ಸೋಮವಾರ, ಏಪ್ರಿಲ್ 28, 2025
HomeCinemaActress Ramya : ಗುಲಾಬಿ ಹೂಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಚೆಂದದ ಕವನ ಹಂಚಿಕೊಂಡ ನಟಿ...

Actress Ramya : ಗುಲಾಬಿ ಹೂಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಚೆಂದದ ಕವನ ಹಂಚಿಕೊಂಡ ನಟಿ ರಮ್ಯಾ

- Advertisement -

ನಟಿ ರಮ್ಯಾ (Actress Ramya) ಸಿನಿರಂಗದಿಂದ ದೂರ ಉಳಿದಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿದ್ದಾರೆ. ಆಗಾಗ ತಾವು ಹೋದ ಜಾಗಗಳ ಬಗ್ಗೆ ತಮ್ಮ ದಿನನಿತ್ಯ ಚಟುವಟಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ರಮ್ಯಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಫೋಟೋಗಳೊಂದಿಗೆ ಸುಂದರ ಕವನವನ್ನು ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗಿದೆ.

ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ಗುಲಾಬಿ ಹೂವುಗಳ ಜೊತೆ ಬಿಳಿ ಉಡುಗೆಯಲ್ಲಿ ಫೋಟೋ ಪೋಸ್‌ ನೀಡಿದ್ದಾರೆ. ಹಾಗೆ ತಮ್ಮ ಮೆಚ್ಚಿ ನಾಯಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನು ತಮ್ಮ ಮೆಚ್ಚಿನ ನಟಿಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ಕಾಮೆಂಟ್‌ ಹಾಗೂ ಲೈಕ್‌ ಒತ್ತಿದ್ದಾರೆ.

ಇನ್ನು ಈ ಫೋಟೋದೊಂದಿಗೆ ನಟಿ ರಮ್ಯಾ ಸುಂದರ ಕವನವನ್ನು ಹಂಚಿಕೊಂಡಿದ್ದು ಕವನ ಹೀಗಿದೆ,
ಅದೊಂದು ಪುಟ್ಟ ಗುಲಾಬಿಯಷ್ಟೇ,
ದೇವರ ವಿನ್ಯಾಸದ ಹೂವು;
ಆದರೆ ನಾನು ದಳಗಳನ್ನು ಬಿಚ್ಚಲು ಸಾಧ್ಯವಿಲ್ಲ
ನನ್ನ ಈ ಬೃಹದಾಕಾರದ ಕೈಗಳಿಂದ.

ತೆರೆದ ಹೂವುಗಳ ರಹಸ್ಯ
ನನ್ನಂತಹವರಿಗೆ ತಿಳಿದಿಲ್ಲ.
ದೇವರು ಈ ಹೂವನ್ನು ತುಂಬಾ ಸಿಹಿಯಾಗಿ ತೆರೆಯುತ್ತಾನೆ,
ನನ್ನ ಕೈಯಲ್ಲಿ ಅವು ಮಸುಕಾಗುತ್ತವೆ ಮತ್ತು ಸಾಯುತ್ತವೆ.

ನಾನು ಗುಲಾಬಿ ಮೊಗ್ಗು ಬಿಚ್ಚಲು ಸಾಧ್ಯವಾಗದಿದ್ದರೆ,
ದೇವರ ವಿನ್ಯಾಸದ ಈ ಹೂವು,
ಹಾಗಾದರೆ ನನಗೆ ಬುದ್ಧಿವಂತಿಕೆ ಇದೆ ಎಂದು ನಾನು ಹೇಗೆ ಭಾವಿಸುತ್ತೇನೆ
ನನ್ನ ಈ ಬದುಕನ್ನು ಬಿಚ್ಚಿಡಲು?

ಹಾಗಾಗಿ ಆತನ ಮುನ್ನಡೆಗಾಗಿ ನಾನು ಆತನನ್ನು ನಂಬುತ್ತೇನೆ
ಪ್ರತಿ ದಿನದ ಪ್ರತಿ ಕ್ಷಣ.
ಅವರ ಮಾರ್ಗದರ್ಶನಕ್ಕಾಗಿ ನಾನು ಅವನನ್ನು ನೋಡುತ್ತೇನೆ
ಯಾತ್ರಿಕ ಮಾರ್ಗದ ಪ್ರತಿ ಹೆಜ್ಜೆ.

ನನ್ನ ಮುಂದೆ ಇರುವ ದಾರಿ,
ನನ್ನ ಸ್ವರ್ಗೀಯ ತಂದೆಗೆ ಮಾತ್ರ ತಿಳಿದಿದೆ.
ಕ್ಷಣಗಳನ್ನು ತೆರೆದಿಡಲು ನಾನು ಅವನನ್ನು ನಂಬುತ್ತೇನೆ,
ಅವನು ಗುಲಾಬಿಯನ್ನು ಬಿಚ್ಚಿದಂತೆಯೇ.
ಒಟ್ಟಾರೆ ಈ ಕವಿತೆಯಲ್ಲಿ ನಟಿ ರಮ್ಯಾ ದೇವರು ಮತ್ತು ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಈಡೀ ಜೀವನ ದೇವರ ಕೈಯಲ್ಲಿದೆ ಎಂಬ ಸಾರಾಂಶವನ್ನು ಈ ಕವಿತೆ ಒಳಗೊಂಡಿದೆ.

ಇದನ್ನೂ ಓದಿ : Kantara Manasi Sudhir : ಮತ್ತೆ ಬಂದರು ಕಾಂತಾರ ಮಾನಸಿ, ಸಂವಿಧಾನದ ಮಹತ್ವ ಸಾರುತ

ಇದನ್ನೂ ಓದಿ : Sangeetha Sringeri : ಸಖತ್‌ ಹಾಟ್‌, ಗ್ಲಾಮರಸ್‌ ಆಗಿ ಕಾಣಿಸಿಕೊಂಡ ಚಾರ್ಲಿ ಬ್ಯೂಟಿ ನಟಿ ಸಂಗೀತಾ ಶೃಂಗೇರಿ

ಬಹಳ ವರ್ಷಗಳ ನಟಿ ರಮ್ಯಾ ಸಿನಿರಂಗಕ್ಕೆ ಕಮ್‌ ಬ್ಯಾಕ್‌ ಮಾಡಲಿದ್ದು, ಡಾಲಿ ಧನಂಜಯ್‌ ಅಭಿನಯದ ಉತ್ತರಕಾಂಡ ಸಿನಿಮಾದಲ್ಲಿ ನಟಿಸಲಿದ್ದಾರೆ. ಹಾಗಾಗಿ ಈ ಸಿನಿಮಾ ಮೇಲೆ ಸಿನಿಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಇನ್ನು ನಟಿ ರಮ್ಯಾ ನಿರ್ಮಾಣದಲ್ಲಿ ನಟ ರಾಜ್‌ ಬಿ ಶೆಟ್ಟಿ ಅಭಿನಯದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕೂಡ ಮೂಡಿ ಬರುತ್ತಿದೆ. ನಿರ್ಮಾಪಕಿಯಾಗಿ ಸಕ್ರಿಯವಾಗಿರುವ ರಮ್ಯಾ ಅವರು ಹೊಸಬರಿಗೆ ಅವಕಾಶ ನೀಡುವುದಾಗಿ ಕೂಡ ವೀಕೆಂಡ್‌ ಟೆಂಟ್‌ನಲ್ಲಿ ಹೇಳಿಕೊಂಡಿದ್ದಾರೆ.

Actress Ramya: Actress Ramya shared a beautiful poem by clicking a photo with rose flowers

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular