ್ಟಿಗರು

Actress Priya Anand says she will marry Swami Nithyananda

Comments are closed.