ಕನ್ನಡ ಸಿನಿರಂಗದಲ್ಲಿ (Actress Ramya) ಮೋಹಕತಾರೆ, ಬ್ಯುಟಿ ಕ್ಯೂನ್ ಎಂದೇ ಪ್ರಖ್ಯಾತಿ ಪಡೆದ ನಟಿ ರಮ್ಯಾ ಒಂದು ಕಾಲದಲ್ಲಿ ಬಹು ಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ರಮ್ಯಾ ಕಳೆದ ಸುಮಾರು ವರ್ಷಗಳಿಂದ ಬಣ್ಣದಲೋಕದಿಂದ ದೂರ ಉಳಿದಿದ್ದರೂ ಕೂಡ ಅವರ ಮೇಲೆ ಕ್ರೇಜ್ ಅಭಿಮಾನಿಗಳಲ್ಲಿ ಕಡಿಮೆ ಆಗಿಲ್ಲ. ಇತ್ತೀಚೆಗೆ ನಟಿ ರಮ್ಯಾ ಬಣ್ಣದಲೋಕಕ್ಕೆ ಮತ್ತೆ ಬರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ನಟಿ ರಮ್ಯಾ ಹೊಸ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆರೆಂಜ್ ಕಲರ್ ಸೀರೆಯುಟ್ಟು, ಅದಕ್ಕೆ ಮ್ಯಾಚಿಂಗ್ ಜುವೇಲ್ ಹಾಕಿಕೊಂಡು ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ನಟಿ ರಮ್ಯಾ ಹಂಚಿಕೊಂಡ ಫೋಟೋಗೆ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಎರಡು ಲಕ್ಷಕ್ಕೂ ಅಧಿಕ ಲೈಕ್ ಒತ್ತಿದ್ದಾರೆ. ನಟಿ ರಮ್ಯಾ ಸಿನಿರಂಗಕ್ಕೆ ಕಮ್‌ಬ್ಯಾಕ್ ಮಾಡುವುದಾಗಿ ಹೇಳಿಕೊಂಡಾಗ, ಮೊದಲು ರಾಜ್ ಬಿ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಸ್ವಾತಿ ಮುತ್ತಿನ ಸಿನಿಮಾದ ನಿರ್ಮಾಣ ಜವಬ್ದಾರಿ ತೆಗೆದುಕೊಳ್ಳುವ ಮೂಲಕ ಪಾದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ : Me too case : ಮೀ ಟೂ ಕೇಸ್ : ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳದ ಬಗ್ಗೆ ಸಾಕ್ಷಿ ಕೊಡಿ, ನಟಿ ಶ್ರುತಿ ಹರಿಹರನ್‌ಗೆ ಕೋರ್ಟ್ ನೋಟಿಸ್


ಹಾಗಾಗಿ ಚಂದನವನದ ಪದ್ಮಾವತಿ ನಟಿ ರಮ್ಯ, ಡಾಲಿ ಧನಂಜಯ್ ಸಿನಿಮಾ ಮೂಲಕ ಬಹು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ. ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾ ಮೂಲಕ ನಟಿ ರಮ್ಯ ಸ್ಯಾಂಡಲ್ ವುಡ್ ಗೆ ಮರಳಲಿದ್ದಾರೆ. ಅಷ್ಟೇ ಅಲ್ಲದೇ ಉತ್ತರಕಾಂಡ ಸಿನಿಮಾ ಘೋಷಣೆಯನ್ನು ಡಾಲಿ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತಗೊಳಿಸಿದ್ದಾರೆ. ಸದ್ಯ ನಟಿ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಯಾವಾಗ ತಮ್ಮ ಮೆಚ್ಚಿನ ನಟಿಯನ್ನು ಬೆಳ್ಳಿತೆರೆ ಮೇಲೆ ಕಾಣುತ್ತೇವೆ ಎಂದು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.
Actress Ramya : The beauty queen Ramya looked very cute in orange color saree.