ಉಡುಪಿ : ಬಾಲಿವುಡ್ ಖ್ಯಾತನಟಿ, ಕರಾವಳಿಯ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಉಡುಪಿ, ದಕ್ಷಿಣ ಜಿಲ್ಲೆಯ ಹಲವು ದೇವಾಲಯಗಳಿಗೆ ಭೇಟಿ ನೀಡಿ ಹರಿಕೆ ಸಲ್ಲಿಸಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಢಕ್ಕೆಬಲಿ ಸೇವೆ ನೆರವೇರಿಸಿದ್ದಾರೆ.
ತುಳುನಾಡಿನ ಸಂಪ್ರದಾಯಗಳು ಸದಾ ಪಾಲಿಸಿಕೊಂಡು ಬರುತ್ತಿರುವ ಶಿಲ್ಪಾ ಶೆಟ್ಟಿ ಈ ಬಾರಿ ಮತ್ತೆ ಕರಾವಳಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಪತಿ ರಾಜ್ ಕುಂದ್ರಾ ಹಾಗೂ ಮಕ್ಕಳು ತಾಯಿಯ ಜೊತೆಗೆ ತವರಿಗೆ ಬಂದಿರುವ ಶಿಲ್ಪಾ ಶೆಟ್ಟಿ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಹೊಸ ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ್ರು. ಸದ್ಯ ಮಾರಿಗುಡಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಶಿಲ್ಪಾ ಶೆಟ್ಟಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಅಲ್ಲದೇ ನೂತನ ದೇವಾಲಯವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
Also Read : ಮೇಘನಾ ರಾಜ್ ಸರ್ಜಾ ಹೊಸ ಮನೆ : ಚಿರು ಮನೆ ತೊರೆಯೋ ನಿರ್ಧಾರ ಮಾಡಿದ್ಯಾಕೆ ಗೊತ್ತಾ ?
ಹೊಸ ಮಾರಿಗುಡಿ ದೇವಾಸ್ಥಾನದ ವತಿಯಿಂದ ನಟಿ ಶಿಲ್ಪಾ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲೆಯ ಮತ್ತೊಂದು ಕಾರಣೀಕ ಕ್ಷೇತ್ರ ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಕೂಡ ಭೇಟಿ ನೀಡಿದ್ದಾರೆ. ಬ್ರಹ್ಮಸ್ಥಾನದಲ್ಲಿ ಪತಿ ರಾಜ್‌ಕುಂದ್ರಾ ಜೊತೆಗೂಡಿ ನಟಿ ಶಿಲ್ಪಾ ಶೆಟ್ಟಿ ಅವರು ಢಕ್ಕೆ ಬಲಿ ಹರಿಕೆಯನ್ನು ತೀರಿಸಿದ್ದಾರೆ.

ಪಡುಬಿದ್ರಿಯ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನವು ಕಾರಣೀಯ ಕ್ಷೇತ್ರ. ಇಲ್ಲಿ ಬೆಳಕಿನ ಸೇವೆಯಿಲ್ಲದೇ ಢಕ್ಕೆಬಲಿ ನೆರವೇರುತ್ತದೆ. ದೊಂದಿ ಬೆಳಕಿನಲ್ಲಿ ನಡೆಯಲಿರುವ ಢಕ್ಕೆ ಬಲಿ ಸೇವೆಯಲ್ಲಿ ಶಿಲ್ಪಾ ಶೆಟ್ಟಿ ಪಾಲ್ಗೊಂಡಿದ್ದರು. ವರ್ಷದಲ್ಲಿ ಒಮ್ಮೆಯಾದ್ರೂ ಶಿಲ್ಪಾ ಶೆಟ್ಟಿ ತವರಿಗೆ ಆಗಮಿಸಿ, ದೇವಾಲಯಗಳಿಗೆ ಭೇಟಿ ನೀಡುವುದು ಮಾಮೂಲು.
Also Read : ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿಕೊಟ್ಟ ರಾಧಿಕಾ ಪಂಡಿತ್ : ಪೋಟೋ ವೈರಲ್
Actress Shilpa Shetty and family visit kapu marigudi and Dakke Bali seve in Khadgeshwari Brahmasthana