ಭಾನುವಾರ, ಏಪ್ರಿಲ್ 27, 2025
HomeCinemaActress Rachita Ram : ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ ಡಿಂಪಲ್‌ ಕ್ವೀನ್‌ ರಚಿತಾ...

Actress Rachita Ram : ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌

- Advertisement -

ಕನ್ನಡ ಸಿನಿರಂಗದ ಗುಳಿ ಕೆನ್ನೆ ಬೆಡಗಿ, ಡಿಂಪಲ್‌ ಕ್ವೀನ್‌ ಎಂದೇ ಪ್ರಖ್ಯಾತಿ ಪಡೆದಿರುವ (Actress Rachita Ram) ನಟಿ ರಚಿತಾ ರಾಮ್‌ ಕಡಲ ನಗರ ಮಂಗಳೂರಿಗೆ ಆಗಮಿಸಿದ್ದಾರೆ. ನಟಿ ರಚಿತಾ ರಾಮ್‌ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸದ್ಯ ನಟಿ ರಚಿತಾ ರಾಮ್‌ ಅಭಿನಯದ ಮುಂದಿನ ಸಿನಿಮಾಗಳಾದ ಮ್ಯಾಟ್ನಿ ಹಾಗೂ ಬ್ಯಾಡ್‌ ಮ್ಯಾನರ್ಸ್‌ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇನ್ನು ನಟಿ ರಚಿತಾ ರಾಮ್‌ ಸ್ನೇಹಿತರು ಕೊರಗಜ್ಜ ದೈವದ ಬಗ್ಗೆ ತಿಳಿಸಿದರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು. ಕೊರಗಜ್ಜನ ಕ್ಷೇತ್ರವು ಪ್ರಕೃತಿ ಸೌಂದರ್ಯದಿಂದ ಕೂಡಿದ್ದು, ನೋಡಲು ತುಂಬಾ ಚೆನ್ನಾಗಿದೆ. ಹಾಗೆಯೇ ಮುಂದಿನ ಜೂನ್‌ ತಿಂಗಳಲ್ಲಿ ತೆರೆ ಕಾಣಲಿರುವ ಮ್ಯಾಟ್ನಿ ಮತ್ತು ಬ್ಯಾಡ್‌ ಮ್ಯಾನರ್ಸ್‌ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದೆ ಎಂದು ಹೇಳಿದರು. ಅಷ್ಟೇ ಅಲ್ಲದೇ ಕೊರಗಜ್ಜನ ಸನ್ನಿಧಾನದಲ್ಲಿ ಕ್ಷೇತ್ರದ ವತಿಯಿಂದ ನಟಿ ರಚಿತಾ ರಾಮ್‌ ಅವರನ್ನು ಕಚೇರಿ ಒಳಗೆ ಕರೆಸಿ ಶಾಲು ಹೊದಿಸಿ ಅಭಿನಂದಿಸಲಾಯಿತು. ನಟಿ ರಚಿತಾ ರಾಮ್‌ ದೇವರ ದರ್ಶನವನ್ನು ಮಾಡಿಕೊಂಡು ಮತ್ತೆ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ : Dolly Dhananjaya : ಸಿನಿಲೋಕದಲ್ಲಿ 10 ವರ್ಷ ಪೂರೈಸಿದ ನಟ ರಾಕ್ಷಸ, ಡಾಲಿ ಧನಂಜಯ

ಈ ವರ್ಷದ ಆರಂಭದಲ್ಲಿ ನಟಿ ರಚಿತಾ ರಾಮ್‌ ಕ್ರಾಂತಿ ಸಿನಿಮಾದಲ್ಲಿ ಸ್ಕೂಲ್‌ ಟೀಚರ್‌ ಆಗಿ ನಟ ದರ್ಶನ್‌ ಜೊತೆ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಯ ಮೂಲಕ ಸಿನಿಪ್ರೇಕ್ಷಕರನ್ನು ಮೂಡಿ ಮಾಡಿದ್ದಾರೆ. ಆದರೆ ಇತ್ತೀಚೆಗೆ ನಟಿ ರಚಿತಾ ರಾಮ್‌ ಅಭಿನಯದ ಸಿನಿಮಾಗಳು ಸಾಕಷ್ಟು ಯಶಸ್ಸನ್ನು ಕಂಡಿರಲಿಲ್ಲ. ಹಾಗಾಗಿ ಮುಂದಿನ ಸಿನಿಮಾಗಳಲ್ಲಿ ನಟಿ ರಚಿತಾ ರಾಮ್‌ ಯಶಸ್ಸಿನ ಅನಿವಾರ್ಯತೆ ಇರುವುದರಿಂದ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.

Actress Rachita Ram : Dimple Queen Rachita Ram visited the Adisthal of Kuttaru Koragajna.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular