ಮುಂಬೈ : ಬಾಲಿವುಡ್‍ನ ಹಿರಿಯ ಗಾಯಕ, ಖ್ಯಾತ ಸಂಗೀತ ನಿದೇರ್ಶಕ ಬಪ್ಪಿ ಲಹರಿ (Bappi Lahiri) ವಿಧಿವಶರಾಗಿದ್ದಾರೆ. ಅನಾರೊಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
1970-80ರ ದಶಕದಲ್ಲಿ ಬಾಲಿವುಡ್‍ನ ಬಹು ಪ್ರಖ್ಯಾತ ಹಾಡುಗಾರರಾಗಿದ್ದರು. ಬಪ್ಪಿ ಲಹರಿ ಕಳೆದ ಒಂದು ತಿಂಗಳಿನಿಂದಲೂ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಮತ್ತೆ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಪ್ಪಿ ಲಹರಿ ಹಲವು ರೀತಿಯ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಮಧ್ಯರಾತ್ರಿ OSA (ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ) ಕಾರಣದಿಂದಾಗಿ ನಿಧನರಾಗಿದ್ದಾರೆ.
ಸಂಗೀತ ದಂತಕಥೆ ಬಪ್ಪಿ ಲಹಿರಿ ಅವರು 1973 ರ ಹಿಂದಿ ಚಲನಚಿತ್ರ ‘ನಿನ್ಹಾ ಶಿಕಾರಿ’ಯಲ್ಲಿ ಮೊದಲ ಬಾರಿಗೆ ಹಾಡುಗಾರರಾಗಿ ಗುರುತಿಸಿಕೊಂಡಿದ್ದರು. ಕಿಶೋರ್ ಕುಮಾರ್ ಅವರ ಚಿತ್ರ ಬಧಿ ಕಾ ನಾಮ್ ಬಿಯರ್ಡ್‌ನೊಂದಿಗೆ ಸಂಗೀತ ನಿರ್ದೇಶಕರಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಶಟ್ ದಿ ಮಾರ್ಕೆಟ್, ಚಲ್ತೇ ಚಲ್ತೆ, ಆಪ್ ಕಿ ಖಾತಿರ್, ಲಹಮ್ ಕೆ ದೋ ರಂಗ್, ವರದಾದ್, ನಮಕ್ ಹಲಾಲ್, ಶರಾಬಿ, ಹಿಮ್ಮತ್ ವಾಲಾ, ಸತ್ಯಮೇವ್ ಜಯತೇ, ಆಜ್ ಕಾ ಅರ್ಜುನ್, ತಾನೇದಾರ್ ಸೇರಿದಂತೆ ಹಲವು ಚಿತ್ರಗಳ ಹಾಡುಗಳು ಅವರ ಖಾತೆಗೆ ಬಂದವು. 2020 ರಲ್ಲಿ, ಬಾಘಿ 3 ರ ಹಾಡು ಬಂಕಾಸ್ ಬಾಲಿವುಡ್‌ನಲ್ಲಿ ಕೊನೆಯ ಹಾಡಾಗಿತ್ತು
ಚಲ್ತೆ ಚಲ್ತೆ, ಡಿಸ್ಕೋ ಡ್ಯಾನರ್ ಮತ್ತು ಶರಾಬಿ ಮುಂತಾದ ಹಲವಾರು ಜನಮೆಚ್ಚಿದ ಹಾಡುಗಳಿಂದ ಹೆಸರುವಾಸಿಯಾಗಿದ್ದರು. 2020ರಲ್ಲಿ ತೆರೆಕಂಡ ಭಾಗಿ-3 ಚಿತ್ರದ ಟೈಟಲ್ ಸಾಂಗ್ ಮೂಲಕ ಬಪ್ಪಿ ಲಹರಿ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ಬಪ್ಪಿ ಲಾಹಿರಿ, ನಿಜವಾದ ಹೆಸರು ಅಲೋಕೇಶ್. ಕೇವಲ ಹಾಡುಗಾರ, ಸಂಗೀತ ನಿರ್ದೇಶಕರಷ್ಟೇ ಅಲ್ಲಾ ಬಪ್ಪಿ ಲಹರಿ ರಾಜಕಾರಣಿಯಾಗಿಯೂ ಹೆಸರು ಮಾಡಿದ್ದಾರೆ. 2014 ರಲ್ಲಿ ಬಿಜೆಪಿಗೆ ಸೇರಿದ್ದ ಬಪ್ಪಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಇದೀಗ ಬಪ್ಪಿ ಲಹರಿ ಅವರ ನಿಧನಕ್ಕೆ ಬಾಲಿವುಡ್ ನಟ, ನಟಿಯರು, ಗಣ್ಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : Help Alert: ಬೆಟ್ಟಂಪಾಡಿ ದೇವಾಲಯದ ಭಾಗ್ಯಲಕ್ಷ್ಮಿಯ ಚಿಕಿತ್ಸೆಗೆ ಬೇಕಿದೆ ನೆರವು; ಸಾರ್ವಜನಿಕರಲ್ಲಿ ಕೋರಿಕೆ
ಇದನ್ನೂ ಓದಿ : ಕವಿಯಾ ಮಾರನ್ ಎಂಬ ಸಂಚಲನ! ಐಪಿಎಲ್ ಹರಾಜಲ್ಲಿ ಇವರು ಕಾಣಿಸಿಕೊಂಡಿದ್ದೇಕೆ?
ಇದನ್ನೂ ಓದಿ : ಹಿಜಾಬ್ ಸಂಘರ್ಷ; ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ; ವಾದ ಪ್ರತಿವಾದದ ಅಂಶಗಳು ಇಲ್ಲಿವೆ
( Bappi Lahiri, famous Pioneer Of Disco In Bollywood, Dies At 69)