Manjupavagada:ಮದ್ವೆ ಯಾವಾಗ ಎಂದವರಿಗೆ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಏನಂದ್ರು ಗೊತ್ತಾ…?!

ಬಿಗ್ ಬಾಸ್ ಕನ್ನಡ ಸೀಸನ್ 8 ಕ್ಕೆ ಸಂಭ್ರಮದ ತೆರೆ ಬಿದ್ದಿದೆ. ಅಪ್ಪಟ ಹಳ್ಳಿಹುಡುಗ, ಮಜಾಭಾರತ ಹಾಸ್ಯಕಲಾವಿದ ಮಂಜು ಪಾವಗಡ್ ಟ್ರೋಫಿ ಗೆದ್ದಿದ್ದು, ಈ ಗೆಲುವಿನ ಜೊತೆ ಮಂಜುಗೆ ಹೋದಲ್ಲಿ ಬಂದಲ್ಲಿ ಎಲ್ಲ ಮದ್ವೆ ಯಾವಾಗ ಅನ್ನೋ ಪ್ರಶ್ನೆಯೇ ಎದುರಾಗ್ತಿದ್ದು, ಅದಕ್ಕೆ ಸ್ವತಃ ಮಂಜು ಉತ್ತರ ನೀಡಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ದಿವ್ಯ ಸುರೇಶ್ ಜೊತೆ ತುಂಬಾ ಕ್ಲೋಸ್ ಆಗಿದ್ದ ಮಂಜು ಬಿಗ್ ಬಾಸ್ ಟ್ರೋಫಿ ಗೆದ್ದು ಹೊರಬರುತ್ತಿದ್ದಂತೆ ದಿವ್ಯ ಸುರೇಶ್ ಜೊತೆನೇ ಮದುವೆಯಾಗ್ತಾರೆ ಅಂತ ನೀರಿಕ್ಷಿಸಲಾಗುತ್ತಿತ್ತು. ‘

ಹೀಗಾಗಿ ಟ್ರೋಫಿ ಹಿಡಿದು ಹೊರಬಂದ ಮಂಜುಗೇ ಎಲ್ಲೆಡೆ ಇದೇ ಪ್ರಶ್ನೆ ಎದುರಾಗಿದೆ. ಆದರೆ ಮಂಜು ಇನ್ ಸ್ಟಾಗ್ರಾಂ ಲೈವ್ ನಲ್ಲಿ ಈ ಬಗ್ಗೆ ಮಾತನಾಡಿದ್ದು, ಒಳ್ಳೆ ಹುಡುಗಿ ಸಿಕ್ಕ ತಕ್ಷಣ ಮದುವೆಯಾಗ್ತೀನಿ ಎಂದಿದ್ದಾರೆ.

ಆದರೆ ದಿವ್ಯ ಸುರೇಶ್ ಜೊತೆ ಮದುವೆಯಾಗೋ ವಿಚಾರದ ಬಗ್ಗೆ ಮಂಜು ಎಲ್ಲೂ ಪ್ರಸ್ತಾಪ ಮಾಡಿಲ್ಲ. ನಗು-ನಗುತ್ತ ತಮಾಷೆಯಾಗೇ ಲೈವ್ ನಲ್ಲಿ ಮಾತನಾಡಿದ ಮಂಜು ಎಲ್ಲರೂ ಮದುವೆ ಯಾವಾಗ ಅಂತ ಕೇಳ್ತಿದ್ದೀರಿ, ನಿಮ್ಮ ಕಡೆ ಒಳ್ಳೆ ಹುಡುಗಿ ಇದ್ರೇ ಹೇಳಿ ಅಂತ ಪ್ರೇಕ್ಷಕರ ಕಾಲೆಳೆದಿದ್ದಾರೆ.

ಬಿಗ್ ಬಾಸ್ ಮನೆಯೊಗಳಗಿನ ಎಲ್ಲ ಸ್ಪರ್ಧಿಗಳ ಕುರಿತು ಒಳ್ಳೆಯ ಮಾತುಗಳನ್ನಾಡಿದ ಮಂಜು, ಸುದೀಪ್ ಸರ್ ನನ್ನನ್ನು ಮಂಜಣ್ಣಾ ಎಂದು ಕರೆಯುತ್ತಿದ್ದರು.ಅದೇ ನನಗೆ ಅತ್ಯಂತ ಸಂತೋಷ ತರುವ ಸಂಗತಿ ಎಂದಿದ್ದಾರೆ.

Comments are closed.