ಮುಂಬೈ : Aishwarya Rai Pregnant : ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಛನ್ ಉತ್ತಮ ತಾಯಿ ಎಂಬ ವಿಚಾರದಲ್ಲಿ ಯಾವುದೇ ಸಂದೇಹವಿಲ್ಲ. ತಮ್ಮ ಬ್ಯುಸಿ ಶೆಡ್ಯೂಲ್ನ ನಡುವೆಯೂ ನಟಿ ಐಶ್ವರ್ಯಾ ರೈ ಬಚ್ಛನ್ ತಮ್ಮ ಪುತ್ರಿ ಆರಾಧ್ಯಾ ಬಚ್ಛನ್ಗೆ ಸಮಯ ಕೊಡೋದನ್ನು ಮಿಸ್ ಮಾಡೋದೇ ಇಲ್ಲ. ಇವೆಲ್ಲದರ ನಡುವೆ ಇದೀಗ ಐಶ್ವರ್ಯಾ ರೈ ಬಚ್ಛನ್ ಮತ್ತೆ ಗರ್ಭಿಣಿಯಾಗಿರಬಹುದಾ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಛನ್, ಅಭಿಷೇಕ್ ಬಚ್ಛನ್ ಹಾಗೂ ಪುತ್ರಿ ಆರಾಧ್ಯ ಬಚ್ಛನ್ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಇದರ ವಿಡಿಯೋ ಹಾಗೂ ಫೋಟೋಗಳನ್ನು ನೋಡಿದ ನೆಟ್ಟಿಗರು ಐಶ್ವರ್ಯಾ ಗರ್ಭಿಣಿಯಾಗಿದ್ದಾರೆಂದು ಮಾತನಾಡಿಕೊಳ್ತಿದ್ದಾರೆ.
ಉದ್ದನೆಯ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದ ನಟಿ ಐಶ್ವರ್ಯಾ ರೈ ಬಚ್ಛನ್ ತಮ್ಮ ಪುತ್ರಿ ಆರಾಧ್ಯ ಬಚ್ಛನ್ ಕೈ ಹಿಡಿದು ನಡೆದುಕೊಂಡು ಬಂದಿದ್ದಾರೆ. ಬೂದು ಬಣ್ಣ ಜಾಗರ್ಸ್ ಹಾಗೂ ಗುಲಾಬಿ ಬಣ್ಣದ ಸ್ವೆಟ್ ಶರ್ಟ್ ಧರಿಸಿದ್ದ ಅಭಿಷೇಕ್ ಕೂಡ ಪತ್ನಿ ಹಾಗೂ ಪುತ್ರಿಯ ಹಿಂದೆ ನಡೆದುಕೊಂಡು ಬಂದಿದ್ದಾರೆ.
ಇನ್ಸ್ಟಾಗ್ರಾಂನ ಫ್ಯಾನ್ ಪೇಜ್ನಲ್ಲಿ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ನ ಸುರಿಮಳೆಯನ್ನೇ ಹರಿಸಿದ್ದಾರೆ. ಕಪ್ಪು ಬಣ್ಣದ ಉಡುಪನ್ನು ಧರಿಸುವ ಮೂಲಕ 48 ವರ್ಷದ ನಟಿ ಐಶ್ವರ್ಯಾ ರೈ ತಮ್ಮ ಬೇಬಿ ಬಂಪ್ನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಎಲ್ಲಾ ಊಹಾಪೋಹಗಳ ನಡುವೆಯೇ ಐಶ್ವರ್ಯಾ ರೈ ಬಚ್ಛನ್ ತಮ್ಮ ಮುಂಬರುವ ಸಿನಿಮಾ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು ಸಖತ್ ಆಗಿ ಕಾಣಿಸ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಿನ್ನೆಯಷ್ಟೇ ನಟಿ ಕರೀನಾ ಕಪೂರ್ ಕೂಡ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಈ ವದಂತಿಗಳಿಗೆ ಖುದ್ದು ತೆರೆ ಎಳೆದ ಕರೀನಾ ಕಪೂರ್ ಸೈಫ್ ಅಲಿ ಖಾನ್ ಈಗಾಗಲೇ ದೇಶದ ಜನಸಂಖ್ಯೆಗೆ ತುಂಬಾನೇ ಕೊಡುಗೆ ನೀಡಿದ್ದಾರೆ. ಮತ್ತೆ ಗರ್ಭಿಣಿಯಾಗುವ ಮಾತೇ ಇಲ್ಲ ಎಂದು ನಗೆ ಚಟಾಕಿ ಹಾರಿಸಿದ್ದರು.
ಇದನ್ನು ಓದಿ : SSC Applications 2022 : ಹಿಂದಿ ಅನುವಾದಕರಿಗೆ ಇಲ್ಲಿದೆ ಸುವರ್ಣವಕಾಶ
ಇದನ್ನೂ ಓದಿ : Virat Kohli form : ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಬಿಸಿಸಿಐ ಬಳಿಯಿದೆ ಜಬರ್ದಸ್ತ್ ಪ್ಲಾನ್
Aishwarya Rai Pregnant With Second Child Netizens Claim She Was Hiding ‘Baby Bump’ At The Airport In Recent Pics & Videos