ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಂತೇ ಸ್ಟಾರ್ ಪಟ್ಟಕ್ಕೆ ಏರುವ ನಟಿಮಣಿಯರ ನಡುವೇ ಆಕೆ ಹಮ್ಮು ಬಿಮ್ಮಿಲ್ಲದ ಹುಡುಗಿ ಅಂತನೇ ಫೇಮಸ್ ಆದವರು.ಅಷ್ಟೇ ಅಲ್ಲ ಕೋಟಿ ಕೋಟಿ ಆಫರ್ ಬಂದರೂ ಮುಖಕ್ಕೆ ಬಣ್ಣ ಹಚ್ಚೋದಿಲ್ಲ ಎಂದ ಸಹಜ ಸುಂದರಿ. ಯಾವ ನಾಯಕ ನಟರಿಗೂ ಕಮ್ಮಿಯಿಲ್ಲದಂತೇ ನಟಿಸುವ ಬ್ಯೂಟಿ ಸಾಯಿ ಪಲ್ಲವಿ (Sai Pallavi). ಲಕ್ಷಾಂತರ ಅಭಿಮಾನಿಗಳ ಮನಸೊರೆಗೊಳ್ಳುವ ಈ ಸುಂದರಿ ಈಗ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ.

ಹೌದು ಭಾಷೆಯ ಗಡಿ ದಾಟಿ ಭಾರತದಾದ್ಯಂತ ಲಕ್ಷಾಂತರ ಸಿನಿ ಪ್ರೇಮಿಗಳು ನಟಿ ಸಾಯಿಪಲ್ಲವಿಯನ್ನು ಆರಾಧಿಸುತ್ತಾರೆ. ಇಂತಿಪ್ಪ ನಟಿ ಸಾಯಿ ಪಲ್ಲವಿ ಈಗ ಸಿನಿಮಾದಿಂದಲೇ ನಿವೃತ್ತಿ ಪಡೆಯುತ್ತಾರೆ ಎಂಬ ಸುದ್ದಿ ಸದ್ದು ಮಾಡಲಾರಂಭಿಸಿದೆ. ಟಾಲಿವುಡ್,ಮಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗದಲ್ಲೂ ತಮ್ಮ ಪ್ರೌಢ ಅಭಿನಯದಿಂದಲೇ ಅಭಿಮಾನಿಗಳನ್ನು ಸೆಳೆದ ಸಾಯಿ ಪಲ್ಲವಿ, ನಟನೆಯ ಜೊತೆಗೆ ಸುಂದರ ನಾಟ್ಯದ ಮೂಲಕವೂ ಮನಗೆದ್ದವರು.

ಈಗ ತಮ್ಮನ್ನು ಆರಾಧಿಸುವ ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿರುವ ಸಾಯಿಪಲ್ಲವಿ ಸಿನಿಜರ್ನಿಯನ್ನೇ ಮುಗಿಸುತ್ತಿದ್ದಾರಂತೆ. ಸಾಯಿ ಪಲ್ಲವಿ ನಟನೆಯ ಕೊನೆಯ ಚಿತ್ರ ಶ್ಯಾಮ್ ಸಿಂಗ್ ರಾಯ್. ಈ ಸಿನಿಮಾದಲ್ಲಿ ತಮ್ಮ ಡ್ಯಾನ್ಸ್ ಪ್ರತಿಭೆಯನ್ನು ಹೊರಹಾಕುವಂತೆ ಕುಣಿದಿದ್ದ ನಟಿ ದೇವದಾಸಿ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದರು. ಆದರೆ ಈ ಸಿನಿಮಾದ ಬಳಿಕ ಸಾಯಿ ಪಲ್ಲವಿ, ಮಲೆಯಾಳಂ ಅಥವಾ ತೆಲುಗು ಸೇರಿದಂತೆ ಯಾವ ಸಿನಿಮಾವನ್ನು ಒಪ್ಪಿಕೊಳ್ಳುತ್ತಿಲ್ಲವಂತೆ. ಶ್ಯಾಮಸಿಂಗ್ ರಾಯ್ ಬಳಿಕ ಸಾಯಿ ಪಲ್ಲವಿ ಯಾವುದೇ ಸಿನಿಮಾ ಕತೆಯನ್ನು, ಸಿನಿಮಾವನ್ನು ಒಪ್ಪಿಕೊಳ್ಳದೇ ಇರೋದು ಸಾಯಿಪಲ್ಲವಿ ನಟನೆಗೆ ವಿದಾಯ ಹೇಳಲು ನಿರ್ಧರಿಸಿದ್ದಾರಾ ಎನ್ನುವ ಪ್ರಶ್ನೆ ಮೂಡಿಸಿದೆ. ಆದರೆ ಈ ಬಗ್ಗೆ ನಟಿ ಸಾಯಿ ಪಲ್ಲವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಸುದ್ದಿ ಮಾತ್ರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಪ್ರೇಮಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಸಾಯಿ ಪಲ್ಲವಿ ಇದುವರೆಗೂ ಹಲವಾರು ಸಿನಿಮಾದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ರಶ್ಮಿಕಾ ಹಾಗೂ ಶರ್ವಾನಂದ್ ಅಭಿನಯದ ಆಡವಾಳ್ಳು ಮೀಕು ಜೋಹಾರ್ಲು ಚಿತ್ರದ ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದರು. ಈ ವೇಳೆ ಕೇಳಿಬಂದ ಅಭಿಮಾನಿಗಳ ಹರ್ಷೋದ್ಘಾರವೇ ಸಾಯಿ ಪಲ್ಲವಿ ಜನಪ್ರಿಯತೆಗೆ ಸಾಕ್ಷಿ ಒದಗಿಸಿತ್ತು.
ಇದನ್ನೂ ಓದಿ : RRR vs James : ಆರ್‌ಆರ್‌ಆರ್‌ಗಾಗಿ ಬಲಿಯಾಗುತ್ತಾ ಜೇಮ್ಸ್ ಚಿತ್ರ : ಖಡಕ್ ಎಚ್ಚರಿಕೆ ಕೊಟ್ಟ ಕರವೇ
ಇದನ್ನೂ ಓದಿ : ಮತ್ತೊಮ್ಮೆ ಸ್ನೇಹಕ್ಕೆ ಮಿಡಿದ ಸುದೀಪ್ : ವಿಕ್ರಾಂತ್ ರೋಣಾ ಜಾನಿ ಮಾಸ್ಟರ್ ಗೆ ಕೊಟ್ಟರು ಮಹಿಂದ್ರಾ ಥಾರ್
( actress Sai Pallavi Good bye for Acting)