ಖರಾಬು ಖರಾಬು ಅಂತನೇ ತೆರೆಗೆ ಬಂದ ಪೊಗರು ಸಿನಿಮಾದ ಹಾಡು ಕನ್ನಡದ ಬಳಿಕ ತಮಿಳಿನಲ್ಲೂ ದಾಖಲೆ ಬರೆಯತೊಡಗಿದ್ದು, ಬಿಡುಗಡೆಯಾದ ಒಂದು ದಿನದೊಳಗೆ 2.8 ಮಿಲಿಯನ್ ವೀವ್ಸ್ ಪಡೆದುಕೊಂಡು ಹೊಸದಾಖಲೆ ಬರೆಯುವ ಭರವಸೆ ಮೂಡಿಸಿದೆ.

ಆಕ್ಷ್ಯನ್ ಪ್ರಿನ್ಸ್ ಪೊಗರು ಮೂಲಕ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಧೂಳೆಬ್ಬಿಸಲು ಸಿದ್ಧವಾಗಿದ್ದಾರೆ. ತಮಿಳಿನಲ್ಲಿ ಸೆಮಾ ತಿಮಿರು ಮೂಲಕ ಚೊಚ್ಚಲ ಸಿನಿಮಾ ರಿಲೀಸ್ ಮಾಡಿ ಅದೃಷ್ಟ ಪರೀಕ್ಷೆಗೆ ಮುಂದಾಗಿರೋ ಧ್ರುವ್ ಸರ್ಜಾಗೆ ಆರಂಭದಲ್ಲೇ ತಮಿಳಿಯನ್ನರ ಪ್ರೀತಿಯ ಅಪ್ಪುಗೆ ಸಿಕ್ಕಂತಾಗಿದ್ದು, ಖರಾಬು ತಮಿಳು ವರ್ಸನ್ ಸಾಂಗ್ ಮಿಲಿಯನ್ ವೀವ್ಸ್ ಪಡೆದು ಮುಂದೇ ಸಾಗುತ್ತಲೇ ಇದೆ.

ಫೆ. 7 ರಂದು ಪೊಗರು ಚಿತ್ರದ ಖರಾಬು ಹಾಡನ್ನು ತಮಿಳಿನಲ್ಲೂ ರಿಲೀಸ್ ಮಾಡಲಾಗಿತ್ತು. ಈ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆಗ್ತಿದಂತೆ ಸಖತ್ ವೀವ್ಸ್ ಪಡೆದುಕೊಂಡಿದ್ದು, ಇದುವರೆಗೂ 2.8 ಮಿಲಿಯನ್ ಲೈಕ್ಸ್ ದಾಖಲಿಸಿದೆ. ಫೆ.19 ರ ರಥಸಪ್ತಮಿಯಂದು ತಮಿಳು ಹಾಗೂ ಕನ್ನಡದಲ್ಲಿ ಪೊಗರು ರಿಲೀಸ್ ಆಗಲಿದೆ.

ಕೊರೋನಾ ಮುಗಿಯುತ್ತಿದ್ದಂತೆ ಮೊತ್ತ ಮೊದಲು ಚಿತ್ರದ ರಿಲೀಸ್ ಅನೌನ್ಸ್ ಮಾಡಿದ ಚಿತ್ರತಂಡಕ್ಕೆ 100 ಕ್ಕೆ 100 ಪ್ರೇಕ್ಷಕರಿಗೆ ಅವಕಾಶ ನೀಡದ ಕರ್ನಾಟಕ ಸರ್ಕಾರದ ನಿರ್ಧಾರ ಕೊಂಚ ಹಿನ್ನಡೆ ತರೋ ಮುನ್ಸೂಚನೆ ನೀಡಿತ್ತಾದರೂ ಧ್ರುವ್ ಸರ್ಜಾ ಸರ್ಕಾರದ ನಿರ್ಧಾರದ ವಿರುದ್ಧ ಟ್ವೀಟ್ ವಾರ್ ನಡೆಸಿ 100 ಕ್ಕೆ 100 ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡದಲ್ಲೂ ದಾಖಲೆ ನಿರ್ಮಿಸಿದ್ದ ಪೊಗರು ಚಿತ್ರದ ಖರಾಬು ಹಾಡು 4.5 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಈಗ ತಮಿಳಿನಲ್ಲೂ ದಾಖಲೆ ನಿರ್ಮಿಸುವ ಮುನ್ಸೂಚನೆ ನೀಡಿದೆ. ತೆಲುಗಿನಲ್ಲೂ ಫೆ.19 ರಂದು ಚಿತ್ರ ರಿಲೀಸ್ ಆಗಲಿದ್ದು, ಆಂಧ್ರಪ್ರದೇಶದ 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೊಗರು ಅಬ್ಬರ ನೋಡಬಹುದಾಗಿದೆ.