ಸ್ಯಾಂಡಲ್ ವುಡ್ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಕುಟುಂಬ ಸದಸ್ಯರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಿಗ್ ಬಾಸ್ ಶೋನಿಂದಲೇ ಪ್ರಖ್ಯಾತಿಯನ್ನು ಗಳಿಸಿಕೊಂಡಿರುವ ಜಯಶ್ರೀ ಅವರು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಈ ಜಗತ್ತು ಬೇಡಾ.. ಈ ಡಿಪ್ರೆಶನ್ ಬೇಡಾ ಅಂತಾ ಪೋಸ್ಟ್ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಇದರಿಂದಾಗಿ ಸ್ಯಾಂಡಲ್ ನಟ, ನಟಿಯರಿಗೆ ಆತಂಕ ಶುರುವಾಗಿದ್ದು, ಸ್ನೇಹಿತರು ಜಯಶ್ರೀ ರಾಮಯ್ಯಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ತನ್ನ ಮಾನಸಿಕ ಖಿನ್ನತೆಯ ಕುರಿತು ಜಯಶ್ರೀ ಅವರು ಬರೆದುಕೊಂಡಿದ್ದಾರೆ. ನಟಿ ಜಯಶ್ರೀ ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅನ್ನುವ ಕುರಿತು ಮಾಹಿತಿ ಪತ್ತೆಯಾಗಿಲ್ಲ. ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಕೂಡಲೇ ಕುಟುಂಬದ ಸದಸ್ಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.