ಮಂಗಳವಾರ, ಏಪ್ರಿಲ್ 29, 2025
HomeCinemaFIR Against Allu Arjun : ಜಾಹೀರಾತು ತಂದ ಸಂಕಷ್ಟ: ಅಲ್ಲೂ ಅರ್ಜುನ್ ವಿರುದ್ಧ FIR

FIR Against Allu Arjun : ಜಾಹೀರಾತು ತಂದ ಸಂಕಷ್ಟ: ಅಲ್ಲೂ ಅರ್ಜುನ್ ವಿರುದ್ಧ FIR

- Advertisement -

ಪುಷ್ಪ ಸಿನಿಮಾದ ಮೂಲಕ ವಿಶ್ವದ ಗಮನ ಸೆಳೆದ ತೆಲುಗು ನಟ ಅಲ್ಲೂ ಅರ್ಜುನ್ (FIR Against Allu Arjun) ಈಗ ಮನೆಮಾತಾಗಿದ್ದಾರೆ. ಸದ್ಯ ಪುಷ್ಪ ಸಿನಿಮಾ ಸಿದ್ದತೆಯಲ್ಲಿದ್ದ ಅಲ್ಲೂ ಅರ್ಜುನ್ ಗೆ ಈಗ ಶಾಕ್ ವೊಂದು ಎದುರಾಗಿದೆ. ಪುಷ್ಪ ಸಿನಿಮಾದ ಯಶಸ್ಸಿನ ಬಳಿಕ ಸಾಕಷ್ಟು ಸಿನಿಮಾದಲ್ಲಿ‌‌ಕಾಣಿಸಿಕೊಂಡಿದ್ದ ಅಲ್ಲೂ ಅರ್ಜುನ್ ಗೆ ಈ ಜಾಹೀರಾತೇ ಮುಳುವಾಗಿದ್ದು, ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ ಅಲ್ಲೂ ಅರ್ಜುನ್ ವಿರುದ್ಧ ಎಫ್ ಆಯ್ ಆರ್ ದಾಖಲಿಸಲಾಗಿದೆ.

ಅಲ್ಲೂ ಅರ್ಜುನ್ ನಟಿಸಿದ್ದ ಜಾಹೀರಾತು ಒಂದರಲ್ಲಿ ಶಿಕ್ಷಣ ಸಂಸ್ಥೆಯೊಂದರ ಕುರಿತು ವಿಶೇಷ ಮಾಹಿತಿ ನೀಡುವ ನೆಪದಲ್ಲಿ ದಾರಿ ತಪ್ಪಿಸುವ ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಾಮಾಜಿಕ‌‌ ಕಾರ್ಯಕರ್ತ ಕೋತಾ ಉಪೇಂದ್ರ್‌ರೆಡ್ಡಿ ಆರೋಪಿಸಿ ದೂರು ನೀಡಿದ್ದಾರೆ ‌

ಈ ದೂರಿನ ಅನ್ವಯ ಅಂಬರ್ ಪೇಟೆ ಪೊಲೀಸರು ಎಫ್ ಆಯ್ ಆರ್ ದಾಖಲಿಸಿಕೊಂಡಿದ್ದಾರೆ. ಶ್ರೀಚೈತನ್ಯ ಶಿಕ್ಷಣ ಸಂಸ್ಥೆಯ ಕುರಿತು ಜಾಹೀರಾತು ಪ್ರಕಟಿಸಲಾಗುತ್ತಿದೆ. ಆದರೆ ಈ ಜಾಹೀರಾತಿನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕೋತಾ ಉಪೇಂದ್ರ್ ರೆಡ್ಡಿ ಆರೋಪಿಸಿದ್ದು, ಅಲ್ಲೂ ಅರ್ಜುನ್ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಶ್ರೀಚೈತನ್ಯ ಸ್ಕೂಲ್ ನವರು ಜಾಹೀರಾತಿನಲ್ಲಿ ಪ್ರದರ್ಶಿಸಿದ ಐಐಟಿ ಮತ್ತು ಎನ್ ಐಟಿ ಶ್ರೇಯಾಂಕಗಳು ತಪ್ಪಾಗಿವೆ‌. ಅದನ್ನೇ ಅಲ್ಲೂ ಅರ್ಜುನ್ ಜಾಹೀರಾತಿನಲ್ಲಿ ಪ್ರಸಾರ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮವಾಗಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಜಾಹೀರಾತಿನ ಮೂಲಕ ಸಮಾಜಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಇದಕ್ಕೂ ಮೊದಲು ಕೂಡ ಅಲ್ಲೂ ಅರ್ಜುನ್ ನಟಿಸಿದ ಹಲವು ಜಾಹೀರಾತುಗಳು ವಿವಾದ ಸೃಷ್ಟಿಸಿವೆ. ಈ ಹಿಂದೆ ಆಹಾರ ವಿತರಣಾ ಅಪ್ಲಿಕೇಶನ್ ಒಂದರ ಆ್ಯಡ್ ಹಾಗೂ ಸರ್ಕಾರಿ ಸಾರಿಗೆ ವ್ಯವಸ್ಥೆ ಹೀಗೆಳೆದು ಬೈಕ್ ಆ್ಯಪ್ ಪ್ರಸಾರ ಮಾಡಿದ್ದು ಸೇರಿದಂತೆ ಹಲವು ವಿಚಾರಕ್ಕೆ ಅಲ್ಲೂ ಅರ್ಜುನ್ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗ ಮತ್ತೊಮ್ಮೆ ಶಿಕ್ಷಣ ಸಂಸ್ಥೆಯ ಆ್ಯಡ್ ಅಲ್ಲೂಗೆ ಕಿರಿ ಕಿರಿ ಸಂಕಷ್ಟ ತಂದಿದೆ. ಇನ್ನೊಂದೆಡೆ ಅಲ್ಲೂ ಅರ್ಜುನ್ ಸಿನಿಮಾ ವಿಚಾರಕ್ಕೆ ಬರೋದಾದರೇ ಸುಕುಮಾರನ್ ಹಾಗೂ ಅಲ್ಲೂ ಜೋಡಿ ಪುಷ್ಪ ಮೂಲಕ ಮೋಡಿ ಮಾಡಲು ಸಿದ್ಧವಾಗ್ತಿದೆ.

ಇದನ್ನೂ ಓದಿ : Pooja Hegde : ರಾಕಿಂಗ್ ಸ್ಟಾರ್ ಗೆ ಕರಾವಳಿ ಸುಂದರಿ ಜೋಡಿ : ಯಶ್ ಗೆ ನಾಯಕಿಯಾದ ಪೂಜಾ ಹೆಗ್ಡೆ

ಇದನ್ನೂ ಓದಿ : Alia Bhatt : ನಾಗಾರ್ಜುನ ಹೊಸ ಮೋಷನ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ

Advertisement Hardship, FIR Against Allu Arjun

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular