ಸೋಮವಾರ, ಏಪ್ರಿಲ್ 28, 2025
HomeCinemaನಟಿ ರಮ್ಯಾ ಸಾಕು ನಾಯಿ ಚಂಪಾ ನಾಪತ್ತೆ : ಹುಡುಕಿಕೊಟ್ರೆ ಸಿಗುತ್ತೆ ಬಂಪರ್ ಬಹುಮಾನ

ನಟಿ ರಮ್ಯಾ ಸಾಕು ನಾಯಿ ಚಂಪಾ ನಾಪತ್ತೆ : ಹುಡುಕಿಕೊಟ್ರೆ ಸಿಗುತ್ತೆ ಬಂಪರ್ ಬಹುಮಾನ

- Advertisement -

ಸ್ಯಾಂಡಲ್‌ವುಡ್‌ ಕ್ವೀನ್‌, ಮೋಹಕ ತಾರೆ ಎಂದೇ ಪ್ರಖ್ಯಾತಿ ಪಡೆದಿರುವ ನಟಿ ರಮ್ಯಾ ಸಾಕು ನಾಯಿ (Actress Ramya’s pet dog missing) ಕಾಣೆಯಾಗಿದೆ. ಕಳೆದು ಹೋದ ನಾಯಿಯನ್ನು ಹುಡುಕಿ ಕೊಟ್ಟವರಿಗೆ ಬಂಪರ್‌ ಬಹುಮಾನ ನೀಡುವುದಾಗಿ ಕೂಡ ನಟಿ ರಮ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ ಹಾಗೂ ಟ್ವಿಟರ್‌ನಲ್ಲಿ, ನನ್ನ ಸಾಕು ನಾಯಿ ಕಾಣೆಯಾಗಿದೆ. ಹುಡುಕಲು ಸಹಾಯ ಮಾಡಿಕೊಡಿ. ಕಪ್ಪು ಬಣ್ಣದ ನಾಯಿಗೆ ಕಣ್ಣು ಸರಿಯಾಗಿ ಕಾಣಿಸಲ್ಲ. ಸುರಕ್ಷಿತವಾಗಿ ಹುಡುಕಿ ಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು. ಇಂದಿನಿಂದ(ಮೇ 6) ರೇಶ್ ಕೋರ್ಸ್‌ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಿಂದ ಚಾಂಪ್ ಕಾಣೆಯಾಗಿದ್ದಾನೆ” ಎಂದು ರಮ್ಯಾ ಬರೆದುಕೊಂಡಿದ್ದಾರೆ. ಇನ್ನೂ ಇದನ್ನು ನೋಡಿದ ಅಭಿಮಾನಿಗಳು ಕಾಮೆಂಟ್‌ ಮಾಡುವ ಮೂಲಕ ಸಾಂತ್ವಾನ ಹೇಳಿದ್ದಾರೆ.

ಇನ್ನೂ ನಟಿ ಫೋಸ್ಟ್‌ನಲ್ಲಿ, ನಾಯಿ ಫೋಟೋ ಹಾಕಿ ಹುಡುಕಿ ಕೊಟ್ಟರೆ ಸೂಕ್ತವಾದ ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಅದರೊಂದಿಗೆ ಮೊಬೈಲ್‌ ನಂಬರ್‌ ಕೂಡ ಹಾಕಿದ್ದಾರೆ. ಇನ್ನೂ ಕೊನೆದಾಗಿ ನಾಯಿ ನೋಡಿರುವ ಬಗ್ಗೆ ಕೂಡ ಹಂಚಿಕೊಂಡಿದ್ದಾರೆ.

ನಟಿ ರಮ್ಯಾ ಮೊದಲಿನಿಂದಲೂ ಪ್ರಾಣಿ ಪ್ರಿಯರಾಗಿದ್ದು, ಅದರಲ್ಲೂ ಬಹಳ ವರ್ಷಗಳಿಂದ ವಿವಿಧ ತಳಿಯ ನಾಯಿಗಳನ್ನು ಮನೆಯಲ್ಲಿ ಸಾಕುತ್ತಿದ್ದಾರೆ. ವೀಕೆಂಡ್‌ ವಿತ್‌ ರಮೇಶ್‌ ಶೋ ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾಗಲೂ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಆಗ ಕೂಡ ನನಗೆ ನಾಯಿ ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ನಾಯಿಗಳು ಎಂದರೆ ನನಗೆ ಮಕ್ಕಳು ಇದ್ದ ಹಾಗೆ. ನನ್ನ ಬಳಿ ಈಗಲೂ ಎರಡು ನಾಯಿಗಳು ಇವೆ. ಒಂದು ನಾಯು ಹೆಸರು ಚಾಂಪ್‌. ಅದಕ್ಕೆ ಈಗ 16 ವರ್ಷ ವಯಸ್ಸು. ಚಾಂಪ್‌ಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಮತ್ತೊಂದು ನಾಯಿ ಹೆಸರು ರಾಣಿ ಎಂದು ಹೇಳಿದ್ದರು.

ಇದನ್ನೂ ಓದಿ : ಫೋಟೋಶೂಟ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡ ಬಿಗ್‌ ಬಾಸ್‌ ಖ್ಯಾತಿಯ ಸಾನ್ಯಾ ಅಯ್ಯರ್‌

ಇದನ್ನೂ ಓದಿ : ಮೌನವಾಗಿದ್ಯಾಕೇ ಮೋಹಕ ತಾರೆ ! ಕೊನೆಗೂ ಅಜ್ಞಾತವಾಸಕ್ಕೆ ಕಾರಣ ಕೊಟ್ಟ ರಮ್ಯ

ಸದ್ಯ ನಾಯಿಯನ್ನು ಕಳೆದುಕೊಂಡ ರಮ್ಯಾ ದುಃಖದಲ್ಲಿ ಇದ್ದಾರೆ. ಅವರಿಗಾಗಿ ಅಭಿಮಾನಿಗಳೂ ಹಾಗೂ ಸ್ನೇಹಿತರು ನಾಯಿಯನ್ನು ಕಂಡವರು ರಮ್ಯಾ ಅವರಿಗೆ ತಲುಪಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್‌ ಹಾಕಿದ್ದಾರೆ. ಕಳೆದೆರಡು ದಿನಗಳಿಂದ ರಮ್ಯಾ ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾಗ ಈ ಘಟನೆ ನಡೆದಿರಬಹುದು ಎನ್ನಲಾಗಿದೆ.

ಇದನ್ನೂ ಓದಿ : ವಿಶ್ವ ಸುಂದರಿ ಸ್ಪರ್ಧಿ ಸಿಯೆನ್ನಾ ವೀರ್ ದುರಂತ ಸಾವು

ಇದನ್ನೂ ಓದಿ : Sarath Babu : ಅಮೃತವರ್ಷಿಣಿ ಖ್ಯಾತಿಯ ಹಿರಿಯ ನಟ ಶರತ್ ಬಾಬು ಇನ್ನಿಲ್ಲ

Actress Ramya’s pet dog missing: If you find it, you will get a bumper prize

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular