ಜನಪ್ರಿಯ ಶೋ ಅನುಪಮಾಗೆ ಎಂಟ್ರಿ ಕೊಡುತ್ತಾರಾ ಎಲ್ಲವಾ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಅನೇರಿ ವಜಾನಿ ತಾವು ಈ ಶೋನಲ್ಲಿ ಭಾಗಿಯಾಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ಅನೇರಿ ಯಾವ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ನಟಿ ಅನೇರಿ ಅನುಜ್ ಕಪಾಡಿಯಾರ ಎಕ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಅನೇರಿ ವಜಾನಿ, ನಾನು ನಿರ್ಮಾಪಕ ರಾಜನ್ ಶಾಹಿ ಜೊತೆ ಕೆಲಸ ಮಾಡಬೇಕು ಎಂಬ ಹೆಬ್ಬಯಕೆಯನ್ನು ಹೊಂದಿದೆ. ಈ ಶೋನ ಮೂಲಕ ಆ ನನ್ನ ಕನಸು ನನಸಾಗಿದೆ ಎಂದು ಹೇಳಿದ್ರು.
ನಿಶಾ ಔರ್ ಉಸ್ಕೆ ಕಸಿನ್ಸ್ ಹಾಗೂ ಕಾಲಿ ಏಕ್ ಪುನರ್ ಅವತಾರ್ ಸೇರಿದಂತೆ ಸಾಕಷ್ಟು ಶೋಗಳ ಮೂಲಕ ಮನೆ ಮಾತಾಗಿರುವ ಅನೇರಿ ಶಶಿಯವರನ್ನು ಭೇಟಿಯಾ ಅದೇ ದಿನ ಈ ಪ್ರಾಜೆಕ್ಟ್ ಸಹಿ ಹಾಕಿದ್ದರು ಎಂದು ತಿಳಿದು ಬಂದಿದೆ. ಈ ವಿಚಾರವಾಗಿಯೂ ಮಾತನಾಡಿದ ಅನೇರಿ, ನಾನು ರಾಜನ್ ಶಶಿಯನ್ನು ಭೇಟಿಯಾಗಲು ತೆರಳಿದ್ದೆ. ಅವರೇ ನಾನು ಅನುಪಮಾ ಶೋಗೆ ಸಹಿ ಹಾಕುವಂತೆ ಮಾಡಿದರು. ನಾನು ಅವರ ಶೋ ಔರ್ ಪ್ಯಾರ್ ಹೋ ಗಯಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಬೇಕೆಂದು ಹಿಂದೊಮ್ಮೆ ಆಡಿಷನ್ ನೀಡಿದ್ದೆ. ಆದರೆ ಈ ಪ್ರಾಜೆಕ್ಟ್ ನನಗೆ ಸಿಕ್ಕಿರಲಿಲ್ಲ ಬಳಿಕ ನನಗೆ ನಿಶಾ ಔರ್ ಉಸ್ಕೆ ಕಸಿನ್ಸ್ನಲ್ಲಿ ಅವಕಾಶ ಸಿಕ್ಕಿತು. ಅದು ಕೂಡ ತುಂಬಾ ಒಳ್ಳೆಯ ಶೋ ಎಂದು ಹೇಳಿದ್ರು.
ಸದ್ಯ ಈ ಧಾರವಾಹಿಯಲ್ಲಿ ತೋರಿಸಲಾಗುತ್ತಿರುವ ದೃಶ್ಯಗಳ ಪ್ರಕಾರ ಅನುಜ್ ಮೇಲೆ ಅನುಪಮಾಗೆ ಪ್ರೀತಿಯಾದಂತಿದೆ. ಈ ಸಂದರ್ಭದಲ್ಲಿ ಅನುಜ್ ಮಾಜಿ ಪ್ರೇಯಸಿ ಪಾತ್ರದಲ್ಲಿ ಅನೇರಿ ಎಂಟ್ರಿ ನೀಡ್ತಿರೋದು ಧಾರವಾಹಿಗೆ ಬಹುದೊಡ್ಡ ಟ್ವಿಸ್ಟ್ ನೀಡುವಂತೆ ಕಾಣ್ತಿದೆ.
Anupamaa Massive Twist: Aneri Vajani Breaks Silence on Joining Anuj Kapadia And Others in Show
ಇದನ್ನು ಓದಿ : Actress Amulya: ಶುಭಸುದ್ದಿ ನೀಡಿದ ನಟಿ ಅಮೂಲ್ಯ