ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಮೈಸೂರಿನ ಮಾನಸ ಗಂಗೋತ್ರಿ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಡಾಕ್ಟರೇಟ್ ಘೋಷಿಸಿದ್ದು, ಮಂಗಳವಾರ ಮೈಸೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಪುನೀತ್ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಸ್ವೀಕರಿಸಿದ್ದಾರೆ. ಮೈಸೂರು ವಿವಿ ಕಳೆದ 46 ವರ್ಷಗಳ ಹಿಂದೆ ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಡಾ.ರಾಜ್ ಕುಮಾರ್ ಗೂ ಮೈಸೂರು ವಿವಿ ಡಾಕ್ಟರೇಟ್ ಘೋಷಿಸಿತ್ತು. ಇದೀಗ ಸಾಮಾಜಿಕ ಹಾಗೂ ಚಲನಚಿತ್ರ ಕ್ಷೇತ್ರದ ಸೇವೆ ಪರಿಗಣಿಸಿ ಮೈಸೂರು ವಿವಿ ಪುನೀತ್ ರಾಜ್ ಕುಮಾರ್ ಗೆ ಡಾಕ್ಟರೇಟ್ ಘೋಷಿಸಿದೆ.

ಮೈಸೂರು ವಿವಿಯ102 ನೇ ಘಟಿಕೋತ್ಸವದ ವೇಳೆ ಪುನೀತ್ ರಾಜ್ ಕುಮಾರ್ ಗೆ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ. ಈ ಅಪರೂಪದ ಸಂದರ್ಭಕ್ಕೆ ಡಾ.ರಾಜ್ ಕುಮಾರ್ ಕುಟುಂಬದ ಎಲ್ಲ ಗಣ್ಯರು ಸಾಕ್ಷಿಯಾದರು. ಈ ವೇಳೆ ಮಾತನಾಡಿದ ಅಶ್ವಿನಿ, ವಿವಿಯ ವಿದ್ಯಾರ್ಥಿಗಳಿಗಾಗಿ ಎರಡು ಚಿನ್ನದ ಪದಕ ಘೋಷಣೆ ಮಾಡಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎರಡು ಚಿನ್ನದ ಪದಕ ನೀಡುವುದಾಗಿ ಅಶ್ವಿನಿಯವರು ಘೋಷಿಸಿದ್ದಾರೆ. ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಪಾರ್ವತಮ್ಮ ಚಿನ್ನದ ಪದಕ ಹಾಗೂ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಲಲಿತ ಕಲೆ ವಿಭಾಗದಲ್ಲಿ ಇಂದು ಚಿನ್ನದ ಪದಕ ನೀಡುವುದಾಗಿ ಹೇಳಿದ್ದಾರೆ.

ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಲವಾರು ಚಿತ್ರಗಳನ್ನು ನಿರ್ಮಿಸಿ ಸಿನಿಮಾ ರಂಗವನ್ನು ಸಮರ್ಥವಾಗಿ ಆಳಿದ್ದ ಪಾರ್ವತಮ್ಮನವರೆಂದರೇ ಪುನೀತ್ ಗೆ ಜೀವ. ಹೀಗಾಗಿ ಪುನೀತ್ ಸವಿನೆನಪಿಗಾಗಿ ಅಶ್ವಿನಿಯವರು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಪಾರ್ವತಮ್ಮನವರನ್ನು ಸ್ಮರಿಸಿ ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗೆ ಪದಕ ನೀಡುವುದಾಗಿ ಹೇಳಿದ್ದಾರೆ. ಆಶ್ಬಿನಿ ಪುನೀತ್ ರಾಜ್ ಕುಮಾರ್ ಅವರ ಈ ನಿರ್ಧಾರಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದ್ದು ಇದು ದೊಡ್ಮನೆಯ ದೊಡ್ಡ ಗುಣ ಎಂದು ಎಲ್ಲರೂ ಅಶ್ವಿನಿಯವರನ್ನು ಹೊಗಳಿದ್ದಾರೆ.

ಪುನೀತ್ ರಾಜ್ ಕುಮಾರ್ ಕೂಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಾಕಷ್ಟು ಸಹಾಯ ಮಾಡಿದ್ದು ಓದುವ ವಿದ್ಯಾರ್ಥಿಗಳ ಬೆಂಬಲಕ್ಕೆ ಸದಾ ನೀಡುತ್ತಿದ್ದರು. ಆದರೆ ಎಡಗೈಯಲ್ಲಿ ಕೊಟ್ಟದ್ದು ಬಲಗೈ ತಿಳಿಯಬಾರದು ಎಂಬ ನೀತಿ ಅವರದಾಗಿತ್ತು. ಈಗ ಪುನೀತ್ ನಿಧನದ ಬಳಿಕ ಆಶ್ವಿನಿಯವರು ಅವರ ನಿರ್ಧಾರವನ್ನು ಬೆಂಬಲಿಸಿಕೊಂಡು ಪುನೀತ್ ದಾರಿಯಲ್ಲೇ ದಾನ ಧರ್ಮ ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ : ಇಳಿ ವಯಸ್ಸಿನಲ್ಲೂ ಬಡವರಿಗೆ ಮಿಡಿದ ನಟಿ : ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಲೀಲಾವತಿ
ಇದನ್ನೂ ಓದಿ : ಮಲ್ಟಿಪ್ಲೆಕ್ಸ್ ನಿಂದ ಜೇಮ್ಸ್ ಕಿಕ್ ಔಟ್ ಗೆ ಒತ್ತಡ : ಬಿಜೆಪಿ ಶಾಸಕರ ವಿರುದ್ಧ ನಿರ್ಮಾಪಕರ ಅಸಮಧಾನ
( Ashwini Puneeth Rajkumar announces gold medals in the name of Puneeth Rajkumar and Parvathamma Rajkumar)