Bigg Boss Kannada OTT : ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಯಾವಾಗ ಶುರುವಾಗುತ್ತೆ ಅಂತಾ ಕಾಯುತ್ತಿರೋ ಅನೇಕ ವೀಕ್ಷಕರು ನಮ್ಮಲ್ಲಿದ್ದಾರೆ. ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 9 ಇನ್ನೇನು ಶುರುವಾಗಲಿದೆ ಎಂಬ ಸುಳಿವುಗಳನ್ನು ಕಲರ್ಸ್ ಕನ್ನಡ ಚಾನೆಲ್ ನೀಡುತ್ತಲೇ ಬಂದಿದೆ. ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಈ ಬಗೆಗಿನ ಹಲವಾರು ಮಾಹಿತಿಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೊದಲೇ ಶೇರ್ ಮಾಡ್ತಾರೆ. ಮೊನ್ನೆ ಮೊನ್ನೆಯಷ್ಟೇ ನಟ ಸುದೀಪ್ ಕೂಡ ಪ್ರೋಮೋ ಶೂಟ್ನಲ್ಲಿ ತಮ್ಮ ಅನುಭವ ಹೇಗಿತ್ತು ಅಂತಾ ಹೇಳಿಕೊಂಡಿದ್ದರು. ಇದೀಗ ಬಿಗ್ ಬಾಸ್ ನೂತನ ಸೀಸನ್ನ ಮೊದಲ ಪ್ರೊಮೋ ಲಾಂಚ್ ಆಗಿದೆ. ಅಂದಹಾಗೆ ಈ ಬಾರಿ ಬರ್ತಿರೋದು ಬಿಗ್ಬಾಸ್ ಕನ್ನಡ ಸೀಸನ್ 9 ಅಲ್ಲ ಬದಲಾಗಿ ಸೀಸನ್ 1..!
ಇದೇನಪ್ಪಾ ಕಳೆದ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 8 ಮುಕ್ತಾಯಗೊಂಡಿತ್ತು. ಅದುಹೇಗೆ ಮತ್ತೆ ಸೀಸನ್ 1 ಶುರುವಾಗೋಕೆ ಸಾಧ್ಯ..? ಎಂದು ನೀವು ಅಂದುಕೊಂಡಿದ್ದರೆ… ಟ್ವಿಸ್ಟ್ ಇರೋದೇ ಇಲ್ಲಿ. ಈ ಬಾರಿ ಟಿವಿಯಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭವಾಗೋಕು ಮುನ್ನ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ. ಹೀಗಾಗಿ ಇದನ್ನು ಬಿಗ್ಬಾಸ್ ಕನ್ನಡ ಒಟಿಟಿ ಸೀಸನ್ 1 ಎಂದು ಕರೆಯಬಹುದಾಗಿದೆ. ಅಂದರೆ ಆರು ವಾರಗಳ ಕಾಲ ನಡೆಯಲಿರುವ ಈ ಸ್ಪರ್ಧೆಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋದಿಲ್ಲ. ಬದಲಾಗಿ ವೂಟ್ ಆ್ಯಪ್ನಲ್ಲಿ ದಿನದ 24 ಗಂಟೆಯೂ ಬಿಗ್ ಬಾಸ್ ಒಟಿಟಿ ಪ್ರಸಾರ ವಾಗಲಿದೆ.
ಇಂದು ಲಾಂಚ್ ಮಾಡಲಾದ ಪ್ರೊಮೋದಲ್ಲಿ ಎಲ್ಲರೂ ನಟ ಸುದೀಪ್ಗಾಗಿ ಕಾಯುತ್ತಿರ್ತಾರೆ. ಐಷಾರಾಮಿ ಕಾರಿನಲ್ಲಿ ಬರುವ ಕಿಚ್ಚ ಸುದೀಪ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಎಲ್ಲರೂ ಸೀಸನ್ 9ಗೆ ಶುಭಾಶಯ ಕೋರುತ್ತಾರೆ. ಆದರೆ ಸುದೀಪ್ ಇದು ಸೀಸನ್ 9 ಅಲ್ಲ ಸೀಸನ್ 1 ಎಂದು ಹೇಳ್ತಾರೆ. ಸೀಸನ್ 8 ಮುಗಿದ ಮೇಲೆ ಸೀಸನ್ 9 ಆರಂಭವಾಗಬೇಕಲ್ವೇ ಎಂದು ಪ್ರಶ್ನೆ ಕೇಳಿದರೆ ಅದಕ್ಕೆ ಸುದೀಪ್ ಎಂದಾದರೂ ಬಿಗ್ ಬಾಸ್ ಕೇವಲ ಒಟಿಟಿಯಲ್ಲಿ ಮಾತ್ರ ಪ್ರಸಾರಗೊಂಡಿತ್ತೇ ಎಂದು ಕೇಳ್ತಾರೆ..? ಇದಕ್ಕೆ ಇಲ್ಲ ಎಂಬ ಉತ್ತರ ಬರ್ತಿದ್ದಂತೆಯೇ ಸುದೀಪ್ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1ರ ಬಗ್ಗೆ ಮಾಹಿತಿ ನೀಡ್ತಾರೆ. ಅಲ್ಲಿಗೆ ಪ್ರೋಮೋ ಕೊನೆಯಾಗುತ್ತದೆ.
ಮೂಲಗಳ ಪ್ರಕಾರ ಬಿಗ್ಬಾಸ್ ಕನ್ನಡ ಒಟಿಟಿ ಸೀಸನ್ 1ಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆದವರು ಹಾಗೂ ಕಿರುತೆರೆ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗ್ತಿದೆ. ಆಗಸ್ಟ್ ಆರನೇ ತಾರೀಖು ಸಂಜೆ 7 ಗಂಟೆಗೆ ಒಟಿಟಿ ಸೀಸನ್ ಗ್ರ್ಯಾಂಡ್ ಪ್ರೀಮಿಯರ್ ಇರಲಿದ್ದು ಎಲ್ಲಾ ಕುತೂಹಲಗಳಿಗೆ ಅಂದೇ ತೆರೆ ಬೀಳಲಿದೆ.
ಇದನ್ನು ಓದಿ : KL Rahul Health Report : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ ರಾಹುಲ್ ?
Bigg Boss Kannada OTT season 1 starts from 6th August