ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಮತ್ತೊಮ್ಮೆ ಸ್ಟಾರ್ ನಿರೂಪಕಿ ಅನುಶ್ರೀ ಕೊರಳಿಗೆ ಉರುಳಾಗೋ ಸಾಧ್ಯತೆ ದಟ್ಟವಾಗಿದ್ದು, ಪ್ರಕರಣದ ಆರೋಪಿ ಕಿಶೋರ್ ಅಮನ್ ಶೆಟ್ಟಿ ಅನುಶ್ರೀ ಡ್ರಗ್ಸ್ ಸೇವಿಸುತ್ತಿದ್ದರು ಎಂದಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಎರಡನೇ ಆರೋಪಿಯಾಗಿರುವ ಕಿಶೋರ್ ಅಮನ್ ಶೆಟ್ಟಿ ಅನುಶ್ರೀ ಡ್ರಗ್ಸ್ ತರುತ್ತಿದ್ದರು ಮತ್ತು ಸೇವಿಸುತ್ತಿದ್ದರು ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಕಿಶೋರ್ ಅಮನ್ ಶೆಟ್ಟಿ ಚಾರ್ಜಶೀಟ್ ಹೇಳಿಕೆಯಲ್ಲಿ ಅನುಶ್ರೀ ಸತ್ಯವನ್ನು ಬಿಚ್ಚಿಟ್ಟಿದ್ದು, ರಿಯಾಲಿಟಿ ಶೋನ ಕೋರಿಯೋಗ್ರಾಫರ್ ತರುಣ ಮೂಲಕ ನನಗೆ ಅನುಶ್ರೀ ಪರಿಚಯವಾಗಿದ್ದರು.
ತರುಣ ರೂಮ್ ನಲ್ಲಿ ತಡರಾತ್ರಿಯವರೆಗೆ ಅನುಶ್ರೀಗೆ ಡ್ಯಾನ್ಸ್ ಪ್ರ್ಯಾಕ್ಟಿಸ್ ಮಾಡಿಸುತ್ತಿದ್ದೇವು. ಡ್ಯಾನ್ಸ್ ಪ್ರ್ಯಾಕ್ಟಿಸ್ ಗೆ ಬರುವ ವೇಳೆ ಅನುಶ್ರೀ ಎಕ್ಸಟಸಿ ಡ್ರಗ್ಸ್ ತರುತ್ತಿದ್ದರು. ನಮಗೂ ಡ್ರಗ್ಸ್ ನೀಡಿ ಅನುಶ್ರೀಯೂ ಸೇವಿಸುತ್ತಿದ್ದರು ಎಂದಿದ್ದಾರೆ.
ಅಲ್ಲದೇ ಅನುಶ್ರೀಗೆ ಡ್ರಗ್ ಪೆಡ್ಲರ್ ಗಳ ನಂಟಿದೆ. ಆಕೆಗೆ ಸುಲಭವಾಗಿ ಡ್ರಗ್ಸ್ ಸಿಗುತ್ತಿತ್ತು. ಆಕೆಗೆ ಎಲ್ಲಿ ಹೇಗೆ ಅಷ್ಟು ಸುಲಭವಾಗಿ ಡ್ರಗ್ಸ್ ಸಿಗುತ್ತಿತ್ತೋ ಗೊತ್ತಿಲ್ಲ ಎಂದು ಸಿಸಿಬಿ ಪೊಲೀಸರ ಎದುರು ಕಿಶೋರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
2007-08 ರಿಯಾಲಿಟಿ ಶೋ ವೇಳೆ ತರುಣ್,ಕಿಶೋರ್ ಹಾಗೂ ಅನುಶ್ರೀ ಒಡನಾಟವಿತ್ತು. ಈ ವೇಳೆ ಅನುಶ್ರೀ ಡ್ರಗ್ಸ್ ಸೇವಿಸಿದ್ದರು ಎಂಬ ಕಿಶೋರ್ ಹೇಳಿಕೆ ಈಗ ಅನುಶ್ರೀಗೆ ಮುಳ್ಳಾಗಲಿದ್ದು, ಅನುಶ್ರೀಗೆ ಮತ್ತೊಮ್ಮೆ ಸಂಕಷ್ಟ ಕಾದಿದೆ ಎನ್ನಲಾಗುತ್ತಿದೆ.
ಊಟಕ್ಕೂ ಮುನ್ನ ಅನುಶ್ರೀ ಡ್ರಗ್ಸ್ ಸೇವಿಸುತ್ತಿದ್ದರೂ ಎಂಬ ಹೇಳಿಕೆಯಿಂದ ಮತ್ತೊಮ್ಮೆ ಅನುಶ್ರೀ ಸಿಸಿಬಿ ವಿಚಾರಣೆಗೆ ಒಳಗಾಗುವ ಸಾಧ್ಯತೆ ಇದ್ದು ಅನುಶ್ರೀ ವಿರುದ್ಧವೂ ಪ್ರಕರಣ ದಾಖಲಾದರೇ ಅಚ್ಚರಿ ಏನಿಲ್ಲ.
ಇದನ್ನೂ ಓದಿ: ದಿ.ಹಾಸ್ಯನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದೌರ್ಜನ್ಯ
ಈಗಾಗಲೇ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಕ್ಯರ್ ಅನುಶ್ರೀ ಮಂಗಳೂರಿನ ಸಿಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದು, ನನಗೆ ತರುಣ ಹಾಗೂ ಕಿಶೋರ್ ಕೇವಲ ಡ್ಯಾನ್ಸ್ ರಿಯಾಲಿಟಿ ಶೋ ಕೊರಿಯೋಗ್ರಫಿ ವೇಳೆ ಜಸ್ಟ್ ಪರಿಚಯವಾಗಿತ್ತು ಎಂದಿದ್ದಾರೆ.
(Anushree took drugs and gave it to us too: Explosive statement on chargesheet)