Meghana Raj Sarja : ಸ್ಯಾಂಡಲ್ ವುಡ್ ನಟಿ ಮೇಘನಾ ಸರ್ಜಾ ಸದ್ಯ ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಜಾಹೀರಾತು, ಸಿನಿಮಾ ಹಾಗೂ ರಿಯಾಲಿಟಿ ಶೋದಲ್ಲಿ ಮಿಂಚ್ತಿರೋ ಮೇಘನಾ ವೈಯಕ್ತಿಕ ಬದುಕಿನ ನೋವುಗಳಿಂದ ಸದ್ಯ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಈ ಮಧ್ಯೆ ನಟಿ ಮೇಘನಾ ರಾಜ್ ಮತ್ತೊಮ್ಮೆ ಮದುವೆ ಯಾಗಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿದ್ದು ಇದಕ್ಕೆ ಮೇಘನಾ ಅತ್ಯಂತ ಸ್ಪಷ್ಟವಾದ ರಿಯಾಕ್ಷನ್ ನೀಡಿದ್ದಾರೆ.

ಹೌದು ಪ್ರೀತಿಸಿ ಮದುವೆಯಾದ ಮೇಘನಾ ಮತ್ತು ಚಿರು ಸರ್ಜಾ ಬದುಕು ಇನ್ನೇನು ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕೇನ್ನುವ ಹಂತದಲ್ಲಿರುವಾಗಲೇ ನಡೆದ ಅವಘಡವೊಂದು ಇಡಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡಿತು. ಚಿರು ಸರ್ಜಾ ತೀವ್ರ ಹೃದಯಾಘಾತದಿಂದ ನಿಧನರಾದರು. ಈ ವೇಳೆ ನಟಿ ಮೇಘನಾ ರಾಜ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಪ್ರೀತಿಸಿದ ಚಿರುವನ್ನು ಕಳೆದುಕೊಂಡು ಕಂಗಾಲಾದ ಮೇಘನಾ ಇದೇ ನೋವಿನಲ್ಲೇ ಮಗನನ್ನು ಹೆತ್ತು ಸಿಂಗಲ್ ಪೇರೇಂಟ್ ರೀತಿಯಲ್ಲಿ ಬೆಳೆಸುತ್ತ ಬರುತ್ತಿದ್ದಾರೆ. ಇನ್ನೇನು ಚಿರು ಹಾಗೂ ಮೇಘನಾ ಪ್ರೀತಿಯ ಪುತ್ರ ರಾಯನ್ ರಾಜ್ ಸರ್ಜಾ ಎರಡನೇ ವರ್ಷದ ಹೊಸ್ತಿಲಿನಲ್ಲಿರುವಾಗಲೇ ಮೇಘನಾ ಸರ್ಜಾ ಬಗ್ಗೆ ಹೊಸ ಬಗೆಯ ಸುದ್ದಿಯೊಂದು ಸದ್ದು ಮಾಡಲಾರಂಭಿಸಿದೆ.

ಹೌದು ಮೇಘನಾ ಸರ್ಜಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸಂಗತಿ ಎಲ್ಲೆಡೆ ಹರಿದಾಡಲಾರಂಭಿಸಿದೆ. ಈ ವಿಚಾರದ ಬಗ್ಗೆ ಸ್ವತಃ ಮೇಘನಾ ಸರ್ಜಾ ಮನಸ್ಸು ಬಿಚ್ಚಿ ಮಾತನಾಡಿದ್ದು, ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಮೇಘನಾ ರಾಜ್, ನನ್ನ ಸುತ್ತಲೂ ಇರುವ ಹಲವರು ನನಗೆ ಎರಡನೇ ಮದುವೆಯಾಗಲು ಸಲಹೆ ನೀಡುತ್ತಿದ್ದಾರೆ. ಆದರೆ ಒಂಟಿಯಾಗಿರಲು ಮತ್ತು ಒಂಟಿಯಾಗಿಯೇ ಮಗನನ್ನು ಬೆಳೆಸಲು ಸಲಹೆ ನೀಡುವ ತಂಡವೂ ಇದೆ ಎಂದು ಮೇಘನಾ ಹೇಳಿದ್ದಾರೆ. ಇದನ್ನೂ ಓದಿ : Meghana Raj Sarja Emotional answer : ನಿಮಗೀಗ ಚಿರು ನೆನಪಿಲ್ಲವಾ ? ಪ್ರಶ್ನೆಗೆ ಮೇಘನಾ ಕೊಟ್ರು ಭಾವುಕ ಉತ್ತರ

ನಮ್ಮ ಸಮಾಜದ ಮನಸ್ಥಿತಿಯೂ ನನಗೆ ಮದುವೆಯಾಗಲು ಸಲಹೆ ನೀಡುವಂತೆಯೂ ಇದೆ. ಅದೇ ರೀತಿ ನೀವು ಮಗನೊಂದಿಗೆ ಸುಖವಾಗಿರಿ ಎನ್ನುವವರು ಇದ್ದಾರೆ. ಹೀಗಾಗಿ ನಾನು ಯಾರ ಮಾತನ್ನು ಕೇಳಲಿ ಎನ್ನುವ ಆತಂಕ ನನ್ನನ್ನು ಕಾಡುತ್ತಿದೆ. ಆದರೆ ನಾನು ಕೊನೆಯಲ್ಲಿ ನನ್ನ ಮಾತನ್ನು ಕೇಳುವ ತೀರ್ಮಾನಕ್ಕೆ ಬಂದಿದ್ದೇನೆ ಎಂದಿದ್ದಾರೆ. ಅಲ್ಲದೇ ಇದೇ ವಿಚಾರಕ್ಕೆ ಚಿರು ಮಾತೊಂದನ್ನು ನೆನಪಿಸಿಕೊಂಡಿರೋ ಮೇಘನಾ, ಜಗತ್ತು ಏನೇ ಹೇಳಿದ್ರೂ ನಿನ್ನ ಮಾತನ್ನು ನೀನು ಕೇಳು ಎಂದು ಚಿರಂಜೀವಿ ಯಾವಾಗಲೂ ಹೇಳುತ್ತಿದ್ದರು. ಹಾಗಾಗಿ ನಾನು ಅದನ್ನೇ ಅನಸರಿಸುತ್ತಿದ್ದೇನೆ ಎಂದಿದ್ದಾರೆ.
ಅಲ್ಲದೇ ನಾನು ಇನ್ನೊಂದು ಮದುವೆಯಾಗಬೇಕೇ ಎಂಬುದನ್ನು ನನಗೆ ನಾನು ಇನ್ನೂ ಕೇಳಿಕೊಂಡಿಲ್ಲ. ಇನ್ನೊಂದು ಮಹತ್ವದ ಸಂಗತಿ ಎಂದರೇ ಚಿರು ಬಿಟ್ಟು ಹೋದ ಬದುಕಿನ ಮಾರ್ಗ. ನಾಳೆ ಏನಾಗಲಿದೆ ಎಂದು ನಾನು ಯೋಚಿಸುವುದಿಲ್ಲ. ಒಂದೆರಡು ದಿನಗಳ ನಂತರ ನನ್ನ ಜೀವನ ಹೇಗಿರುತ್ತದೆ ಎಂದು ನಾನು ಯೋಚಿಸುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ಮೇಘನಾ ಮದುವೆ ವಿಚಾರ ಮುನ್ನಲೆಗೆ ಬಂದಿದೆ.
ಇದನ್ನೂ ಓದಿ : ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು…! ಮೇಘನಾರಾಜ್ ಭಾವುಕ ಸಂದೇಶ ಯಾರಿಗೆ ಗೊತ್ತಾ…?!
Another married actress Meghana Raj Sarja here is Kuttima bold answer