ಬೆಂಗಳೂರು : arjun sarja mother lakshmi devi died : ಬಹುಭಾಷಾ ನಟ ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀ ದೇವಿ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮೀ ದೇವಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು . ಸರ್ಜಾ ಕುಟುಂಬ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಅಜ್ಜಿ ಲಕ್ಷ್ಮೀ ದೇವಿ ಪುತ್ರ ಅರ್ಜುನ್ ಸರ್ಜಾ ಮೇಲೆ ಮೀಟು ಆರೋಪ ಎದುರಾದ ಸಂದರ್ಭದಲ್ಲಿ ಸಾಕಷ್ಟು ಮಾಧ್ಯಮಗಳಲ್ಲಿ ಡಿಸ್ಕಷನ್ಗೆ ಕೂರುವ ಮೂಲಕ ಪುತ್ರನ ಪರವಾಗಿ ಧ್ವನಿ ಎತ್ತಿದ್ದರು. ಸರ್ಜಾ ಕುಟುಂಬ ಹಿರಿ ತಲೆ ನಿಧನದಿಂದಾಗಿ ಸರ್ಜಾ ಕುಟುಂಬದಲ್ಲಿ ದುಃಖದ ಕಾರ್ಮೋಡ ಆವರಿಸಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಅರ್ಜುನಾ ಸರ್ಜಾರ ಮಾವ ಕಲಾ ತಪಸ್ವಿ ರಾಜೇಶ್ ಕೂಡ ಕೆಲವು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಈ ದುಃಖದಿಂದ ಹೊರ ಬರುವವೇಳೆಗೆ ಇದೀಗ ಅರ್ಜುನ್ ಸರ್ಜಾ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಶ್ರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಫೆಬ್ರವರಿ ತಿಂಗಳಲ್ಲಿ ಬಾರದ ಲೋಕಕ್ಕೆ ತೆರಳಿದ್ದರು.
ಜಯನಗರದ ಅಪೋಲೋ ಆಸ್ಪತ್ರೆಯಲ್ಲಿರುವ ಲಕ್ಷ್ಮೀದೇವಿ ಅವರ ಮೃತದೇಹವನ್ನು ಸರ್ಜಾ ಕುಟುಂಬಕ್ಕೆ ಶಿಫ್ಟ್ ಮಾಡಲು ತಯಾರಿ ನಡೆಸಲಾಗ್ತಿದೆ. ಅಂತ್ಯಕ್ರಿಯೆಗೂ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಅರ್ಜುನ್ ಸರ್ಜಾ ಕುಟುಂಬಕ್ಕೆ ಗಣ್ಯಾತಿಗಣ್ಯರು ಸಾಂತ್ವನ ಹೇಳುತ್ತಿದ್ದಾರೆ.
ಇದನ್ನು ಓದಿ : T20 World Cup 2022 India : ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಾಡಲಿದೆ ಟೀಮ್ ಇಂಡಿಯಾ
ಇದನ್ನೂ ಓದಿ : Meghana Raj producer : ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ, ನಿರ್ಮಾಪಕಿಯಾದ್ರು ಮೇಘನಾ ರಾಜ್
ಇದನ್ನೂ ಓದಿ : kannadathi serial remake : ಮರಾಠಿ ಆವೃತ್ತಿಯಲ್ಲಿಯೂ ನಂ.1 ಪಟ್ಟಕ್ಕೇರಿದ ‘ಕನ್ನಡತಿ’ ಧಾರವಾಹಿ
ಇದನ್ನೂ ಓದಿ : poonam pandey : ರಣವೀರ್ ಸಿಂಗ್ ನನ್ನ ಆಟದಲ್ಲಿ ನನ್ನನ್ನೇ ಸೋಲಿಸಿಬಿಟ್ಟರು ಎಂದ ಪೂನಂ ಪಾಂಡೆ
arjun sarja mother lakshmi devi died in bangalore