Amulya Twins Children Photo : ಸ್ಯಾಂಡಲ್ ವುಡ್ ನಲ್ಲಿ ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.ಬಾಲ್ಯದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ಕನ್ನಡಿಗರ ಮನೆಮಗಳಂತೆ ಪ್ರೀತಿ ಗಳಿಸಿದ್ದಾರೆ. ಸದ್ಯ ಅವಳಿ ಮಕ್ಕಳ ತಾಯಾಗಿರುವ ನಟಿ ಅಮೂಲ್ಯ ಶ್ರೀಕೃಷ್ಣ ಜನ್ಮಾಷ್ಟಮಿಯಂದು ತಮ್ಮ ಮುದ್ದಾದ ಮಕ್ಕಳ ಪೋಟೋ ಶೇರ್ ಮಾಡಿದ್ದಾರೆ.
ಹೌದು ಕಳೆದ ಹಲವಾರು ವರ್ಷಗಳಿಂದ ಚಿತ್ರರಂಗದಿಂದ ಬ್ರೇಕ್ ಪಡೆದಿರೋ ನಟಿ ಅಮೂಲ್ಯ ಮದುವೆ ಬಳಿಕ ಮತ್ತೆ ಬಣ್ಣ ಹಚ್ಚಲಿಲ್ಲ. ಕೆಲ ತಿಂಗಳ ಹಿಂದೆ ನಟಿ ಅಮೂಲ್ಯ ಮತ್ತೆ ಬಣ್ಣ ಹಚ್ಚುತ್ತಾರೆ ಎಂಬ ಸುದ್ದಿ ಹರಿದಾಡೋ ಹೊತ್ತಿನಲ್ಲೇ ನಟಿ ಅಮೂಲ್ಯ ತಾಯ್ತನದ ಸುದ್ದಿ ಕೊಟ್ಟು ಅಭಿಮಾನಿಗಳ ಬಾಯಿ ಮುಚ್ಚಿಸಿದ್ದರು.

ಅದ್ದೂರಿ ಸೀಮಂತ್, ಬೇಬಿ ಬಂಪ್ ಪೋಟೋ ಶೂಟ್ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಅಷ್ಟೇ ಅಲ್ಲ ಚಿತ್ರರಂಗದ ಎಲ್ಲ ಗಣ್ಯರಿಗಾಗಿ ನಟಿ ಅಮೂಲ್ಯ ಗ್ರ್ಯಾಂಡ್ ಬೇಬಿ ಬಂಪ್ ಪಾರ್ಟಿ ಕೊಟ್ಟು ಸಂಭ್ರಮಿಸಿದ್ದರು. ಇದಕ್ಕೇ ಸ್ಯಾಂಡಲ್ ವುಡ್ ನ ಹಿರಿ ಕಿರಿಯ ನಟ-ನಟಿಯರೆಲ್ಲ ಪಾಲ್ಗೊಂಡು ಶುಭಹಾರೈಸಿದ್ದರು.

ಇದಾದ ಬಳಿಕ ನಟಿ ಅಮೂಲ್ಯ ಮಾರ್ಚ್ ನಲ್ಲಿ ಮುದ್ದಾದ ಅವಳಿ ಗಂಡುಮಕ್ಕಳಿಗೆ ಜನ್ಮ ನೀಡಿದ್ದರು. ತಮಗೆ ಇಬ್ಬರೂ ಮಕ್ಕಳು ಹುಟ್ಟಿದ ಸುದ್ದಿಯನ್ನು ನಟಿ ಅಮೂಲ್ಯ ಮಕ್ಕಳ ಕೈಕಾಲಿನ ಪೋಟೋ ಜೊತೆ ಶೇರ್ ಮಾಡಿದ್ದರು.
ಈಗ ಮಕ್ಕಳು ಜನಿಸಿದ ಬರೋಬ್ಬರಿ ಐದು ತಿಂಗಳ ಬಳಿಕ ನಟಿ ಅಮೂಲ್ಯ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮುದ್ದಾದ ಮಕ್ಕಳ ಮುಖವನ್ನು ಕರುನಾಡಿಗೆ ತೋರಿಸಿದ್ದಾರೆ.
Introducing our two little bundle joy on the auspicious occasion of Krishna Janmashtami❤️ Bless them too with all your heart ❤️ ನಮ್ಮ ಮುದ್ದಿನ ಕಂದಮಗಳ ಮೇಲೆ ನಿಮ್ಮ ಶುಭಾಶೀರ್ವಾದವಿರಲಿ ಎಂದು ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಮಾತ್ರವಲ್ಲದೇ ಮಕ್ಕಳು ಹುಟ್ಟಿದಾಗ ನಡೆಸಿದ ಮುದ್ದಾದ ಪೋಟೋಶೂಟ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಪುಟ್ಟ ಪುಟ್ಟ ಮಕ್ಕಳ ಪೋಟೋ ನೋಡಿ ಅಮೂಲ್ಯ ಅಭಿಮಾನಿಗಳು ಖುಷಿಯಾಗಿದ್ದು, ಮೆಚ್ಚಿನ ನಟಿ ಮಕ್ಕಳ ಪೋಟೋಗೆ ಲೈಕ್ಸ್ ಒತ್ತಿ ಸಂಭ್ರಮಿಸುತ್ತಿದ್ದಾರೆ.

ತಾಯ್ತನದಲ್ಲಿ ಬ್ಯುಸಿಯಾಗಿದ್ದರೂ ನಟಿ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಅಗಿದ್ದು, ಇತ್ತೀಚಿಗಷ್ಟೇ ರೀಲ್ಸ್ ವಿಡಿಯೋವೊಂದನ್ನು ಶೇರ್ ಮಾಡಿದ್ದರು.
ಇದನ್ನೂ ಓದಿ : Kichcha Sudeep next movie : ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು : ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ
ಇದನ್ನೂ ಓದಿ : Meghana Raj Sarja Emotional answer : ನಿಮಗೀಗ ಚಿರು ನೆನಪಿಲ್ಲವಾ ? ಪ್ರಶ್ನೆಗೆ ಮೇಘನಾ ಕೊಟ್ರು ಭಾವುಕ ಉತ್ತರ
Amulya Twins Children Photo Reveal The actress showed the face of cute children