ಹೈದ್ರಾಬಾದ್ : ವಿಶ್ವವನ್ನೇ ನಡುಗಿಸುತ್ತಿರೋ ಕೊರೊನಾ ವೈರಸ್ ಭೀತಿ ಇದೀಗ ಬಾಹುಬಲಿಗೂ ತಟ್ಟಿದೆ. ಬಾಹುಬಲಿ ನಟ ಪ್ರಭಾಸ್ ಜಾನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕೊರೊನಾ ಭೀತಿಯಿಂದ ಸ್ಯಾಂಡಲ್ ವುಡ್ ನ ದರ್ಶನ್ ಅಭಿನಯದ ರಾಬರ್ಟ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ವಿದೇಶದಲ್ಲಿ ಶೂಟಿಂಗ್ ರದ್ದು ಮಾಡಿದ್ದವು.

ಆದ್ರೀಗ ಪ್ರಭಾಸ್ ನಟನೆಯ ಜಾನ್ ಸಿನಿಮಾ ವಿದೇಶದಲ್ಲಿ ಶೂಟಿಂಗ್ ಪ್ಲಾನ್ ಮಾಡಿಕೊಂಡಿದೆ. ಎಲ್ಲೆಡೆ ಕೊರೊನಾ ಭೀತಿಯಿಂದಾಗಿ ಬಾಹುಬಲಿ ನಟ ಪ್ರಭಾಸ್ ಕೂಡ ಮಾಸ್ಕ್ ಧರಿಸಿ ಹೈದ್ರಬಾದ್ ವಿಮಾನ ನಿಲ್ದಾಣಕ್ಕೆ ಎಂಟ್ರಿಕೊಟ್ಟಿದ್ರು.

ಮಾಸ್ಕ್ ಧರಿಸಿ ಬಂದ ಪ್ರಭಾಸ್ ನೋಡಿದ ಅಭಿಮಾನಿಗಳು ಸಖತ್ ಶಾಕ್ ಆಗಿದ್ದಾರೆ. ಕೊರೊನಾ ಹರಡುವ ಭೀತಿಯ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿಯೇ ಪ್ರಭಾಸ್ ಹೈದ್ರಾಬಾದ್ ನಿಂದ ಯುರೂಪ್ ಗೆ ಪ್ರಯಾಣ ಬೆಳೆಸಿದ್ದಾರೆ.

ಜಾನ್ ಪ್ರಭಾಸ್ ಅಭಿನಯದ 20ನೇ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮಾತ್ರವಲ್ಲ ಬಾಲಿವುಡ್ ನಟಿ ಭಾಗ್ಯಶ್ರೀ ಕೂಡ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.