ಸೋಮವಾರ, ಏಪ್ರಿಲ್ 28, 2025
HomeCinemaBangalore Boys movie : ಇದೇ 30ಕ್ಕೆ ತೆರೆಗೆ ಬರಲು ಸಿದ್ದವಾಯ್ತು ಬೆಂಗಳೂರು ಬಾಯ್ಸ್‌ ಸಿನಿಮಾ

Bangalore Boys movie : ಇದೇ 30ಕ್ಕೆ ತೆರೆಗೆ ಬರಲು ಸಿದ್ದವಾಯ್ತು ಬೆಂಗಳೂರು ಬಾಯ್ಸ್‌ ಸಿನಿಮಾ

- Advertisement -

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಕಥೆಯನ್ನು ಒಳಗೊಂಡ (Bangalore Boys movie) ಸಿನಿಮಾವು ಮೂಡಿ ಬರುತ್ತಿದೆ. ಇದೀಗ ಬಹು ನಿರೀಕ್ಷಿತ ಸಿನಿಮಾವಾದ ಬೆಂಗಳೂರು ಬಾಯ್ಸ್‌ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೇ ಜೂನ್‌ 30ರಂದು ರಾಜ್ಯದಾದ್ಯಂತ ಸಿನಿಮಾ ರಿಲೀಸಗ ಆಗಲಿದೆ. ಈ ಸಿನಿಮಾದ ಹಾಡುಗಳು ಈಗಾಗಲೇ ಸಖತ್‌ ಸದ್ದು ಮಾಡುತ್ತಿದ್ದು, ಇದೀಗ ಬಿಡುಗಡೆಯಾದ ಕಾಮಿಡಿ ಕಿಂಗ್ ಚಿಕ್ಕಣ್ಣ ಧ್ವನಿಯಾಗಿರುವ ಟಪಾಸ್ ಹಾಡು ಭಾರೀ ಸದ್ದು ಮಾಡುತ್ತಿದೆ.

ಬಿಡುಗಡೆ ಹೊಸ್ತಿಲಲ್ಲಿರುವ ಬೆಂಗಳೂರು ಬಾಯ್ಸ್‌ ಸಿನಿಮಾದ ಹೊಸ ಹಾಡು ಇದಾಗಿದ್ದು, ಈ ಹಾಡಿನಲ್ಲಿ ಸಾಫ್ಟ್‌ವೇರ್‌ಗಳ ಪಾಡು ವಿವರಿಸುವ ಹಾಡು ಇದಾಗಿದೆ. ಈ ಹಾಡಿಗೆ ಧರ್ಮವಿಷ್‌ ಅವರು ಸಂಗೀತ ನಿರ್ದೇಶನ ನೀಡಿದ್ದಾರೆ. ಹಾಗೆಯೇ ಅರಸು ಅಂಥರೆ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಇನ್ನು ವಿ ಮೇಕರ್ಸ್ ನಿರ್ಮಾಣದಲ್ಲಿ ಬೆಂಗಳೂರು ಬಾಯ್ಸ್ ಸಿನಿಮಾ ಮೂಡಿ ಬಂದಿದೆ.

ವೇಸ್ಟ್ ಎನಿಸಿಕೊಳ್ಳುವ ಲಾಸ್ಟ್ ಬೆಂಚ್ ಸ್ಟೂಡೆಂಟ್ ಬದುಕಿನಲ್ಲಿ ಸಾಧನೆಯ ಗುರಿಮುಟ್ಟಿದ ಸಾಕಷ್ಟು ಉದಾಹರಣೆಗಳಿವೆ. ಅಂತಹದ್ದೇ ಕಥಾಹಂದರ ಹೊಂದಿರುವ ಸಿನಿಮಾ ಬೆಂಗಳೂರು ಬಾಯ್ಸ್ ಆಗಿದೆ. 90ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳಾದ ರಣಧೀರ, ಅಂತ , ಓಂ ಹಾಗೂ ಎ ಸಿನಿಮಾಗಳ ಪಾತ್ರದಲ್ಲಿ ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ, ಚಂದನ್ ಆಚಾರ್, ರೋಹಿತ್ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಗ್ಯ ನಯನ, ವೈನಿಧಿ ಜಗದೀಶ್, ಜಯಶ್ರೀ ಆಚಾರ್ ಹಾಗೂ ಸೋನಿ ನಟಿಸಿದ್ದಾರೆ.

ಇದನ್ನೂ ಓದಿ : Kamal Haasan – Prabhas : ಪ್ರಾಜೆಕ್ಟ್‌ ಕೆ ಸಿನಿಮಾದಲ್ಲಿ ನಟ ಪ್ರಭಾಸ್‌ ಜೊತೆ ನಟಿಸಲಿದ್ದಾರೆ ನಟ ಕಮಲ್‌ ಹಾಸನ್

ಇದನ್ನೂ ಓದಿ : Actor Suraj : ಪಾರ್ವತಮ್ಮ ರಾಜ್‌ಕುಮಾರ್‌ ತಮ್ಮನ ಮಗ ಸೂರಜ್‌ಗೆ ಭೀಕರ ಅಪಘಾತ

ಕಾಮಿಡಿ ಕಿಂಗ್ ಚಿಕ್ಕಣ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಐಟಿಬಿಟಿ ಉದ್ಯೋಗಿ ಕಾಣಿಸಿಕೊಂಡಿದ್ದಾರೆ. ಉಮೇಶ್, ಪಿಡಿ ಸತೀಶ್, ಮೋಹನ್ ಜೂನೇಜಾ ಸೇರಿದಂತೆ ಹಿರಿಯ ಕಲಾವಿದರ ದಂಡು ಸಿನಿಮಾದಲ್ಲಿದೆ. ಬೆಂಗಳೂರು ಬಾಯ್ಸ್ ಸಿನಿಮಾಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ಖ್ಯಾತಿಯ ಗುರುದತ್‌ ಗಾಣಿಗ ಕ್ರಿಯೇಟಿವ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದು, ರವಿ ಶ್ರೀರಾಮ್ ಕೋ ಡೈರೆಕ್ಟರ್ ಆಗಿ, ಡಿ ಆರ್ ಶ್ರೀನಿವಾಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿದ್ದಾರೆ. ರಿಜೋ ಪಿ ಜಾನ್ ಛಾಯಾಗ್ರಹಣ, ಧರ್ಮ ವಿಶ್ ಟ್ಯೂನ್ ಹಾಕಿದ್ದಾರೆ. ಸಿನಿಮಾ ಆಸಕ್ತಿ ಹೊಂದಿರುವ ತೆಲುಗು ಮೂಲದ ವಿಕ್ರಮ್‌ ಕೆ.ವೈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

Bangalore Boys movie: Bangalore Boys movie is all set to hit the screens on June 30

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular