ಚೆನ್ನೈ : ತಮಿಳು ಕಿರುತೆರೆಯ ಖ್ಯಾತ ನಟಿ ವಿ.ಜೆ. ಚಿತ್ರಾ ಆತ್ಮಹತ್ಯೆ ನಿಗೂಢ ಸಾವಿನ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಆತ್ಮಹತ್ಯೆಗೆ ಶರಣಾಗುವ ಕೆಲವೇ ದಿನಗಳ ಮುನ್ನ ನಟಿ ಗುಟ್ಟಾಗಿ ಉದ್ಯಮಿಯೋರ್ವರನ್ನು ಮದುವೆಯಾಗಿದ್ರು ಅನ್ನೋ ವಿಚಾರ ಇದೀಗ ಬಯಲಾಗಿದೆ.

ತಮಿಳು ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಳಿಸಿದ್ದ ಖ್ಯಾತ ನಟಿ ವಿ.ಜೆ. ಚಿತ್ರಾ ಪಂಚತಾರಾ ಹೋಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಟಿಯಾಗಿ, ನಿರೂಪಕಿಯಾಗಿ ಹೆಸರು ಮಾಡಿದ್ದ ಚಿತ್ರಾ ಕೇವಲ 28 ವರ್ಷ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಚಿತ್ರಾ ಸಾವಿನ ಪ್ರಕರಣ ಹಲವು ತಿರುವುಗಳನ್ನು ಪಡೆಯುತ್ತಿದೆ. ಅದ್ರಲ್ಲೂ ಇದೊಂದು ಕೊಲೆಯೋ, ಇಲ್ಲಾ ಆತ್ಮಹತ್ಯೆ ಯೋ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ಶೂಟಿಂಗ್ ಮುಗಿಸಿ ತಡರಾತ್ರಿ 2.30ರ ಸುಮಾರಿಗೆ ಹೋಟೆಲ್ ಗೆ ಆಗಮಿಸಿದ್ದ ಚಿತ್ರಾ ಪತಿ ಹೇಮಂತ್ ಬಳಿಯಲ್ಲಿ ತಾನು ಪ್ರೆಶ್ ಆಗಿ ಬರೋದಾಗಿ ಹೇಳಿ ರೂಮ್ ಗೆ ತೆರಳಿದ್ದರು. ಸುಮಾರು ಎರಡು ಗಂಟೆಯಾದ್ರೂ ರೂಮಿನಿಂದ ಹೊರ ಬಾರದೇ ಇದ್ದಾಗ ಹೋಟೆಲ್ ಸಿಬ್ಬಂದಿಗಳ ಸಹಾಯದಿಂದ ರೂಮ್ ಲಾಕ್ ಓಪನ್ ಮಾಡಲಾಗಿತ್ತು. ರೂಮಿನಲ್ಲಿ ಚಿತ್ರಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರದಲ್ಲಿ ಚಿತ್ರಾ ಹಣಕಾಸಿನ ಸಮಸ್ಯೆಯಿಂದಾಗಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆನನ್ಲಾಗುತ್ತಿದೆ.

ಆದರೆ ಶೂಟಿಂಗ್ ಗೆ ತೆರಳಿದ್ದ ಚಿತ್ರಾ ಎಲ್ಲರೊಂದಿಗೂ ಚೆನ್ನಾಗಿಯೇ ಮಾತಾಡಿಕೊಂಡಿದ್ದರು. ಇನ್ ಸ್ಟಾ ಗ್ರಾಮ್ ನಲ್ಲಿಯೂ ತನ್ನ ಶೂಟಿಂಗ್ ಪೋಟೊಗಳನ್ನು ಶೇರ್ ಮಾಡಿದ್ದಾರೆ. ಹೀಗಾಗಿ ಆಕೆ ಖಿನ್ನತೆಯಿಂದ ಬಳಲುತ್ತಿದ್ದಳು ಅನ್ನೋದು ಕಂಡು ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿಯೇ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆ ಚಿತ್ರಾ ಗಲ್ಲದ ಮೇಲೆ ರಕ್ತ ಹೆಪ್ಪುಗಟ್ಟಿದ ಗುರುತುಗಳಿವೆ ಎನ್ನಲಾಗುತ್ತಿದೆ.

ಕೆಲವೇ ತಿಂಗಳ ಹಿಂದೆ ಚಿತ್ರಾ ಅವರು ಉದ್ಯಮಿ ಹೇಮಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕ ಅವರು ಹೇಮಂತ್ ಜೊತೆ ಹೋಟೆಲ್‌ನಲ್ಲಿಯೇ ವಾಸಿಸುತ್ತಿದ್ದರು. ಆದರೆ ಪೊಲೀಸ್ ತನಿಖೆಯ ಹೊತ್ತಲ್ಲಿ ಚಿತ್ರಾ ಮದುವೆಯ ವಿಚಾರ ಬಯಲಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಚಿತ್ರಾ ಉದ್ಯಮಿ ಹೇಮಂತ್ ಜೊತೆಗೆ ಗುಟ್ಟಾಗಿ ಮದುವೆಯಾಗಿದ್ದರಂತೆ. ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ರಂತೆ. ಹೇಮಂತ್ ಈ ವಿಚಾರವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆನ್ನಲಾಗುತ್ತಿದೆ.

ಚಿತ್ರಾ ಸಾವಿನ ನಂತರದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ವರದಿ ಇನ್ನಷ್ಟೇ ಹೊರಬರಬೇಕಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ಅಂಶಗಳ ಆಧಾರದ ಮೇಲೆಯೇ ಪೊಲೀಸರು ತನಿಖೆಯನ್ನು ನಡೆಸುವ ಸಾಧ್ಯತೆಯಿದೆ.