ಸೋಮವಾರ, ಏಪ್ರಿಲ್ 28, 2025
HomeCinemaSudha Rani : ಕಿರುತೆರೆಗೆ ಆನಂದ ಸುಂದರಿ : ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಸುಧಾರಾಣಿ

Sudha Rani : ಕಿರುತೆರೆಗೆ ಆನಂದ ಸುಂದರಿ : ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಸುಧಾರಾಣಿ

- Advertisement -

80-90 ರ ದಶಕದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮನೆಮಾತಾಗಿದ್ದ ನಟಿ ಸುಧಾರಾಣಿ (Sudha Rani ). ತಮ್ಮ ಸೌಂದರ್ಯ ಹಾಗೂ ಸಹಜವಾದ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಸುಧಾರಾಣಿ ಅಂದಿನಿಂದ ಇಂದಿನವರೆಗೂ ಕನ್ನಡ ಚಿತ್ರರಸಿಕರನ್ನು ಸೆಳೆಯುತ್ತಲೇ ಇದ್ದಾರೆ. ಮೊನ್ನೆ ಮೊನ್ನೆ ತೆರೆಕಂಡ ಕೆಜಿಎಫ್ ಸಿನಿಮಾದ ರವೀನಾ ಟಂಡನ್ ಗೆ ಜೀವ ತುಂಬಿದ ಖ್ಯಾತಿಗೂ ಸುಧಾರಾಣಿ ಪಾತ್ರವಾಗಿದ್ದಾರೆ. ಹೀಗೆ ಸ್ಯಾಂಡಲ್ ವುಡ್ ನಲ್ಲಿ ಈಗಲೂ ಜನಪ್ರಿಯತೆ ಪಡೆದುಕೊಂಡಿರೋ ನಟಿ ಸುಧಾರಾಣಿ ಈಗ ಕಿರುತೆರೆಯತ್ತ ಮುಖಮಾಡಿದ್ದಾರೆ.

ಹೌದು ವಿಭಿನ್ನ ಕತೆ ಹೊತ್ತ ಸೀರಿಯಲ್ ವೊಂದಕ್ಕಾಗಿ ಸುಧಾರಾಣಿ ಕಿರುತೆರೆಗೆ ಬಂದಿದ್ದು ತ್ಯಾಗಮಯಿ ತಾಯಿ ಹಾಗೂ ಸೊಸೆಗೆ ಅಚ್ಚರಿ ಮೂಡಿಸುವ ಅತ್ತೆಯ ಪಾತ್ರದಲ್ಲಿ ಮಿಂಚಲಿದ್ದಾರೆ. ಶ್ರೀರಸ್ತು ಶುಭಮಸ್ತು ಎಂಬ ಸೀರಿಯಲ್ ಮೂಲಕ ಸುಧಾರಾಣಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೆಣ್ಣೊಬ್ಬಳು ಹೇಗೆ ತನ್ನನ್ನು ತಾನು ಸಂಪೂರ್ಣವಾಗಿ ಮನೆಗೆ ಸಮರ್ಪಿಸಿಕೊಂಡು ತನ್ನ ಆಸೆ ಆಕಾಂಕ್ಷೆಗಳನ್ನು ತೊರೆದು ಬದುಕುತ್ತಾಳೆ ಎಂಬ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿ ಕತೆ ಬರೆಯಲಾಗಿಲಿದ್ದು, ಈ ಪಾತ್ರಕ್ಕೆ ಸುಧಾರಾಣಿ ಅಷ್ಟೇ ಜೀವ ತುಂಬಿ ನಟಿಸಿದ್ದಾರೆ.

ಈಗಾಗಲೇ ಶ್ರೀರಸ್ತು ಶುಭಮಸ್ತು ಸಿನಿಮಾದ ಪ್ರೋಮೋ ತೆರೆ ಕಂಡಿದ್ದು ಪ್ರೇಕ್ಷಕರು ಪ್ರೋಮೋ ಇಷ್ಟಪಟ್ಟಿದ್ದಾರೆ. ಹೀಗಾಗಿ ಸೀರಿಯಲ್ ಕೂಡ ಜನರ ಮನಗೆಲ್ಲೋ ಭರವಸೆ ಮೂಡಿಸಿದೆ. ಕಿರುತೆರೆ ನಟ ದೀಪಕ್ ಗೌಡ ಸುಧಾರಾಣಿ ಪುತ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಈಗಾಗಲೇ ಮಲೆಯಾಳಂನಲ್ಲಿ ಹಿಟ್ ಆಗಿದ್ದು ಕನ್ನಡದಲ್ಲಿಯೂ ಗೆಲ್ಲುವ ಮುನ್ಸೂಚನೆ ನೀಡಿದೆ.

ಇನ್ನು ಸೀರಿಯಲ್ ಗಾಗಿ ನಟಿ ಸುಧಾರಾಣಿ ಸಖತ್ ಸಿದ್ಧತೆ ಕೂಡ ನಡೆಸಿದ್ದು, ವಿಭಿನ್ನವಾದ ಕಾಸ್ಟ್ಯೂಮ್ ಗಳಲ್ಲಿ ಪೋಟೋ ಶೂಟ್ ನಡೆಸಿ ಮಿಂಚಿದ್ದಾರೆ. ಗೌನ್ ಗಳಲ್ಲಿ ಸುಧಾರಾಣಿ ಸ್ಯಾಂಡಲ್ ವುಡ್ ನಟಿಯರಿಗೂ ಸೆಡ್ಡು ಹೊಡೆಯುವಂತೆ ಪೋಸ್ ನೀಡಿದ್ದು, ಸುಧಾರಾಣಿ ಲುಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಆನಂದ ಚಿತ್ರದ ಮೂಲಕ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಎಂಟ್ರಿಕೊಟ್ಟ ಸುಧಾರಾಣಿ ಬಳಿಕ ನೂರಾರು ಸಿನಿಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಸದ್ಯ ಕಿರುತೆರೆಯಲ್ಲಿ ಬರ್ತಿರೋ ಈ ಸೀರಿಯಲ್ ಗಾಗಿ ಸುಧಾರಾಣಿ ಫ್ಯಾನ್ಸ್ ಕುತೂಹಲದಿಂದ ಕಾಯ್ತಿದ್ದಾರೆ.

ಇದನ್ನೂ ಓದಿ : Vikrant Rona new song lullaby : ಲಾಲಿ ಹಾಡಿನಲ್ಲೇ ಮೋಡಿ‌ ಮಾಡಿದ ಕಿಚ್ಚ: ವಿಕ್ರಾಂತ್ ರೋಣ ಎರಡನೇ ಹಾಡು ರಿಲೀಸ್

ಇದನ್ನೂ ಓದಿ : Actor Vijay devarakonda : ಕ್ಯಾಮರಾ ಎದುರು ಬೆತ್ತಲಾದ ನಟ ವಿಜಯ್ ದೇವರಕೊಂಡ : ಫುಲ್ ವೈರಲ್ ಆಯ್ತು ಪೋಟೋ

Ananda Sundari on TV, Sudha Rani who started the second innings

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular