ಸ್ಯಾಂಡಲ್ ವುಡ್ ನ ಕ್ವೀನ್ ಖ್ಯಾತಿಯ ನಟಿ ರಮ್ಯ ಮತ್ತೆ ಸ್ಯಾಂಡಲ್ ವುಡ್ ಗೆ (Ramya Re Entry ) ಮರಳುತ್ತಾರೆ ಎಂಬ ಸುದ್ದಿ ಹಲವು ತಿಂಗಳಿನಿಂದ ಸದ್ದು ಮಾಡ್ತಿದೆ. ಆದರೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಮಾತ್ರ ಹೊರಬಿದ್ದಿಲ್ಲ. ಆದರೆ ಒಂದಿಷ್ಟು ವರ್ಷಗಳಿಂದ ಸಿನಿಮಾ ರಂಗ ಹಾಗೂ ಸಿನಿ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ರಮ್ಯ ಸದ್ಯ ಚಂದನವನದ ಜೊತೆ ಹಿಂದೆಂದಿಗಿಂತ ಹೆಚ್ಚು ಆಕ್ಟಿವ್ ಆಗಿದ್ದಾರೆ. ಹೀಗಿರುವಾಗಲೇ ರಮ್ಯ ಅಡ್ಡಾದಿಂದ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ರಮ್ಯ ಸಿನಿಮಾಗೆ ಬರೋದು ಖಚಿತವಾಗಿದ್ದು, ನಿರ್ದೇಶಕ ರಾಜ್ ಬಿ ಶೆಟ್ಟಿ ಸ್ಯಾಂಡಲ್ ವುಡ್ ಮೋಹಕ ತಾರೆಗೆ ಆಕ್ಷ್ಯನ್ ಕಟ್ ಹೇಳಲಿದ್ದಾರಂತೆ.
ಹೌದು ಮೋಹಕ ತಾರೆಯಾಗಿ, ಸ್ಯಾಂಡಲ್ ವುಡ್ ಪದ್ಮಾವತಿಯಾಗಿ ಮಿಂಚಿದ ನಟಿ ರಮ್ಯ ಮತ್ತೆ ಬಣ್ಣ ಹಚ್ಚೋದು ಖಚಿತ ಎನ್ನಲಾಗ್ತಿದೆ. ಇದಕ್ಕಾಗೇ ನಟಿ ರಮ್ಯ ಇತ್ತೀಚಿಗೆ ಕನ್ನಡ ಸಿನಿಮಾ ಶೂಟಿಂಗ್ ಸೆಟ್ ಗಳಿಗೆ ಆಗಾಗ ಭೇಟಿ ನೀಡುತ್ತಿದ್ದಾರೆ. ಈಗ ಬರ್ತಿರೋ ಬ್ರೇಕಿಂಗ್ ಸುದ್ದಿ ಪ್ರಕಾರ ಒಂದು ಮೊಟ್ಟೆಯ ಕತೆ ಖ್ಯಾತಿಯ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ನಟಿ ರಮ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹೀಗಾಗಿ ಸದ್ಯದಲ್ಲೇ ನಟಿ ರಮ್ಯ ನಟನೆಗೆ ಸಿದ್ಧವಾಗಲಿದ್ದಾರಂತೆ.
ಕಳೆದ ವಾರ ರಾಜ್ ಬಿ ಶೆಟ್ಟಿಯವರನ್ನು ಭೇಟಿ ಮಾಡಿದ ರಮ್ಯ ಕತೆ ಕೇಳಿದ್ದಾರಂತೆ. ರಾಜ್ ನಿರ್ದೇಶನದ ಸಿನಿಮಾದ ಕತೆ ರಮ್ಯಗೆ ಇಷ್ಟವಾಗಿರೋದರಿಂದ ಯೆಸ್ ಎಂದಿದ್ದಾರಂತೆ. ಚಿತ್ರಕ್ಕೆ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದ ರಾಜ್ ಶೆಟ್ಟಿ ಆಕ್ಷ್ಯನ್ ಕಟ್ ಹೇಳಲಿದ್ದರೇ ಸ್ವತಃ ನಟಿ ರಮ್ಯ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರಂತೆ.
ಆದರೆ ಸಿನಿಮಾ ಯಾವುದು ಅನ್ನೋ ಗುಟ್ಟು ಇನ್ನೂ ಹೊರಬಂದಿಲ್ಲ. ಇತ್ತೀಚಿಗೆ ರಮ್ಯ ಹೊಂಬಾಳೆ ಫಿಲ್ಸ್ಮ್ ನ ಸಹ ನಿರ್ಮಾಪಕ ಕಾರ್ತೀಕ್ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ನಟಿ ರಮ್ಯ ಹೊಂಬಾಳೆ ಫಿಲ್ಸ್ಮ್ ಜೊತೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿತ್ತು. ಒಟ್ಟಿನಲ್ಲಿ ನಟಿ ರಮ್ಯ ಚಂದನವನಕ್ಕೆ ಮರಳೋದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಕನ್ನಡದ ನಂಬರ್ ಒನ್ ಹಿರೋಯಿನ್ ಮರಳಿ ಬಣ್ಣ ಹಚ್ಚೋ ಗಳಿಗೆಗಾಗಿ ಲಕ್ಷಾಂತರ ಅಭಿಮಾನಿಗಳು ಕಾಯ್ತಿದ್ದಾರೆ.
ಇದನ್ನೂ ಓದಿ : Taapsee Pannu : ಕಾಫಿ ವಿತ್ ಕರಣ್ ಗೆ ಹೋಗೋಕೆ ಸೆಕ್ಸ್ ಲೈಫ್ ಇಂಟ್ರಸ್ಟಿಂಗ್ ಆಗಿರಬೇಕು: ತಾಪ್ಸೆ ಪನ್ನು ಹೊಸ ವಿವಾದ
Actress Ramya Re Entry Sandalwood, Ondu Motteya Kate Raj B Shetty Direction New Movie