14 ಟಿವಿ ತಾರೆಯರನ್ನು ಒಳಗೊಂಡ ಬಿಗ್ ಬಾಸ್ ಮಿನಿ ಸೀಸನ್ ಅಗಸ್ಟ್ 14 ರಿಂದ ಆರಂಭವಾಗಲಿದ್ದು, ಕಲರ್ಸ್ ಕನ್ನಡ ವಾಹಿನಿಯ ಸೀರಿಯಲ್ ನಟ-ನಟಿಯರು ಈ ಶೋನ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಅಗಸ್ಟ್ 14 ಶನಿವಾರಹಾಗೂ ಭಾನುವಾರ ಸೀಸನ್ ಗ್ರಾಂಡ್ ಓಫನಿಂಗ್ ನಡೆಯಲಿದ್ದು, ಪ್ರತಿರಾತ್ರಿ 1 ಗಂಟೆಗಳ ಕಾಲ ಶೋ ಪ್ರಸಾರಗೊಳ್ಳಲಿದೆ. ಅಗಸ್ಟ್ 28 ಕ್ಕೆ ಶೋ ಅಂತ್ಯಗೊಳ್ಳಲಿದೆ.

ಸ್ಟಾರ್ ನಿರೂಪಕ ಅಕುಲ್ ಬಾಲಾಜಿ ಹಾಗೂ ನಿರಂಜನ ದೇಶಪಾಂಡೆ ಈ ಶೋನ ಸಾರಥ್ಯ ವಹಿಸಲಿದ್ದಾರೆ. ಅಷ್ಟೇ ಅಲ್ಲ ಏಳು ನಟ-ನಟಿಯರು ಈ ಶೋನಲ್ಲಿ ಭಾಗವಹಿಸಲಿದ್ದು, ಬಿಗ್ ಬಾಸ್ ಮಿನಿ ಅವಾರ್ಡ್ಸ್ ಹೆಸರಿನಲ್ಲಿ ಈ ಶೋ ನಡೆಯುತ್ತಿದ್ದು, ಇಷ್ಟು ದಿನಗಳ ಕಾಲ ಪಾತ್ರಧಾರಿಗಳಾಗಿ ಮನಗೆಲ್ಲುತ್ತಿದ್ದ ನಟ-ನಟಿಯರು ತಮ್ಮ ನಿಜವಾದ ವ್ಯಕ್ತಿತ್ವದ ಜೊತೆ ಬಿಗ್ ಬಾಸ್ ನಲ್ಲಿ ಆಟವಾಡಲಿದ್ದಾರೆ.

ಮೂಲಗಳ ಪ್ರಕಾರ ಇದುವರೆಗೂ ನಡೆದ ಬಿಗ್ ಬಾಸ್ ಗಿಂತ ಭಿನ್ನವಾಗಿರಲಿರುವ ಈ ಶೋನಲ್ಲಿ ವಿಭಿನ್ನ ಟಾಸ್ಕ್ ಹಾಗೂ ವಿಭಿನ್ನ ರೀತಿಯ ಪ್ರಶಸ್ತಿಗಳು ಇರಲಿದೆ. ಹೀಗಾಗಿ ಶೋ ಇನ್ನಷ್ಟು ಕುತೂಹಲ ಮೂಡಿಸಿದೆ. ಶನಿವಾರ ಮತ್ತು ಭಾನುವಾರದ ಎಪಿಸೋಡ್ ನಿರ್ವಹಣೆಗೆ ಸುದೀಪ್ ಬರಲಿದ್ದಾರೆ.

ಶನಿವಾರ ಆರಂಭವಾಗಲಿರುವ ಶೋನಲ್ಲಿ ಗಗನ್ ಚಿನ್ನಪ್ಪ,ನಯನಾ ನಾಗರಾಜ್,ಕಿರಣ ರಾಜ್,ಅಭಿನವ್ ವಿಶ್ವನಾಥನ್, ಚಂದನಾ ಅನಂತಕೃಷ್ಣ,ರಮೋಲಾ,ವೈಷ್ಣವಿ,ಭವ್ಯಾ ಗೌಡ,ಹೃತ್ವಿಕ್ ಮಠದ್,ತ್ರಿವಿಕ್ರಮ್,ಪ್ರೇರಣಾ ಕಂಬಂ, ಯಶಸ್ವಿ ಈ ಸೀಸನ್ ನಲ್ಲಿ ಭಾಗವಹಿಸುತ್ತಿದ್ದಾರೆ.