ಮುಂಬೈ : ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂದ್ರೇ ಹುಡುಗೀರ ಪಾಲಿನ ಡ್ರೀಮ್ ಬಾಯ್. ಅದರಲ್ಲೂ ವಿರಾಟ್ ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇನ್ಸ್ಟಾಗ್ರಾಮ್ನಲ್ಲಿ ಕೋಟ್ಯಂತರ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಕೊಯ್ಲಿ ಫ್ಯಾಷನ್, ಲುಕ್ ಇಷ್ಟವಾಗುತ್ತೆ. ಆದ್ರೀಗ ನಟಿಯೋರ್ವಳ ಕೊಯ್ಲಿ ಮನಗೆದ್ದಿದ್ದು, ವಿರಾಟ್ ಮೇಲಿನ ಪ್ರೀತಿಯನ್ನು ನಟಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ಗುರುತಿಸಿ ಕೊಂಡಿರುವ ಮೃಣಾಲ್ ಠಾಕೂರ್ ಅಚ್ಚರಿಯ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತನಗೆ ರಾಟ್ ಕೊಹ್ಲಿ ಮೇಲಿದ್ದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ನಿಮ್ಮ ಮಗುವಿನ ತಂದೆ ಯಾರು? ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ಗೆ ಎದುರಾಯ್ತು ಮುಜುಗರ ತರುವ ಪ್ರಶ್ನೆ
ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಮೃಣಾಲ್ ಅವರಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಕೊಹ್ಲಿ ಕಂಡರೆ ಅವರಿಗೆ ಅಚ್ಚುಮೆಚ್ಚು. ನನಗೆ ವಿರಾಟ್ ಮೇಲೆ ಹುಚ್ಚು ಪ್ರೀತಿ ಇತ್ತು. ನನ್ನ ಸಹೋದರನ ಜತೆ ಕ್ರಿಕೆಟ್ ನೋಡೋಕೆ ಸ್ಟೇಡಿಯಮ್ಗೆ ಹೋಗುತ್ತಿದ್ದೆ’ ಎಂದಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಅಭಿಮಾನಿಗಳಿಗೆ ಧಮಾಕಾ: ಗೌರಿ-ಗಣೇಶ್ ಹಬ್ಬಕ್ಕೆ ಬರಲಿದೆ ಅಣ್ಣಾತ್ತೆ ಫರ್ಸ್ಟ್ ಲುಕ್
ತೆಲುಗಿನ ‘ಜೆರ್ಸಿ’ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಶಾಹಿದ್ ಕಪೂರ್ ಸಿನಿಮಾದ ಹೀರೋ. ಈ ಚಿತ್ರಕ್ಕೆ ಮೃಣಾಲ್ ನಾಯಕಿ. ಈ ಬಗ್ಗೆಯೂ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ಸ್ಟೇಡಿಯಮ್ನಲ್ಲಿ ನಿಂತು ಕ್ರಿಕೆಟ್ ನೋಡೋದು ಖುಷಿಯ ವಿಚಾರವಾಗಿತ್ತು. ಕ್ರಿಕೆಟ್ ಎಂದರೆ ಎಲ್ಲಿಲ್ಲದ ಪ್ರೀತಿ ಆಗಿತ್ತು. ಈಗ ಕ್ರಿಕೆಟ್ನ ಕಥೆ ಹೊಂದಿರುವ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ’ ಎಂದಿದ್ದಾರೆ ಮೃಣಾಲ್.
(Actress says I have a mad love for Virat! )