ಮಂಗಳವಾರ, ಏಪ್ರಿಲ್ 29, 2025
HomeCinemaBrahmastra:ಬಾಕ್ಸ್ ಆಫೀಸ್‌ನಲ್ಲಿ 160 ಕೋಟಿ ಕಲೆಕ್ಷನ್ ಬಾಚಿದ ಬ್ರಹ್ಮಾಸ್ತ್ರ

Brahmastra:ಬಾಕ್ಸ್ ಆಫೀಸ್‌ನಲ್ಲಿ 160 ಕೋಟಿ ಕಲೆಕ್ಷನ್ ಬಾಚಿದ ಬ್ರಹ್ಮಾಸ್ತ್ರ

- Advertisement -

ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್‌ಗೆ (Brahmastra)ಬ್ರಹ್ಮಾಸ್ತ್ರ ಹೊಸ ಹುರುಪು ತಂದಿದೆ. ಸಿನಿಮಾ ಬಿಡುಗಡೆಯಾದ ಎರಡನೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ದಾಡಿದೆ. ಸೆಪ್ಟೆಂಬರ್ 9 ರಂದು ಬಿಡುಗಡೆಯಾದ ಸಿನಿಮಾಕ್ಕೆ ಕೆಲವು ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಬಾರೀ ವಿರೋಧದ ನಡುವಲ್ಲೇ (Brahmastra)ಬ್ರಹ್ಮಾಸ್ತ್ರ ಸಿನಿಮಾ ಭರ್ಜರಿ ಗೆಲುವು ದಾಖಲಿಸಿದೆ. ಬ್ರಹ್ಮಾಸ್ತ್ರವು ವಿಶ್ವಾದ್ಯಂತ ಬಿಡುಗಡೆಯಾಗಿದ್ದು,ಎರಡೇ ದಿನಗಳಲ್ಲಿ ಈ ಸಿನಿಮಾ ವಿಶ್ವಾದ್ಯಂತ 160 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ.(Alia Bhatt and Ranbir Kapoor) ಆಲಿಯಾ ಭಟ್‌ ರಣಬೀರ್‌ ಕಪೂರ್‌ ಈ ಸಿನಿಮಾದ ಬಳಿಕ ಕೊಂಚ ವಿರಾಮ ಪಡೆದುಕೊಳ್ಳಲಿದ್ದಾರೆ.

ಅಯನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾವನ್ನು ಅದ್ದೂರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. (Alia Bhatt and Ranbir Kapoor)ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈ ವರ್ಷ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರಿಬ್ಬರು ಜೋಡಿಯಾಗಿ ನಟಿಸಿದ ಮೊದಲ ಸಿನಿಮಾ ‘ಬ್ರಹ್ಮಾಸ್ತ್ರ’. ಮೊದಲ ಸಿನಿಮಾದಲ್ಲೇ ಇಬ್ಬರ ಕಾಂಬಿನೇಷನ್‌ ಸಖತ್‌ ವರ್ಕೌಟ್‌ ಆಗಿದೆ. ಅಮಿತಾಬ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಘಟಾನುಘಟಿ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಪುನೀತ್‌ ರಾಜ್ ಕುಮಾರ್‌ ಗೆ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

ಇದನ್ನೂ ಓದಿ: ಟಾಲಿವುಡ್‌ ರೆಬಲ್‌ ಸ್ಟಾರ್‌ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ನಿಧನ

ಇದನ್ನೂ ಓದಿ: ಹೊಯ್ಸಳ ಕ್ಕೆ ಬಂದ್ರು ಮೇಘನಾ ಸರ್ಜಾ: ಡಾಲಿ ಅಡ್ಡಾದಿಂದ ಹೊರಬಿತ್ತು ಅಪ್ಡೇಟ್

ಇದನ್ನೂ ಓದಿ: ರಕ್ತದಲ್ಲಿ ತನ್ನ ಕಲಾಕೃತಿ ಬಿಡಿಸಿದವನಿಗೆ ನಟ ಸೋನು ಸೂದ್​ ಬುದ್ಧಿಮಾತು

ರಣಬೀರ್ ಕಪೂರ್ ಅಭಿನಯದ ‘ಶಂಶೇರಾ’ ಸಿನಿಮಾ ಸೋಲನ್ನು ಕಂಡಿತ್ತು. ಇದರಿಂದಾಗಿ (Brahmastra)ಬ್ರಹ್ಮಾಸ್ತ್ರ ಕೂಡ ಸೋಲುವ ಭೀತಿಯಲ್ಲಿತ್ತು. ಇನ್ನು ಆಲಿಯಾ ಭಟ್‌ “ಗಂಗೂಬಾಯಿ ಕಥಿಯಾವಾಡಿ” ಮತ್ತು “ಆರ್‌ಆರ್‌ಆರ್‌” ಸಿನಿಮಾಗಳ ಗೆಲುವಿನ ಬೆನ್ನಲ್ಲೇ “ಬ್ರಹ್ಮಾಸ್ತ್ರ” ಕೂಡ ಸಕ್ಸಸ್‌ ಹಾದಿಯನ್ನು ಹಿಡಿದಿದೆ. ಆದರೆ ಕಳಪೆ ಗ್ರಾಫಿಕ್ಸ್‌ನಿಂದಾಗಿ ಒಂದು ವರ್ಗದ ಪ್ರೇಕ್ಷಕರು ಸಿನಿಮಾವನ್ನು ತಿರಸ್ಕರಿಸಿದ್ದಾರೆ.

Alia Bhatt and Ranbir Kapoor Brahmastra box office Collection

RELATED ARTICLES

Most Popular