ವೃತ್ತಿಯಲ್ಲಿ ಬ್ರಿಟಿಷ್ ಗಾಯಕಿಯಾಗಿದ್ದರೂ ತಮ್ಮ ಮೈಮಾಟದಿಂದಲೇ ಪಡ್ಡೆಗಳ ನಿದ್ದೆ ಕದ್ದವರು ಸೋಫಿ ಚೌದರಿ (Sophie Choudry photoshoot ) . ಹಿಂದಿ ಚಿತ್ರರಂಗದಿಂದ ಬಣ್ಣದ ಲೋಕದ ಸಂಪರ್ಕಕ್ಕೆ ಬಂದ ಸೋಫಿ ಬಾಲಿವುಡ್ ಅಂಗಳ ದಾಟಿ ಹಾಲಿವುಡ್ ಅಂಗಳದಲ್ಲೂಮಿಂಚಿದ್ದಾರೆ. 1982 ರಲ್ಲಿ ಯುಕೆಯಲ್ಲಿ ಜನಿಸಿದ ಸೋಫಿ ಗಾಯಕಿಯಾಗಿ ಸಖತ್ ಮಿಂಚಿದ್ದಾರೆ. ಸೌಂಡ್ ಆಫ್ ಸೋಫಿ ಹಾಗೂ ಯೆ ದಿಲ್ ಸುನ್ ರಹಾ ಹೈ ಸೋಫಿಯ ಫೇಮಸ್ ಅಲ್ಬಂಗಳು.

ಕೇವಲ ಗಾಯಕಿಯಾಗಿ ಮಾತ್ರವಲ್ಲ ನಟಿಯಾಗಿ, ವಿಜೆಯಾಗಿಯೂ ಹೆಸರು ಗಳಿಸಿದ ಸೋಫಿ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ತಮ್ಮ ಹಾಟ್ ಹಾಟ್ ಪೋಟೋಗಳಿಂದಲೇ ಸಖತ್ ಫೇಮಸ್. ಮಾಡೆಲ್ ಆಗಿರೋ ಸೋಫಿ ನಿರೂಪಕಿಯಾಗಿಯೂ ಹೆಸರು ಗಳಿಸಿದ್ದಾರೆ. ಹಿಂದಿಯಲ್ಲಿ ಕೆರಿಯರ್ ಆರಂಭಿಸಿ ಹಾಲಿವುಡ್ ಗೆ ಬೆಳೆದ ಪ್ರತಿಭೆ ಸೋಫಿ.

ಕೆಲವು ಹಾಡುಗಳಿಗೆ ಸಾಹಿತ್ಯ ಕೂಡಾ ರಚಿಸಿದ್ದಾರೆ.ನೀಳಕಾಯದ ಸೋಫಿ ಮಾದಕ ಸೌಂದರ್ಯದಿಂದ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಯಾವ ಬಾಲಿವುಡ್ ಸ್ಟಾರ್ ಗೂ ಕಮ್ಮಿಯಿಲ್ಲದಂತೆ ಪೋಟೋಶೂಟ್ ಗಳಿಗೆ ಪೋಸ್ ಕೊಡೋ ಸೋಫಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್.
ಮಾತ್ರವಲ್ಲ ತಮ್ಮ ಎಲ್ಲ ಲೆಟೇಸ್ಟ್ ಮಾಹಿತಿಗಳನ್ನು ಸೋಫಿ ಸೋಷಿಯಲ್ ಮೀಡಿಯಾದಲ್ಲಿ ಮರೆಯದೇ ಅಪ್ಡೇಟ್ ಮಾಡ್ತಾರೆ. ಯುಕೆಯಲ್ಲಿ ಜೀ ಟಿವಿಯ ಯುವರ್ ಜಿಂದಗಿ ಎಂಬ ರೋಡ್ ಶೋ ನಿರೂಪಣೆಯ ಮೂಲಕ ಸೋಫಿ ಗುರುತಿಸಿಕೊಂಡಿದ್ದರು.

ಬಳಿಕ ತಮ್ಮ ೧೨ ವರ್ಷದಿಂದ ಗಾಯನದ ಅಭ್ಯಾಸ ಇಟ್ಟುಕೊಂಡಿದ್ದ ಸೋಫಿ ಈಗ ಅದನ್ನೇ ವೃತ್ತಿಯಾಗಿ ಮುಂದುವರೆಸಿದ್ದಾರೆ. ಯೆ ದಿಲ್ ಸುನ್ ರಹಾ ಹೇ ಹಾಡನ್ನು ಸ್ವತಃ ಬರೆದು ಹಾಡುವ ಮೂಲಕ ಸೋಫಿ ಮತ್ತಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ.

ಎಂಟಿವಿ ಯಲ್ಲಿ ವಿಜೆಯಾಗಿಯೂ ಕೆಲಸ ಮಾಡಿದ ಸೋಫಿ, ಬಳಿಕ ಬಪ್ಪಿ ಲಹರಿಯವರೊಂದಿಗೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದಾ ಹಾಟ್ ಹಾಟ್ ಪೋಟೋಗಳ ಮೂಲಕ ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚುವ ಮೂಲಕ ಸುದ್ದಿಯಾಗುತ್ತಾರೆ.

ಈಗಲೂ ಮತ್ತೊಮ್ಮೆ ಸಮುದ್ರ ತೀರದಲ್ಲಿ ಬಿಕನಿ ತೊಟ್ಟು ಮಾದಕವಾಗಿ ಮೈಮಾಟ ತೋರಿದ ಸೋಫಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಸೋಫಿ ತೆಳು ಹಸಿರಿನಂತಹ ಬಿಕನಿಯಲ್ಲಿ ತಮ್ಮ ಸೌಂದರ್ಯ ಅನಾವರಣಗೊಳಿಸಿದ್ದು, ನೋಡುಗರ ಗಮನ ಸೆಳೆದ ಪೋಟೋ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಸದ್ದು ಮಾಡ್ತಿದೆ.



ಇದನ್ನೂ ಓದಿ : Raima Islam Shimu : ನಾಪತ್ತೆಯಾಗಿದ್ದ ನಟಿ ಗೋಣಿಚೀಲದಲ್ಲಿ ಶವವಾಗಿ ಪತ್ತೆ : ಪತಿ ಪೊಲೀಸರ ವಶಕ್ಕೆ
ಇದನ್ನೂ ಓದಿ : Divya Suresh : ಬಿಗ್‌ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್‌ಗೆ ಅಪಘಾತ
( beauty queen British singer Sophie Choudry, photoshoot Potos Viral)