ಮಂಗಳವಾರ, ಏಪ್ರಿಲ್ 29, 2025
HomeCinemaಡಿವೋರ್ಸ್ ಖುಷಿಗೆ ಫೋಟೋಶೂಟ್ ಮಾಡಿದ ತಮಿಳು ಕಿರುತೆರೆ ನಟಿ ಶಾಲಿನಿ

ಡಿವೋರ್ಸ್ ಖುಷಿಗೆ ಫೋಟೋಶೂಟ್ ಮಾಡಿದ ತಮಿಳು ಕಿರುತೆರೆ ನಟಿ ಶಾಲಿನಿ

- Advertisement -

ತಮಿಳು ಕಿರುತೆರೆ ನಟಿ ಶಾಲಿನಿ ಇತ್ತೀಚೆಗೆ ತಮ್ಮ ವಿಚ್ಛೇದನ ಘೋಷಣೆಯನ್ನು ವಿಭಿನ್ನ ಶೈಲಿಯಲ್ಲಿ (Actress Shalini Divorce Photoshoot) ಹೇಳಿಕೊಂಡಿದ್ದಾರೆ. ನಟಿ ತನ್ನ ಮಾಜಿ ಪತಿಯಿಂದ ವಿಚ್ಛೇದನವನ್ನು ಪಡೆದಿದ್ದು, ಆ ಖುಷಿಯನ್ನು ಫೋಟೋಶೂಟ್ ಮಾಡಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಶಾಲಿನಿ ಫೋಟೋಶೂಟ್‌ನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಸಖತ್‌ ವೈರಲ್‌ ಆಗಿದೆ.

ನಟಿ ಶಾಲಿನಿ ವಿಚ್ಛೇದನದ ಸುದ್ದಿಯನ್ನು ವಿಶೇಷಗೊಳಿಸಿದ್ದು, ಅದನ್ನು ಸಮಾಜಕ್ಕೆ ಹೇಳಿಕೊಂಡ ರೀತಿ ಕೂಡ ಬಹಳ ವಿಭಿನ್ನವಾಗಿದೆ. ನಟಿ ಶಾಲಿನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಧ್ವನಿಯಿಲ್ಲದವರಿಗೆ ವಿಚ್ಛೇದಿತ ಮಹಿಳೆಯ ಸಂದೇಶ. ಕೆಟ್ಟ ದಾಂಪತ್ಯವನ್ನು ಬಿಡುವುದು ತಪ್ಪಲ್ಲ, ಏಕೆಂದರೆ ನೀವು ಸಂತೋಷವಾಗಿರಲು ಅರ್ಹರಾಗಿದ್ದೀರಿ ಮತ್ತು ಎಂದಿಗೂ ಕಡಿಮೆ ಮಾಡಲು ಅರ್ಹರಾಗಿರುವುದಿಲ್ಲ, ನಿಮ್ಮ ಜೀವನದ ಮೇಲೆ ಹಿಡಿತ ಸಾಧಿಸಿ ಮತ್ತು ನಿಮ್ಮ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರಚಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿ. ವಿಚ್ಛೇದನವು ವಿಫಲವಲ್ಲ !!! ಇದು ನಿಮಗೆ ಒಂದು ಮಹತ್ವದ ತಿರುವು ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಮದುವೆಯನ್ನು ಬಿಟ್ಟು ಒಬ್ಬಂಟಿಯಾಗಿ ನಿಲ್ಲಲು ತುಂಬಾ ಧೈರ್ಯ ಬೇಕು ಹಾಗಾಗಿ ಅಲ್ಲಿರುವ ನನ್ನ ಎಲ್ಲಾ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಅರ್ಪಿಸುತ್ತೇನೆ ಎಂದು ರೆಡ್‌ ಕಲರ್‌ ಡ್ರೆಸ್‌ನಲ್ಲಿ ಡಿವೋರ್ಸ್‌ ಎನ್ನುವ ಪದಗಳ ಸಾಲುಗಳನ್ನು ಹಿಡಿದು ನಿಂತ ಪೋಟೋದೊಂದಿಗೆ ಹಂಚಿಕೊಂಡಿದ್ದಾರೆ.

ನಟಿ ಶಾಲಿನಿ ಈ ತಮಿಳು ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ನಟಿ ಜನಪ್ರಿಯತೆ ಗಳಿಸಿದರು. ನಂತರ ಅವರು ‘ಸೂಪರ್ ಮಾಮ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಶಾಲಿನಿಯ ಮದುವೆ ರಿಯಾಜ್ ಅವರನ್ನು ಮದುವೆಯಾಗಿದ್ದರು. ದಂಪತಿಗಳು ಸ್ವಲ್ಪ ಕಾಲ ಒಟ್ಟಿಗೆ ಸಂತೋಷದಿಂದ ವಾಸಿಸುತ್ತಿದ್ದರು. ನಂತರ ರಿಯಾ ಎಂಬ ಮಗಳಿಗೆ ಪೋಷಕರಾಗಿದ್ದಾರೆ. ಆದರೆ, ಒಂದೆರಡು ತಿಂಗಳ ಹಿಂದೆ ಶಾಲಿನಿ ತನ್ನ ಪತಿ ರಿಯಾಜ್‌ಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಹೀಗಾಗಿ ದಂಪತಿಗಳು ವಿಚ್ಛೇದನಕ್ಕೆ ಮುಂದಾದರು. ಸದ್ಯ ನಟಿ ಶಾಲಿನಿ ವಿಚ್ಛೇದನದ ನಂತರ, ಅದನ್ನು ಅನನ್ಯ ಮತ್ತು ವಿಶೇಷವಾಗಿಸಲು ಬಯಸಿದ್ದರು. ಅವರು ಡ್ರೆಸ್ ಅಪ್ ಮಾಡಲು ಮತ್ತು ಫೋಟೋಶೂಟ್‌ನೊಂದಿಗೆ ಈ ಸಂದರ್ಭವನ್ನು ಆಚರಿಸಲು ನಿರ್ಧರಿಸಿದರು. ಫೋಟೋಗಳನ್ನು ಹಂಚಿಕೊಳ್ಳಲು ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಸದ್ಯ ಅದು ಸಖತ್‌ ವೈರಲ್ ಆಗುತ್ತಿದೆ.

ಇದನ್ನೂ ಓದಿ : Met Gala 2023 : ಜಗತ್ತಿನ ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ನಲ್ಲಿ ನಟಿ ಆಲಿಯಾ ಭಟ್‌ ಧರಿಸಿದ ಗೌನ್‌ ಬೆಲೆ ಎಷ್ಟು ಗೊತ್ತೆ ?

ಫೋಟೋಗಳ ಜೊತೆಯಲ್ಲಿ, ಶಾಲಿನಿ ವಿಚ್ಛೇದನ ಎಂದು ಬರೆದಿರುವ ಬಂಟಿಂಗ್ ಅನ್ನು ಹಿಡಿದಿಟ್ಟುಕೊಳ್ಳುವುದು, ತನ್ನ ಪತಿಯ ಫೋಟೋವನ್ನು ಹರಿದು ಹಾಕುವುದನ್ನು ಕಾಣಬಹುದು. ಮತ್ತೊಂದೆಡೆ, ವಿಚ್ಛೇದನದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ತೀರ್ಪಿನೊಂದಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲ ಎದ್ದಿದೆ. ಹಲವು ನೆಟಿಜನ್‌ಗಳು ಈ ನಿರ್ಧಾರವನ್ನು ಸ್ವಾಗತಿಸಿ ಸಂಭ್ರಮಿಸಿದ್ದಾರೆ.

Actress Shalini Divorce Photoshoot : Actress Shalini conducts Divorce Photoshoot for the first time

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular