ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಮೇಲೆ ಮುಂಬೈನ ಛೆಂಬುರ್‌ನಲ್ಲಿ ನಿನ್ನೆ ರಾತ್ರಿ ( ಸೋಮವಾರ, ಫೆಬ್ರವರಿ 20 ) ನಡೆದ ಇವೆಂಟ್‌ವೊಂದರಲ್ಲಿ ದಾಳಿ ನಡೆದಿದೆ. ಹೌದು, ಅಲ್ಲಿನ ಸ್ಥಳೀಯ ಶಾಸಕನೋರ್ವನ ಮಗ ಸ್ವಪ್ನಿಲ್ ಪ್ರಕಾಶ್ ಪಟೆರ್ಪಕರ್ ಸೋನು ನಿಗಮ್ ಜತೆ ಸೆಲ್ಫಿ ಬೇಕು ಎಂದು ಸೋನು ನಿಗಮ್ ಮ್ಯಾನೇಜರ್ ಬಳಿ ತಿಳಿಸಿದ್ದು, ಗಾಯಕನ ಜೊತೆ ಫೋಟೋ ಸಿಗದೇ ಇದ್ದ ಕಾರಣಕ್ಕೆ ಈ ಕೃತ್ಯವೆಸಗಿದ್ದಾನೆ.
ಇನ್ನು ಕಾರ್ಯಕ್ರಮ ಮುಗಿದ ಬಳಿಕ ಸೋನು ನಿಗಮ್ ಅಭಿಮಾನಿಗಳತ್ತ ಕೈ ಬೀಸುತ್ತಾ ವೇದಿಕೆಯಿಂದ ಕೆಳಗಿಳಿದಿದ್ದಾರೆ. ಸ್ವಪ್ನಿಲ್ ಪ್ರಕಾಶ್ ಪಟೆರ್ಪಕರ್ ಸೋನು ನಿಗಮ್ ಅವರನ್ನು ತಳ್ಳಿದ್ದಾನೆ. ಈ ವೇಳೆ ಸೋನು ನಿಗಮ್ ಅವರನ್ನು ರಕ್ಷಣೆಗೆ ಬಾಡಿ ಗಾರ್ಡ್ ಹಾಗೂ ಸೋನು ನಿಗಮ್ ಸ್ನೇಹಿತ ರಬ್ಬನಿ ಖಾನ್ ಬಂದಿದ್ದಾರೆ. ಆ ವ್ಯಕ್ತಿ ತಳ್ಳಿದ ರಭಸಕ್ಕೆ ರಬ್ಬನಿ ಖಾನ್ ಪಕ್ಕದಲ್ಲೇ ಏಳು ಅಡಿ ಕೆಳಗಿದ್ದ ಗ್ರೌಂಡ್‌ಗೆ ಬಿದ್ದಿದ್ದಾರೆ. ಇನ್ನು ಬಾಡಿ ಗಾರ್ಡ್ ಸಹ ಕೆಳಗೆ ಬಿದ್ದು, ಗಾಯಕ್ಕೊಳಗಾಗಿದ್ದಾರೆ. ಇನ್ನು ಸೋನು ನಿಗಮ್ ಅವರಿಗೆ ಯಾವುದೇ ರೀತಿಯ ಗಾಯಗಳು ಆಗಿಲ್ಲ. ಆದರೆ ಸೋನು ನಿಗಮ್ ಅವರನ್ನು ರಕ್ಷಿಸಲು ಬಂದ ಸ್ನೇಹಿತ ರಬ್ಬನಿ ಖಾನ್ ಹಾಗೂ ಬಾಡಿ ಗಾರ್ಡ್‌ಗೆ ಪೆಟ್ಟಾಗಿದೆ.
#Breaking
— Sameet Thakkar (@thakkar_sameet) February 20, 2023
Singer Sonu Nigam who raised his voice about Azan Loudspeakers attacked by Janab Uddhav Thackeray MLA Prakash Phaterpekar and his goons in music event at Chembur. Sonu has been taken to the hospital nearby. pic.twitter.com/32eIPQtdyM
ಇದನ್ನೂ ಓದಿ : Ambatanaya mudradi : ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ವಿಧಿವಶ
ಇದನ್ನೂ ಓದಿ : Vijayalakshmi Darshan : ಸತ್ಯ ಸಿಂಹ ಇದ್ದ ಹಾಗೆ, ಯಾರೂ ರಕ್ಷಿಸಬೇಕಾಗಿಲ್ಲ ಎಂದ ವಿಜಯಲಕ್ಷ್ಮಿ ದರ್ಶನ್!
ಇದನ್ನೂ ಓದಿ : Kranti Movie OTT : ಸಿನಿಮಾ ಬಿಡುಗಡೆಯಾದ ಒಂದು ತಿಂಗಳಿಗೆ ಓಟಿಟಿಗೆ ಲಗ್ಗೆ ಇಟ್ಟ “ಕ್ರಾಂತಿ”
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಸೋನು ನಿಗಮ್ ಆ ವ್ಯಕ್ತಿ ಮೇಲೆ ದಾಳಿ ನಡೆಸಿದಕ್ಕಾಗಿ ದೂರು ನೀಡಿರುವುದಾಗಿ ಹೇಳಿಕೊಂಡಿದ್ದಾರೆ. “ಕಾರ್ಯಕ್ರಮ ಮುಗಿದ ಮೇಲೆ ನಾನು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದೆ. ಆ ಸಂದರ್ಭದಲ್ಲಿ ಸ್ವಪ್ನಿಲ್ ಪ್ರಕಾಶ್ ಪಟೆರ್ಪಕರ್ ಅವರು ನನ್ನನ್ನು ತಳ್ಳಿದರು ಹಾಗೂ ನನ್ನ ಬಾಡಿಗಾರ್ಡ್ ಹರಿ ಮತ್ತು ಸ್ನೇಹಿತ ರಬ್ಬನಿ ಖಾನ್ ಅವರನ್ನೂ ಸಹ ತಳ್ಳಿದರು. ಆಮೇಲೆ ನಾನು ಕೆಳಗಡೆ ಬಿದ್ದೆ. ಈ ಕುರಿತಾಗಿ ದೂರು ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
Attack on famous singer Sonu Nigam: Case filed against MLA’s son