ಬಾಲಿವುಡ್, ಸ್ಯಾಂಡಲ್ ವುಡ್,ಟಾಲಿವುಡ್ ಹಾಲಿವುಡ್ ಹೀಗೆ ಸಿನಿಮಾ ರಂಗ ಯಾವುದೇ ಇರಲಿ, ಸೆಲೆಬ್ರೇಟಿಗಳ ಟ್ರಿಪ್ ಡೆಸ್ಟಿನೇಶನ್ ಮಾತ್ರ ಒಂದೇ ಅದು ಮಾಲ್ಡೀವ್ಸ್. ಸಿನಿಮಾ ಮಂದಿಯ ತವರಿನಂತಿರೋ ಮಾಲ್ಡೀವ್ಸ್ ಗೆ ಟ್ರಿಪ್ ಹೋಗಿರೋ ನಟಿ, ಮಿಲ್ಕಿ ಬ್ಯೂಟಿ ತಮನ್ನಾ(Actress Tamanna ) ಐಸ್ ಕ್ರೀಂ ಮಾರಲು ಹೋಗಿದ್ದಾರೆ. ಅಯ್ಯೋ ಸಾಲು ಸಾಲು ಸಿನಿಮಾ, ಕೋಟಿಗಟ್ಟಲೇ ಸಂಭಾವನೆ ಪಡೆಯೋ ತಮನ್ನಾಗೆ ಮಾಲ್ಡೀವ್ಸ್ ನಲ್ಲಿ ಐಸ್ ಕ್ರೀಂ ಮಾರುವಂತಹ ಸ್ಥಿತಿ ಯಾಕೆ ಬಂತು ಅಂತ ನೀವು ಯೋಚ್ನೇ ಮಾಡ್ತಿದ್ದೀರಾ, ತಮನ್ನಾ ಐಸ್ ಕ್ರೀಂ ಮಾರಿದ್ದು ದುಡ್ಡು ಗಳಿಸೋಕಲ್ಲ.ಬದಲಾಗಿ ಪೋಟೋಗೆ ಪೋಸ್ ನೀಡಲು.

ಹೌದು, ನಟಿ ತಮನ್ನಾ, ಮಾಲ್ಡೀವ್ಸ್ ನಲ್ಲಿ ಹಿಂದೆಂದಿಗಿಂತ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ತಮನ್ನಾ (Actress Tamanna) ಹಾಟ್ ಹಾಟ್ ಪೋಸ್ ಕೊಡಲು ಜೊತೆಗೆ ಐಸ್ ಕ್ರೀಂ ಮಾರಾಟ ಮಾಡುವ ಬೈಸಿಕಲ್ ನಲ್ಲಿ ಕುಳಿತು ಪೋಸ್ ನೀಡಿದ್ದಾರೆ. ಶಾರ್ಟ್ ಸ್ಕರ್ಟ್ ನಂತಹ ಉಡುಗೆ, ಅದಕ್ಕೊಂದು ಒಫನ್ ಜಾಕೆಟ್ ತೊಟ್ಟಿರೋ ತಮನ್ನಾ ಐಸ್ ಕ್ರೀಂ ಬಾಸ್ಕೆಟ್ ಹಾಕಲಾದ ಸೈಕಲ್‌ಮೇಲೆರಿ ಹೊರಟಂತೆ ಪೋಸ್ ನೀಡಿದ್ದಾರೆ. ಈ ಪೋಟೋ ವನ್ನು ನಟಿ ತಮನ್ನಾ, ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ Guess Who has all the ice cream in the trunk ಎಂದು ಕ್ಯಾಪ್ಸನ್ ನೀಡಿದ್ದಾರೆ.

ಕಡಲ ತೀರದ ಸುಂದರ ಸಂಜೆ ಹಾಗೂ ಸುಂದರ ಸಂಜೆಗೆ ಸ್ಪರ್ಧೆಯೊಡ್ಡುವಂತಹ ಸುಂದರ ಮೈಮಾಟ ಹಾಗೂ ತಿಳಿ ಹಾಲಿನ ಬಣ್ಣದ ತಮನ್ನಾ ಪೋಟೋಗೆ ಸಾವಿರಾರು ಅಭಿಮಾನಿ ಗಳು ಲೈಕ್ ಒತ್ತಿದ್ದಾರೆ. ಕೇವಲ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾ ಮಾತ್ರವಲ್ಲದೇ ತಮನ್ನಾ (Actress Tamanna)ಬಾಲಿವುಡ್ ಅಲ್ಬಂ ಗಳಲ್ಲೂ ಕೆಲಸ ಮಾಡುತ್ತಿದ್ದು, ಇತ್ತೀಚಿಗಷ್ಟೇ ಬಾಲಿವುಡ್ ನ ಸೆಲೆಬ್ರೆಟಿ ನೃತ್ಯ ಸಂಯೋಜಕ ಹಾಗೂ ಸಂಗೀತ ನಿರ್ದೇಶಕ ಬಾದ್ ಶಾ ಜೊತೆಗೆ ಅಲ್ಬಂ ನಲ್ಲಿ ತಮನ್ನಾ ಕುಣಿದಿದ್ದಾರೆ.
ತಬಾಹಿ ಹೆಸರಿನ ಈ ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಂದಾಜು 23 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಮಾತ್ರವಲ್ಲದೇ ತಮನ್ನಾ ಈ ವಿಡಿಯೋದಲ್ಲಿ ಸಖತ್ ಬೋಲ್ಡಾಗಿ ಕಾಣಿಸಿಕೊಳ್ಳುವ ಅಭಿಮಾನಿಗಳ ಗಮನ ಸೆಳೆದಿದ್ದರು. ಈ ಅಲ್ಬಂ ಬಳಿಕ ತಮನ್ನಾ ಮಾಲ್ಡೀವ್ಸ್ ಗೆ ಹಾರಿದ್ದು ಜಾಲಿ ಡೇಸ್ ಎಂಜಾಯ್ ಮಾಡ್ತಿದ್ದಾರೆ.
ಇದನ್ನೂ ಓದಿ : ಗುಜರಾತ್ ಫೈಲ್ಸ್ ತೆರೆಗೆ ತರುತ್ತೇನೆ : ಅಡ್ಡಿ ಪಡಿಸಲ್ಲ ಎಂದು ಮಾತು ಕೊಡಿ: ಮೋದಿಗೆ ಸವಾಲೆಸೆದ ನಿರ್ದೇಶಕ
ಇದನ್ನೂ ಓದಿ : ಇದು ರಾಖಿ ಬಾಯ್ ಯಶ್ ತೂಫಾನ್ : ರಿಲೀಸ್ ಆಯ್ತು ಕೆಜಿಎಫ್-2 ಹಾಡು
( Actress Tamanna selling ice cream in Maldives )