ಸ್ಯಾಂಡಲ್‌ವುಡ್ ನಟಿ ಉಷಾ ಅಲಿಯಾಸ್ ಉಷಾ ರವಿಶಂಕರ್ (Actress Usha arrest) ಅವರನ್ನು ವಂಚನೆ ಪ್ರಕರಣದಲ್ಲಿ ಶಿವಮೊಗ್ಗದ ವಿನೋಬನಗರದ ಪೊಲೀಸರು ಬಂಧಿಸಿದ್ದಾರೆ. ನಟಿ ಉಷಾ ಅವರು ಸುಮಾರು 6.5ಲಕ್ಷ ರೂನಷ್ಟು ಹಣ ಪಡೆದು ಮರಳಿ ಕೊಡದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಶರವಣನ್ ಎನ್ನುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಖಾಸಗಿ ದೂರಿನ ಮೇರೆಗೆ ನ್ಯಾಯಾಲಯಾದ ಆದೇಶದ ಮೇರೆಗೆ ಪೊಲೀಸರು ನಟಿ ಉಷಾ ಅವರನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ ?
ಶರವಣನ್ ಅವರು ಸೀರಿಯಲ್ ಹಾಗೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರಿಗೆ ನಟಿ ಉಷಾ ಅವರು ಪರಿಚಯವಾಗಿ, ಮೊಬೈಲ್‌ನಲ್ಲಿ ಚಾಟ್ ಮಾಡುತ್ತಾ ಪ್ರೀತಿ ಚಿಗುರಿದೆ. ನಂತರ ಪ್ರಣಯವು ಕೊನೆಗೆ ವಂಚನೆಯಲ್ಲಿ ಮುಕ್ತಾಯವಾಗಿದೆ. ಅಷ್ಟೇ ಅಲ್ಲದೇ ಮುಂದೆ ಇಬ್ಬರು ತಮ್ಮ ಮದುವೆಯ ಬಗ್ಗೆ ಸಹ ಆಲೋಚನೆ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ನಡುವೆ ನಟಿ ಉಷಾ ನನಗೆ ಸಮಸ್ಯೆ ಇದೆ ಹಣ ಬೇಕೆಂದು ಶರವಣನ್‌ರವರ ಬಳಿ ಕೇಳಿದಾಗ ಅವರು, ತಮ್ಮ ಬಳಿ ಹಣ ಇಲ್ಲದೇ ಹೋದಾಗ ಬ್ಯಾಂಕ್‌ನಲ್ಲಿ ಸಾಲ ಮಾಡಿ, 5 ಲಕ್ಷ ರೂ ನೀಡಿದ್ದಾರೆ. ಅಲ್ಲದೇ ಇವರ ಬಳಿ ಇದ್ದ ಕ್ರೆಡಿಟ್ ಕಾರ್ಡ್ ಪಡೆದು ಉಷಾ ಅದರಲ್ಲೂ ಸಹ ಸುಮಾರು 1.5 ಲಕ್ಷ ರೂ.ರಷ್ಟು ಹಣ ತೆಗೆದುಕೊಂಡಿರುತ್ತಾರೆ. ಇದಾದ ಬಳಿಕ ಕೊಟ್ಟ ಹಣವನ್ನು ವಾಪಸ್ ಕೇಳಿದಾಗ ಉಷಾ ನೀಡದೇ ಸತಾಯಿಸಿದ್ದಾರೆ.
ನಂತರ ದಿನಗಳಲ್ಲಿ ಶರವಣನ್‌ಗೆ ನಟಿ ಉಷಾ ಚೆಕ್ ನೀಡಿದ್ದಾರೆ. ಆದರೆ ಚೆಕ್ ಸಹ ಬೌನ್ಸ್ ಆಗುತ್ತದೆ. ಇದರಿಂದ ಶರವಣನ್ ನನಗೆ ಮೋಸವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ. ಆದರೆ ಅದು ಪ್ರಯೋಜನ ಆಗಿರುವುದಿಲ್ಲ. ನಂತರ ನ್ಯಾಯಾಲಯದ ಮೋರೆ ಹೋಗಿದ್ದಾರೆ.
ಇದನ್ನೂ ಓದಿ : Adipurush box office collection : ಆದಿಪುರುಷ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ ?
ವಕೀಲರಾದ ವಿಶ್ವ ಅವರು ಪೊಲೀಸರು ಸಹಕರಿಸದೇ ಹೋದಾಗ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವಂತೆ ಸೂಚಿಸುತ್ತಾರೆ. ಖಾಸಗಿ ದೂರನ್ನು ಪರಿಗಣಿಸಿದ ನ್ಯಾಯಾಲಯ ಉಷಾ ಅವರಿಗೆ ನೋಟಿಸ್ ನೀಡಿದ್ದು, ವಿಳಾಸ ಸಮಸ್ಯೆಯಿಂದ ನೋಟಿಸು ತಲುಪಿರುವುದಿಲ್ಲ. ನಂತರ ವಾಟ್ಸ್ ಆಪ್ ದಿಂದ ನೋಟಿಸ್ ನೀಡಲಾಗಗಿದ್ದು, ನಂತರ ಉಷಾರವರು ತಮ್ಮ ವಕೀಲ ಮೂಲಕ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಕೋಟರಾ ವಾರಂಟ್ ಜಾರಿ ಮಾಡಿರುತ್ತದೆ. ಅದರಂತೆ ವಾರೆಂಟ್ ಪಡದ ವಿನೋಬನಗರದ ಪೊಲೀಸರರು ಉಷಾರನ್ನು ಬಂಧಿಸಿರುತ್ತದೆ. ಇನ್ನು ಮುಂದೇನು ಆಗುತ್ತದೆ ಎಂದು ಕಾದುನೋಡಬೇಕಿದೆ.
Actress Usha arrest : Pranaya, Dokha Famous Kannada actress Usha arrested